सुरल (सुर्ल)धबधब्यात बुडालेल्या बेळगावच्या तरुणाचा मृतदेह अखेर सापडला; बेळगावच्या रेस्क्यू पथकाच्या अथक प्रयत्नांना यश.
खानापूर : प्रतिनिधी
गोव्यातील सत्तरी तालुक्यातील सुरल (सुर्ल) धबधब्यात बुडालेल्या बेळगावच्या 20 वर्षीय तरुणाचा मृतदेह सोमवारी अखेर बाहेर काढण्यात आला. मुसळधार पाऊस, प्रचंड पाण्याचा प्रवाह आणि दुर्गम परिसरामुळे बचावकार्याला मोठ्या अडचणींचा सामना करावा लागला. अखेर बेळगावातील सामाजिक कार्यकर्ते व रेस्क्यू पथकातील कार्यकर्ते अवधूत तुडवेकर, पदमप्रसाद हुली, विक्की मेहता, शुभम हुली, मायकल पिंटो, रोशन तनावडे आणि आकाश यांच्या अथक प्रयत्नांमुळे मृतदेहाचा शोध घेण्यात यश आले.
मृत तरुणाची ओळख आदित्य दीपककुमार सत्पती (वय 20) अशी झाली असून तो मित्रांसोबत सहलीसाठी सुरल धबधब्यावर गेला होता. म्हादई अभयारण्य परिसरातील निसर्गरम्य धबधबा पाहताना त्याने पाण्यात प्रवेश केला. मात्र पाण्याची खोली आणि वेगवान प्रवाहाचा अंदाज न आल्याने तो खोल पाण्यात बुडाला. त्याच्या मित्रांनी तातडीने बचावाचा प्रयत्न केला, परंतु तो निष्फळ ठरला.
घटनेची माहिती मिळताच वाळपई पोलीस, म्हादई अभयारण्याचे कर्मचारी तसेच अग्निशमन दलाचे जवान घटनास्थळी दाखल झाले. रविवारी सायंकाळपर्यंत शोधमोहीम सुरू होती. मात्र मुसळधार पाऊस, वाढलेला पाण्याचा प्रवाह आणि प्रतिकूल भौगोलिक परिस्थितीमुळे रात्री शोधकार्य स्थगित करण्यात आले.
सोमवारी 29 जून रोजी सकाळी पुन्हा शोधमोहीम हाती घेण्यात आली. बेळगाव येथील सामाजिक कार्यकर्ते व रेस्क्यू पथकाने स्थानिक यंत्रणांच्या सहकार्याने अथक प्रयत्न करत अखेर आदित्यचा मृतदेह बाहेर काढला. अनेक तास मृतदेह पाण्यात राहिल्याने व माशांमुळे त्याचा चेहरा विद्रूप झाला आहे.
या बचाव मोहिमेत सामाजिक कार्यकर्ते अवधूत तुडवेकर, पदमप्रसाद हुली, विक्की मेहता, शुभम हुली, मायकल पिंटो, रोशन तनावडे आणि आकाश यांनी महत्त्वाची भूमिका बजावली. त्यांच्या धाडसी प्रयत्नांमुळे मृतदेह बाहेर काढणे शक्य झाले.
पोलिसांनी घटनास्थळी पंचनामा व इतर कायदेशीर प्रक्रिया पूर्ण करून मृतदेह नातेवाईकांच्या ताब्यात दिला. या घटनेमुळे बेळगावसह परिसरात हळहळ व्यक्त होत आहे.
आदित्य हा मूळचा ओडिशा राज्यातील रहिवासी असून त्याचे कुटुंब सध्या बेळगाव येथे वास्तव्यास आहे. त्याचे वडील दीपककुमार सत्पती हे भारतीय नौदलातून निवृत्त झालेले अधिकारी आहेत. तरुणाच्या दुर्दैवी निधनाने कुटुंबीयांवर दुःखाचा डोंगर कोसळला असून मित्रपरिवारात शोककळा पसरली आहे.
ಸುರಲ ಜಲಪಾತದಲ್ಲಿ ಮುಳುಗಿದ್ದ ಬೆಳಗಾವಿಯ ಯುವಕನ ಮೃತದೇಹ ಕೊನೆಗೂ ಪತ್ತೆ; ಬೆಳಗಾವಿ ರೆಸ್ಕ್ಯೂ ತಂಡದ ಅವಿರತ ಪ್ರಯತ್ನಕ್ಕೆ ಯಶಸ್ಸು
ಖಾನಾಪುರ : ಪ್ರತಿನಿಧಿ
ಗೋವಾದ ಸತ್ತಾರಿ ತಾಲೂಕಿನ ಸುರಲ ಜಲಪಾತದಲ್ಲಿ ಮುಳುಗಿದ್ದ ಬೆಳಗಾವಿಯ 20 ವರ್ಷದ ಯುವಕನ ಮೃತದೇಹ ಸೋಮವಾರ ಕೊನೆಗೂ ಹೊರತೆಗೆದುಕೊಳ್ಳಲಾಯಿತು. ಭಾರೀ ಮಳೆ, ಪ್ರಬಲ ನೀರಿನ ಹರಿವು ಹಾಗೂ ದುರ್ಗಮ ಪ್ರದೇಶದ ಕಾರಣದಿಂದ ರಕ್ಷಣಾ ಕಾರ್ಯಕ್ಕೆ ಭಾರೀ ಅಡಚಣೆಗಳು ಎದುರಾದರು ಕೊನೆಗೆ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತರು ಹಾಗೂ ರೆಸ್ಕ್ಯೂ ತಂಡದ ಸದಸ್ಯರಾದ ಅವಧೂತ ತುಡವೆಕರ, ಪದ್ಮಪ್ರಸಾದ್ ಹುಲಿ, ವಿಕ್ಕಿ ಮೆಹತಾ, ಶುಭಂ ಹುಲಿ, ಮೈಕಲ್ ಪಿಂಟೋ, ರೋಶನ್ ತನಾವಡೆ ಹಾಗೂ ಆಕಾಶ ಅವರ ಅವಿರತ ಪ್ರಯತ್ನದಿಂದ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ಸು ದೊರೆಯಿತು.
ಮೃತ ಯುವಕನನ್ನು ಆದಿತ್ಯ ದೀಪಕ್ ಕುಮಾರ್ ಸತ್ಪತಿ (20) ಎಂದು ಗುರುತಿಸಲಾಗಿದೆ. ಆತ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಸುರಲ ಜಲಪಾತಕ್ಕೆ ತೆರಳಿದ್ದನು. ಮಹಾದಾಯಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಈ ನಿಸರ್ಗರಮ್ಯ ಜಲಪಾತವನ್ನು ವೀಕ್ಷಿಸುವ ವೇಳೆ ಆತ ನೀರಿಗೆ ಇಳಿದಿದ್ದನು. ಆದರೆ ನೀರಿನ ಆಳ ಹಾಗೂ ವೇಗವಾದ ಹರಿವಿನ ಅಂದಾಜು ಬರದ ಕಾರಣ ಆತ ಆಳವಾದ ನೀರಿನಲ್ಲಿ ಮುಳುಗಿದ್ದನು. ಅವನ ಸ್ನೇಹಿತರು ತಕ್ಷಣವೇ ರಕ್ಷಿಸಲು ಪ್ರಯತ್ನಿಸಿದರೂ ಅದು ವಿಫಲವಾಯಿತು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಾಲ್ಪೊಯಿ ಪೊಲೀಸರು, ಮಹಾದಾಯಿ ಅಭಯಾರಣ್ಯದ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಭಾನುವಾರ ಸಂಜೆವರೆಗೂ ಶೋಧ ಕಾರ್ಯ ಮುಂದುವರಿದಿತ್ತು. ಆದರೆ ಭಾರೀ ಮಳೆ, ಹೆಚ್ಚಿದ ನೀರಿನ ಹರಿವು ಹಾಗೂ ಪ್ರತಿಕೂಲ ಭೌಗೋಳಿಕ ಪರಿಸ್ಥಿತಿಯಿಂದ ರಾತ್ರಿ ವೇಳೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಸೋಮವಾರ, ಜೂನ್ 29ರಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಲಾಯಿತು. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತರು ಹಾಗೂ ರೆಸ್ಕ್ಯೂ ತಂಡವು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ನಿರಂತರ ಪ್ರಯತ್ನ ನಡೆಸಿ ಕೊನೆಗೂ ಆದಿತ್ಯನ ಮೃತದೇಹವನ್ನು ಹೊರತೆಗೆದರು. ಹಲವು ಗಂಟೆಗಳ ಕಾಲ ಮೃತದೇಹ ನೀರಿನಲ್ಲಿದ್ದ ಕಾರಣ ಹಾಗೂ ಮೀನುಗಳು ಕಚ್ಚಿದ್ದರಿಂದ ಆತನ ಮುಖ ವಿರೂಪಗೊಂಡಿರುವುದಾಗಿ ತಿಳಿದುಬಂದಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅವಧೂತ ತುಡವೆಕರ, ಪದ್ಮಪ್ರಸಾದ್ ಹುಲಿ, ವಿಕ್ಕಿ ಮೆಹತಾ, ಶುಭಂ ಹುಲಿ, ಮೈಕಲ್ ಪಿಂಟೋ, ರೋಶನ್ ತನಾವಡೆ ಹಾಗೂ ಆಕಾಶ ಅವರು ಮಹತ್ವದ ಪಾತ್ರವಹಿಸಿದ್ದರು. ಅವರ ಧೈರ್ಯಶಾಲಿ ಹಾಗೂ ಅವಿರತ ಪ್ರಯತ್ನದಿಂದಲೇ ಮೃತದೇಹವನ್ನು ಹೊರತೆಗೆದು ಸಾಧ್ಯವಾಯಿತು.
ಪೊಲೀಸರು ಸ್ಥಳದಲ್ಲಿ ಪಂಚನಾಮೆ ಹಾಗೂ ಇತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಿದರು. ಈ ದುರ್ಘಟನೆಯಿಂದ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.
ಆದಿತ್ಯ ಮೂಲತಃ ಒಡಿಶಾ ರಾಜ್ಯದ ನಿವಾಸಿಯಾಗಿದ್ದು, ಅವರ ಕುಟುಂಬವು ಪ್ರಸ್ತುತ ಬೆಳಗಾವಿಯಲ್ಲಿ ವಾಸವಾಗಿತ್ತು. ಅವರ ತಂದೆ ದೀಪಕ್ ಕುಮಾರ್ ಸತ್ಪತಿ ಅವರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಯುವಕನ ಅಕಾಲಿಕ ನಿಧನದಿಂದ ಕುಟುಂಬದ ಮೇಲೆ ದುಃಖದ ಛಾಯೆ ಆವರಿಸಿದ್ದು, ಸ್ನೇಹಿತರ ವಲಯದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ.


