कावेरी पाणीप्रश्नी कर्नाटक बंद; बेळगावात कडक पोलीस बंदोबस्त, लोटांगण घालत आंदोलन.
बेळगाव : तामिळनाडूला कावेरी नदीचे पाणी सोडू नये, या मागणीसाठी कन्नड संघटनांनी पुकारलेल्या कर्नाटक बंदच्या पार्श्वभूमीवर बेळगाव शहरात कडक पोलीस बंदोबस्त ठेवण्यात आला होता. शहरातील बसस्थानकांसह प्रमुख चौक आणि संवेदनशील ठिकाणी मोठ्या प्रमाणात पोलीस तैनात करण्यात आले होते.
तामिळनाडूला कावेरीचे पाणी सोडण्याचा न्यायालयीन आदेश झाल्याने कन्नड संघटनांनी या निर्णयाला तीव्र विरोध दर्शविला आहे. कोणत्याही परिस्थितीत तामिळनाडूला पाणी सोडू नये, अशी भूमिका घेत संघटनांनी कर्नाटक बंदची हाक दिली होती.
बेळगावात सकाळपासूनच पोलीस बंदोबस्तात बससेवा सुरू ठेवण्यात आली होती. दरम्यान, वीरराणी कित्तूर चन्नम्मा चौकात कन्नड संघटनांच्या कार्यकर्त्यांनी रास्ता रोको आंदोलन केले. यावेळी कार्यकर्त्यांनी रस्त्यावर लोटांगण घालत सरकार आणि न्यायालयाच्या निर्णयाविरोधात निषेध व्यक्त केला.
आंदोलनामुळे काही काळ वाहतुकीवर परिणाम झाला. पोलिसांनी घटनास्थळी हस्तक्षेप करून आंदोलकांना बाजूला केले आणि वाहतूक सुरळीत केली. बंदच्या पार्श्वभूमीवर शहरात कोणताही अनुचित प्रकार घडू नये यासाठी पोलिसांकडून दिवसभर कडेकोट बंदोबस्त ठेवण्यात आला.
ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದೆಂದು ಕರ್ನಾಟಕ ಬಂದ್; ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಲೋಟಾಂಗಣ ಹಾಕಿ ಪ್ರತಿಭಟನೆ.
ಬೆಳಗಾವಿ : ಕಾವೇರಿ ನದಿಯ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂಬ ಬೇಡಿಕೆಗೆ ಆಗ್ರಹಿಸಿ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ನ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಈ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂಬ ನಿಲುವನ್ನು ಕನ್ನಡ ಸಂಘಟನೆಗಳು ತಳೆದಿದ್ದು, ಇದಕ್ಕಾಗಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು.
ಬೆಳಗಾವಿಯಲ್ಲಿ ಬೆಳಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ್ನಲ್ಲಿ ಬಸ್ ಸೇವೆಗಳನ್ನು ಆರಂಭಿಸಲಾಗಿತ್ತು. ಈ ನಡುವೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ರಸ್ತೆಯ ಮೇಲೆ ಲೋಟಾಂಗಣ ಹಾಕಿ ಸರ್ಕಾರ ಹಾಗೂ ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ರಸ್ತೆಯಿಂದ ಬದಿಗೆ ಸರಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಬಂದ್ನ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ದಿನವಿಡೀ ಬಿಗಿ ಬಂದೋಬಸ್ತ್ ಮುಂದುವರಿಸಿದ್ದರು.



