कर्नाटकात नव्या राजकीय पर्वाची नांदी; डी. के. शिवकुमार मुख्यमंत्रीपदी, सतीश जारकीहोळींना मंत्रिमंडळात स्थान.
बेंगळुरू : कर्नाटकच्या राजकारणात आज ऐतिहासिक घडामोड घडली असून काँग्रेसचे ज्येष्ठ नेते डी. के शिवकुमार यांनी राज्याच्या मुख्यमंत्रीपदाची शपथ घेत नव्या नेतृत्वाची सूत्रे हाती घेतली. बेंगळुरू येथील लोकभवनातील ग्लास हाऊस परिसरात बुधवारी पार पडलेल्या दिमाखदार शपथविधी सोहळ्यात राज्यपाल थावरचंद गेहलोत यांनी शिवकुमार यांना पद व गोपनीयतेची शपथ दिली. काँग्रेस विधिमंडळ पक्षाच्या नेतेपदी निवड झाल्यानंतर शिवकुमार यांनी राज्याचे नवे मुख्यमंत्री म्हणून कार्यभार स्वीकारला.
मुख्यमंत्रीपदाच्या शपथविधीसोबतच काँग्रेसचे ज्येष्ठ नेते जी परमेश्वर यांनी उपमुख्यमंत्रीपदाची शपथ घेतली. नव्या मंत्रिमंडळात राज्यातील विविध भागांचे प्रतिनिधित्व करण्याचा प्रयत्न करण्यात आला असून एकूण बारा आमदारांनी मंत्री म्हणून शपथ घेतली.
बेळगाव जिल्ह्यासाठी विशेष महत्त्वाची बाब म्हणजे जिल्ह्यातून ज्येष्ठ काँग्रेस नेते सतीश जारकीहोळी यांनाच मंत्रिमंडळात स्थान मिळाले आहे. त्यामुळे उत्तर कर्नाटकातील विशेषतः बेळगाव जिल्ह्याच्या विकासाच्या अपेक्षा पुन्हा एकदा उंचावल्या आहेत. जारकीहोळी यांच्याकडे महत्त्वाचे खाते सोपविले जाण्याची शक्यता राजकीय वर्तुळात व्यक्त होत आहे.
नव्या मंत्रिमंडळात सतीश जारकीहोळी यांच्यासह के. जे. जॉर्ज, एम. बी. पाटील, के. एच. मुनियप्पा, रामलिंगा रेड्डी, कृष्णा बायरे गौडा, प्रियांक खर्गे, यू. टी. खादर, ईश्वर खंड्रे, यतींद्र सिद्धरामय्या, बैराठी सुरेश आणि शरणप्रकाश पाटील.
यांनी मंत्रीपदाची शपथ घेतली.
या बहुप्रतीक्षित सोहळ्यासाठी राजधानी बेंगळुरूमध्ये कडेकोट सुरक्षा व्यवस्था तैनात करण्यात आली होती. राज्यभरातील काँग्रेस कार्यकर्त्यांनी मोठ्या संख्येने उपस्थिती लावत नव्या नेतृत्वाचे स्वागत केले. कार्यक्रमाला काँग्रेस अध्यक्ष मल्लिकार्जुन खरगे, लोकसभेतील विरोधी पक्षनेते राहुल गांधी, के सी वेणुगोपाल सुशील कुमार शिंदे यांच्यासह पक्षातील अनेक राष्ट्रीय नेते उपस्थित होते.
काँग्रेस पक्षातील नेतृत्वबदलाच्या प्रक्रियेनंतर डी. के. शिवकुमार यांच्या नेतृत्वाखाली राज्यात विकास, पायाभूत सुविधा, उद्योग गुंतवणूक आणि ग्रामीण भागातील योजनांना अधिक गती मिळेल, अशी अपेक्षा व्यक्त केली जात आहे. आगामी काळात खातेवाटप आणि मंत्रिमंडळाचा विस्तार याकडे संपूर्ण राज्याचे लक्ष लागले आहे.
“डी. के. शिवकुमार यांच्या नेतृत्वाखालील नव्या सरकारकडून जनतेच्या अपेक्षा वाढल्या असून, बेळगाव जिल्ह्याचे प्रतिनिधित्व करणारे सतीश जारकीहोळी यांची भूमिका आगामी काळात निर्णायक ठरणार आहे.”
ಕರ್ನಾಟಕದಲ್ಲಿ ಹೊಸ ರಾಜಕೀಯ ಯುಗದ ಆರಂಭ; ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ, ಸತೀಶ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಬೆಂಗಳೂರು : ಕರ್ನಾಟಕದ ರಾಜಕೀಯದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ನ ಹಿರಿಯ ನಾಯಕ ಡಿ. ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹೊಸ ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್ ಆವರಣದಲ್ಲಿ ಬುಧವಾರ ನಡೆದ ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರು ಶಿವಕುಮಾರ್ ಅವರಿಗೆ ಹುದ್ದೆ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಕಾಂಗ್ರೆಸ್ ವಿಧಾನಮಂಡಲ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಮುಖ್ಯಮಂತ್ರಿಯವರ ಪ್ರಮಾಣವಚನದೊಂದಿಗೆ ಕಾಂಗ್ರೆಸ್ನ ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸ ಸಚಿವ ಸಂಪುಟದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಪ್ರತಿನಿಧಿತ್ವ ನೀಡುವ ಪ್ರಯತ್ನ ಮಾಡಲಾಗಿದ್ದು, ಒಟ್ಟು ಹನ್ನೆರಡು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬೆಳಗಾವಿ ಜಿಲ್ಲೆಗೆ ವಿಶೇಷ ಮಹತ್ವ ವೆಂದರೆ, ಜಿಲ್ಲೆಯಿಂದ ಕಾಂಗ್ರೆಸ್ನ ಹಿರಿಯ ನಾಯಕ ಸತೀಶ ಜಾರಕಿಹೊಳಿ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ . ಇದರಿಂದ ಉತ್ತರ ಕರ್ನಾಟಕದ, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯ ನಿರೀಕ್ಷೆಗಳು ಮತ್ತೊಮ್ಮೆ ಹೆಚ್ಚಾಗಿವೆ. ಜಾರಕಿಹೊಳಿ ಅವರಿಗೆ ಮಹತ್ವದ ಖಾತೆ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹೊಸ ಸಚಿವ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಅವರೊಂದಿಗೆ ಕೆ. ಜೆ. ಜಾರ್ಜ್, ಎಂ. ಬಿ. ಪಾಟೀಲ, ಕೆ. ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು. ಟಿ. ಖಾದರ್, ಈಶ್ವರ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಹಾಗೂ ಶರಣಪ್ರಕಾಶ ಪಾಟೀಲ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಬಹು ನಿರೀಕ್ಷಿತ ಸಮಾರಂಭಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಹೊಸ ನಾಯಕತ್ವವನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೆ. ಸಿ. ವೇಣುಗೋಪಾಲ್, ಸುಶೀಲ್ ಕುಮಾರ್ ಶಿಂದೆ ಸೇರಿದಂತೆ ಪಕ್ಷದ ಅನೇಕ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆಯ ನಂತರ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಕೈಗಾರಿಕಾ ಹೂಡಿಕೆ ಹಾಗೂ ಗ್ರಾಮೀಣ ಪ್ರದೇಶಗಳ ಯೋಜನೆಗಳಿಗೆ ಹೆಚ್ಚಿನ ವೇಗ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಖಾತೆ ಹಂಚಿಕೆ ಹಾಗೂ ಸಚಿವ ಸಂಪುಟದ ವಿಸ್ತರಣೆಯತ್ತ ಇಡೀ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.
“ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಹೊಸ ಸರ್ಕಾರದಿಂದ ಜನರ ನಿರೀಕ್ಷೆಗಳು ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಪ್ರತಿನಿಧಿಯಾಗಿರುವ ಸತೀಶ ಜಾರಕಿಹೊಳಿ ಅವರ ಪಾತ್ರ ಮುಂದಿನ ದಿನಗಳಲ್ಲಿ ನಿರ್ಣಾಯಕವಾಗಲಿದೆ.”ಎಂದು ಅಂದಾಜಿಸಲಾಗಿದೆ.


