
बेळगावमध्ये विजयपुर येथील तरुणीची आत्महत्या ; प्रेम हेच मृत्यूचे कारण असल्याचा संशय..?
बेळगाव: बेळगावातील नेहरू नगरमध्ये एका तरुणाशी बोलल्यानंतर काही क्षणांतच एका तरुणीने गळफास घेऊन आत्महत्या केली.
मृत महिलेचे नाव ऐश्वर्या लक्ष्मी गलगली (वय 24 वर्षे) असे आहे. ती मूळची विजयपुराची रहिवासी आहे. ती गेल्या तीन महिन्यांपासून बेळगावातील एकस कंपनीत काम करत होती. एमबीए पदवी असलेली ही तरुणी साईकृपा पीजीमध्ये राहत होती.
मंगळवारी नेहमीप्रमाणे पीजीमध्ये आलेली तरुणी तिच्या मोबाईलवर बोलत होती. सीसीटीव्ही फुटेजमध्ये तो वरच्या मजल्यावर त्याच्या खोलीत जाताना दिसतो. त्यानंतर, एक तरुण पीजीकडे धावला.
तरुणीचा मृत्यू प्रेमप्रकरणात अपयश आल्याने झाला असावा असा संशय आहे. तरुणीच्या शरीराची शवविच्छेदन तपासणी करण्यात आली आहे. ज्या तरुणाने त्या तरुणीशी शेवटचे बोलले होते आणि जो पीजीमध्ये आला होता त्याचा शोध सुरू आहे. ही घटना एपीएमसी पोलिस ठाण्याच्या हद्दीत घडली.
ವಿಜಯಪುರ ಯುವತಿ ಬೆಳಗಾವಿಯಲ್ಲಿ ಆತ್ಮಹತ್ಯೆ ; ಸಾವಿಗೆ ಕಾರಣವಾಯ್ತಾ ಪ್ರೀತಿ…?
ಬೆಳಗಾವಿ : ಯುವಕನ ಜೊತೆ ಮಾತನಾಡಿದ ಕೆಲವೇ ಕ್ಷಣದಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದೆ.
ವಿಜಯಪುರ ಮೂಲದ ಐಶ್ವರ್ಯಲಕ್ಷ್ಮೀ ಗಲಗಲಿ ( 24 ) ಮೃತ ಯುವತಿ. ಕಳೆದ ಮೂರು ತಿಂಗಳಿನಿಂದ ಬೆಳಗಾವಿಯ ಏಕಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಂ,ಬಿ,ಎ ಪದವಿ ಪಡೆದಿದ್ದ ಯುವತಿ ಸಾಯಿಕೃಪಾ ಪಿಜಿ ಯಲ್ಲಿ ವಾಸವಿದ್ದಳು.
ಮಂಗಳವಾರ ಎಂದಿನಂತೆ ಪಿಜಿ ಗೆ ಬಂದ ಯುವತಿ ಮೋಬೈಲ್ ನಲ್ಲಿ ಮಾತನಾಡುತ್ತಿದ್ದಳು. ಮೇಲೆ ತನ್ನ ರೂಂ ಗೆ ಹೋಗುತ್ತಿರಯವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ನಂತರ ಓರ್ವ ಯುವಕ ಪಿ.ಜಿ ಕಡೆ ಓಡಿ ಬಂದಿದ್ದಾನೆ.
ಯುವತಿ ಸಾವಿಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯುವತಿ ಜೊತೆ ಕೊನೆ ಬಾರಿಗೆ ಮಾತನಾಡಿದ ಹಾಗೂ ಪಿಜಿ ಕಡೆ ಬಂದಿದ್ದ ಯುವಕನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
