बलोगा–लैला शुगर कारखाना रस्त्याची दुरवस्था; नागरिक, विद्यार्थी व वाहनधारक त्रस्त.
खानापूर : खानापूर तालुक्यातील बलोगा गावाकडून लैला शुगर कारखान्याकडे जाणाऱ्या रस्त्याची मोठ्या प्रमाणात दुरावस्था झाली असून, या रस्त्यावरून ये-जा करणाऱ्या नागरिकांना मोठ्या त्रासाला सामोरे जावे लागत आहे.
रस्त्यावर ठिकठिकाणी खड्डे पडले असून, रस्ता खराब झाल्यामुळे वृद्ध नागरिक, शाळकरी मुले तसेच वाहनधारकांना ये-जा करताना अडचणींचा सामना करावा लागत आहे. विशेषतः दुचाकीस्वारांना खड्ड्यांमुळे अपघाताचा धोका निर्माण झाला आहे.
संबंधित विभागाने या समस्येकडे तातडीने लक्ष देऊन रस्त्याची पाहणी करावी आणि रस्त्याचे काम लवकरात लवकर पूर्ण करून नागरिकांना दिलासा द्यावा, अशी मागणी बलोगा ग्रामस्थांकडून करण्यात येत आहे.
संबंधित अधिकाऱ्यांनी तातडीने दखल घेऊन तात्काळ रस्ता दुरुस्त करून द्यावा, अशी विनंती नागरिकांनी केली आहे.
ಬಲೋಗಾ–ಲೈಲಾ ಶುಗರ ಕಾರ್ಖಾನೆ ರಸ್ತೆಯ ದುಸ್ಥಿತಿ; ನಾಗರಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರ ಪರದಾಟ.
ಖಾನಾಪುರ : ಖಾನಾಪುರ ತಾಲ್ಲೂಕಿನ ಬಲೋಗಾ ಗ್ರಾಮಕ್ಕೆ ಸಂಪರ್ಕ ರಸ್ತೆಯಾದ ಲೈಲಾ ಶುಗರ್ ಕಾರ್ಖಾನೆಗೆ ಕಡೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಬಹಳಷ್ಟು ದುಸ್ಥಿತಿಗೆ ತಲುಪಿದ್ದು, ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಎದುರಿಸುವಂತಾಗಿದೆ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆ ಹದಗೆಟ್ಟಿರುವುದರಿಂದ ವಯೋವೃದ್ಧ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಸಂಚಾರ ಮಾಡುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿರುವ ಗುಂಡಿಗಳಿಂದಾಗಿ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ.
ರಸ್ತೆಯ ದುಸ್ಥಿತಿಯಿಂದಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ-ಕಾರ್ಯಗಳ ನಿಮಿತ್ತ ಸಂಚರಿಸುವ ನಾಗರಿಕರು ಹಾಗೂ ಪ್ರತಿನಿತ್ಯ ಈ ಮಾರ್ಗವನ್ನು ಬಳಸುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಗುಂಡಿಗಳು ಕಾಣಿಸದೆ ವಾಹನ ಸವಾರರಿಗೆ ಮತ್ತಷ್ಟು ಅಪಾಯ ಉಂಟಾಗುವ ಸಾಧ್ಯತೆ ಇದೆ.
ಈ ರಸ್ತೆಯು ಬಲೋಗಾ ಗ್ರಾಮ ಹಾಗೂ ಲೈಲಾ ಶುಗರ್ ಕಾರ್ಖಾನೆಯ ನಡುವೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಹಾಗೂ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆಯ ಸ್ಥಳ ಪರಿಶೀಲನೆ ನಡೆಸಿ, ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು, ಎಂದು ಬಲೋಗಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯತ್ತ ಗಮನಹರಿಸಿ, ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಎಂದು ನಾಗರಿಕರು ಮನವಿ ಮಾಡಿದ್ದಾರೆ.



