
कार आणि बसच्या अपघातात, कारमधील चौघेजण जागीच ठार.
गदग : गदग जिल्ह्यातील नरगुंद तालुक्यातील कोन्नूर येथे, केएसआरटीसी परिवहन मंडळाची बस आणि कार यांच्यात भीषण अपघात झाला असून, या अपघातात हावेरी येथील एकाच कुटुंबातील चौघांचा जागीच मृत्यू झाला असल्याची माहिती माहिती मीळाली आहे. रुद्रप्पा अंगडी (वय55), त्याची पत्नी राजेश्वरी (वय 45), मुलगी ऐश्वर्या (वय16) आणि मुलगा विजय (वय 12) अशी अपघातात मृत पावलेल्या लोकांची नावे आहेत.
हे कुटुंब कल्लापुर बसवेश्वर मंदिराकडे कारने जात असताना, बागलकोट जिल्ह्यातील इलकल येथून हुबळीकडे येणाऱ्या परिवहन मंडळाच्या बसला धडक बसल्याने, ही दुर्घटना घडली आहे. ही घटना नरगुंद पोलीस ठाण्याच्या हद्दीत घडली आहे. याबाबत पुढील तपास नरगुंद पोलीस करीत आहेत.
ಕಾರು ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.
ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಹಾವೇರಿಯ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ರುದ್ರಪ್ಪ ಅಂಗಡಿ (ವಯಸ್ಸು 55), ಅವರ ಪತ್ನಿ ರಾಜೇಶ್ವರಿ (ವಯಸ್ಸು 45), ಪುತ್ರಿ ಐಶ್ವರ್ಯ (16 ವರ್ಷ) ಹಾಗೂ ಪುತ್ರ ವಿಜಯ್ (12 ವರ್ಷ) ಎಂದು ಗುರುತಿಸಲಾಗಿದೆ.
ಕುಟುಂಬ ಸಮೇತರಾಗಿ ಕಲ್ಲಾಪುರ ಬಸವೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಬಾಗಲಕೋಟೆ ಜಿಲ್ಲೆಯ ಇಳಕಲ್ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ನರಗುಂದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
