जांबोटी येथे 65 लाखांच्या ‘आयुष्मान आरोग्य मंदिरा’चे आमदार हलगेकर यांच्या हस्ते भूमिपूजन;ग्रामीण जनतेला मिळणार आधुनिक आरोग्य सुविधा.
खानापूर : पवित्र श्रावण महिन्यातील अंतिम सोमवारचे औचित्य साधत जांबोटी (ता. खानापूर) येथे नव्या ‘आयुष्मान आरोग्य मंदिर’च्या दुमजली इमारतीचा भूमिपूजन सोहळा खानापूर मतदारसंघाचे आमदार श्री. विठ्ठलराव सोमण्णा हलगेकर यांच्या शुभहस्ते उत्साहपूर्ण वातावरणात पार पडला. यावेळी तालुका आरोग्य अधिकारी महेश कीडसन्नावर यांच्यासह आरोग्य विभागाचे अधिकारी, भाजप पदाधिकारी, स्थानिक नेते आणि ग्रामस्थ मोठ्या संख्येने उपस्थित होते.
केंद्र व राज्य सरकारच्या 15 व्या वित्त आयोगाच्या आरोग्य योजनेतून सुमारे 65 लाख रुपये खर्च करून ही सुसज्ज दुमजली इमारत उभारली जाणार आहे. ग्रामीण भागातील नागरिकांना त्यांच्या गावाजवळच प्राथमिक आणि आवश्यक आरोग्य सेवा उपलब्ध करून देणे, हा या प्रकल्पामागील प्रमुख उद्देश आहे.
तळमजल्यावर आरोग्य केंद्र, वरच्या मजल्यावर कर्मचाऱ्यांसाठी निवास…
प्रस्तावित इमारतीच्या तळमजल्यावर अत्याधुनिक सुविधांनी युक्त आरोग्य केंद्र व दवाखाना उभारण्यात येणार आहे. तर पहिल्या मजल्यावर आरोग्य विभागातील नर्स व इतर कर्मचाऱ्यांच्या निवासाची व्यवस्था केली जाणार आहे. त्यामुळे आरोग्य कर्मचाऱ्यांची गावात उपलब्धता वाढून नागरिकांना वेळेवर वैद्यकीय सेवा मिळण्यास मदत होणार आहे.
खानापूर तालुक्यात सात आयुष्मान आरोग्य मंदिरांना मंजुरी…
यावेळी बोलताना आमदार विठ्ठलराव हलगेकर यांनी सांगितले की, खानापूर तालुक्यातील ग्रामीण आरोग्य व्यवस्था अधिक सक्षम करण्याच्या दृष्टीने पहिल्या टप्प्यात सात आयुष्मान आरोग्य मंदिरांना मंजुरी मिळाली आहे. यामध्ये मोदेकोप, जांबोटी, कुंभार्डा, चापोली, तोलगी आणि गंदीगवाड यांचा समावेश असून, अन्य मंजूर ठिकाणीही कामे पुढे नेण्यात येणार असल्याचे त्यांनी सांगितले.
गावातील नागरिकांना किरकोळ आजारांपासून विविध प्राथमिक आरोग्य सेवांसाठी दूरच्या शहरांमध्ये किंवा तालुक्याच्या ठिकाणी धाव घ्यावी लागू नये, तसेच ग्रामीण भागातच आरोग्य सुविधांचे जाळे मजबूत व्हावे, यासाठी शासनाकडून ही कामे हाती घेण्यात आल्याचे त्यांनी स्पष्ट केले.
बांधकामात तडजोड नको; गुणवत्तेला सर्वोच्च प्राधान्य…
इमारतीच्या बांधकामाबाबत आमदार हलगेकर यांनी संबंधित अधिकारी आणि कंत्राटदारांना स्पष्ट सूचना दिल्या. शासकीय निधीतून उभारण्यात येणारी इमारत दर्जेदार, मजबूत आणि दीर्घकाळ टिकणारी असावी, यासाठी बांधकामाच्या प्रत्येक टप्प्यावर गुणवत्तेची काळजी घेण्याचे निर्देश त्यांनी दिले.
कंत्राटदार श्री. मंजुनाथ बंदीवड्डर तसेच संबंधित अधिकाऱ्यांनी कामाच्या दर्जाबाबत विशेष दक्षता घ्यावी, अशा सूचना आमदारांनी यावेळी केल्या. नागरिकांच्या पैशातून होणाऱ्या विकासकामांचा उपयोग अनेक वर्षे जनतेला झाला पाहिजे, यावर त्यांनी भर दिला.
मान्यवरांची उपस्थिती…
भूमिपूजन कार्यक्रमास भाजपा जिल्हा सरचिटणीस सौ. धनश्री सरदेसाई, तालुका सरचिटणीस श्री. मल्लाप्पा मारीहाळ, भाजप नेते श्री. दत्ता कदम, दौलत कोलीकर, पवन गायकवाड, संजय पाटील, सुनील देसाई, शंकर गावडे, कृष्णा भरणकर, मंजुनाथ मुतगी, प्रभाकर शेंगाळे, मनोहर साखळकर, सुरेश बिर्जे यांच्यासह कंत्राटदार, आरोग्य विभागातील अधिकारी-कर्मचारी आणि जांबोटी परिसरातील ग्रामस्थ मोठ्या संख्येने उपस्थित होते.
जांबोटी येथे साकारत असलेले हे आयुष्मान आरोग्य मंदिर पूर्ण झाल्यानंतर परिसरातील नागरिकांना अधिक सुलभ, तत्पर आणि दर्जेदार प्राथमिक आरोग्य सेवा मिळण्याचा मार्ग मोकळा होणार आहे.
ಜಾಂಬೋಟಿಯಲ್ಲಿ ₹65 ಲಕ್ಷ ಮೌಲ್ಯದ ‘ಆಯುಷ್ಮಾನ್ ಆರೋಗ್ಯ ಮಂದಿರ’ಕ್ಕೆ ಜನ ಪ್ರಿಯ ಶಾಸಕ ಹಲಗೇಕರ ಅವರಿಂದ ಭೂಮಿಪೂಜೆ; ಗ್ರಾಮೀಣ ಜನತೆಗೆ ದೊರೆಯಲಿದೆ ಆಧುನಿಕ ಆರೋಗ್ಯ ಸೌಲಭ್ಯ.
ಖಾನಾಪುರ : ಪವಿತ್ರ ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಜಾಂಬೋಟಿ (ತಾ. ಖಾನಾಪುರ) ದಲ್ಲಿ ನೂತನ ‘ಆಯುಷ್ಮಾನ್ ಆರೋಗ್ಯ ಮಂದಿರ’ದ ಎರಡು ಅಂತಸ್ತಿನ ಕಟ್ಟಡದ ಭೂಮಿಪೂಜೆ ಸಮಾರಂಭ ಖಾನಾಪುರ ಮತಕ್ಷೇತ್ರದ ಜನ ಪ್ರಿಯ ಶಾಸಕ ಶ್ರೀ. ವಿಠ್ಠಲರಾವ್ ಸೋಮಣ್ಣ ಹಲಗೇಕರ ಅವರ ಶುಭಹಸ್ತದಿಂದ ಉತ್ಸಾಹದ ವಾತಾವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಕೀಡಸನ್ನವರ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಬಿಜೆಪಿ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ 15ನೇ ಹಣಕಾಸು ಆಯೋಗದ ಆರೋಗ್ಯ ಯೋಜನೆಯಡಿ ಸುಮಾರು ₹65 ಲಕ್ಷ ವೆಚ್ಚದಲ್ಲಿ ಈ ಸುಸಜ್ಜಿತ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುವುದು. ಗ್ರಾಮೀಣ ಪ್ರದೇಶದ ನಾಗರಿಕರಿಗೆ ತಮ್ಮ ಗ್ರಾಮದಲ್ಲಿಯೇ ಅಥವಾ ಗ್ರಾಮದ ಸಮೀಪದಲ್ಲಿ ಪ್ರಾಥಮಿಕ ಹಾಗೂ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ನೆಲಮಹಡಿಯಲ್ಲಿ ಆರೋಗ್ಯ ಕೇಂದ್ರ, ಮೇಲಂತಸ್ತಿನಲ್ಲಿ ಸಿಬ್ಬಂದಿಗೆ ವಸತಿ…
ಪ್ರಸ್ತಾವಿತ ಕಟ್ಟಡದ ನೆಲಮಹಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆರೋಗ್ಯ ಕೇಂದ್ರ ಹಾಗೂ ಚಿಕಿತ್ಸಾಲಯ ನಿರ್ಮಿಸಲಾಗುವುದು. ಮೊದಲ ಮಹಡಿಯಲ್ಲಿ ಆರೋಗ್ಯ ಇಲಾಖೆಯ ನರ್ಸ್ಗಳು ಹಾಗೂ ಇತರ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಆರೋಗ್ಯ ಸಿಬ್ಬಂದಿಯು ಗ್ರಾಮದಲ್ಲಿಯೇ ಲಭ್ಯವಿರುವ ಪ್ರಮಾಣ ಹೆಚ್ಚಾಗಿ, ನಾಗರಿಕರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೇವೆ ದೊರೆಯಲು ಸಹಕಾರಿಯಾಗಲಿದೆ.
ಖಾನಾಪುರ ತಾಲೂಕಿನಲ್ಲಿ ಏಳು ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಮಂಜೂರಾತಿ…
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ ಅವರು, ಖಾನಾಪುರ ತಾಲೂಕಿನ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಏಳು ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
ಇವುಗಳಲ್ಲಿ ಮೋದೇಕೋಪ, ಜಾಂಬೋಟಿ, ಕುಂಬಾರ್ಡಾ, ಚಾಪೋಲಿ, ತೋಲಗಿ ಮತ್ತು ಗಂದಿಗವಾಡ ಸೇರಿದಂತೆ ಮಂಜೂರಾದ ವಿವಿಧ ಸ್ಥಳಗಳು ಒಳಗೊಂಡಿದ್ದು, ಉಳಿದ ಮಂಜೂರಾದ ಸ್ಥಳಗಳಲ್ಲಿಯೂ ಕಾಮಗಾರಿಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮದ ನಾಗರಿಕರು ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ವಿವಿಧ ಪ್ರಾಥಮಿಕ ಆರೋಗ್ಯ ಸೇವೆಗಳಿಗಾಗಿ ದೂರದ ನಗರಗಳಿಗೆ ಅಥವಾ ತಾಲೂಕು ಕೇಂದ್ರಕ್ಕೆ ತೆರಳುವ ಪರಿಸ್ಥಿತಿ ಎದುರಾಗಬಾರದು. ಗ್ರಾಮೀಣ ಪ್ರದೇಶದಲ್ಲಿಯೇ ಆರೋಗ್ಯ ಸೌಲಭ್ಯಗಳ ಜಾಲವನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ನಿರ್ಮಾಣ ಕಾಮಗಾರಿಯಲ್ಲಿ ರಾಜಿ ಬೇಡ; ಗುಣಮಟ್ಟಕ್ಕೆ ಅತ್ಯುನ್ನತ ಆದ್ಯತೆ…
ಕಟ್ಟಡದ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಶಾಸಕ ಹಲಗೇಕರ ಅವರು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದು.
ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡವು ಗುಣಮಟ್ಟದಿಂದ ಕೂಡಿದ್ದು, ಬಲಿಷ್ಠವಾಗಿರಬೇಕು ಹಾಗೂ ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಇದಕ್ಕಾಗಿ ನಿರ್ಮಾಣ ಕಾಮಗಾರಿಯ ಪ್ರತಿಯೊಂದು ಹಂತದಲ್ಲಿಯೂ ಗುಣಮಟ್ಟಕ್ಕೆ ವಿಶೇಷ ಗಮನ ನೀಡಬೇಕು ಎಂದು ಅವರು ಸೂಚಿಸಿದರು.
ಗುತ್ತಿಗೆದಾರ ಶ್ರೀ. ಮಂಜುನಾಥ ಬಂಡಿವಡ್ಡರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟದ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಹಲಗೇಕರ ಅವರು ಸೂಚಿಸಿದರು. ನಾಗರಿಕರ ಹಣದಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳ ಪ್ರಯೋಜನವು ಹಲವು ವರ್ಷಗಳ ಕಾಲ ಜನತೆಗೆ ದೊರೆಯಬೇಕು ಎಂದು ಅವರು ಒತ್ತಿ ಹೇಳಿದರು.
ಗಣ್ಯರ ಉಪಸ್ಥಿತಿ…
ಭೂಮಿಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನಶ್ರೀ ಸರದೇಶಾಯಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ. ಮಲ್ಲಪ್ಪ ಮಾರಿಹಾಳ, ಬಿಜೆಪಿ ಮುಖಂಡರಾದ ಶ್ರೀ. ದತ್ತಾ ಕದಮ, ದೌಲತ್ ಕೋಳಿಕರ್, ಪವನ್ ಗಾಯಕ್ವಾಡ್, ಸಂಜಯ ಪಾಟೀಲ, ಸುನೀಲ್ ದೇಸಾಯಿ, ಶಂಕರ ಗಾವಡೆ, ಕೃಷ್ಣಾ ಭರಣಕರ್, ಮಂಜುನಾಥ ಮುತಗಿ, ಪ್ರಭಾಕರ ಶೇಂಗಾಳೆ, ಮನೋಹರ ಸಾಖಳಕರ, ಸುರೇಶ್ ಬಿರ್ಜೆ ಸೇರಿದಂತೆ ಗುತ್ತಿಗೆದಾರರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಜಾಂಬೋಟಿ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಜಾಂಬೋಟಿಯಲ್ಲಿ ನಿರ್ಮಾಣವಾಗುತ್ತಿರುವ ಈ ಆಯುಷ್ಮಾನ್ ಆರೋಗ್ಯ ಮಂದಿರ ಪೂರ್ಣಗೊಂಡ ಬಳಿಕ ಸುತ್ತಮುತ್ತಲಿನ ನಾಗರಿಕರಿಗೆ ಹೆಚ್ಚು ಸುಲಭವಾಗಿ, ತ್ವರಿತವಾಗಿ ಹಾಗೂ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಗಳು ದೊರೆಯುವಂತಾಗಲಿದೆ. ಇದರಿಂದ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಗೆ ಮತ್ತಷ್ಟು ಬಲ ದೊರೆಯಲಿದೆ.

