ज्येष्ठ नागरिकाशी उद्धट व अरेरावीची भाषा; करंबळ ग्रामपंचायतीच्या पीडीओ गांधी एल्लारी गौडा विरोधात संतापाची लाट...गटार स्वच्छतेची मागणी केल्याचा राग? ‘कोणाकडेही जा, गटार स्वच्छ करत नाही’ म्हणत पीडीओंची मग्रुरी; चौकशी करून निलंबनाची मागणी.
खानापूर : प्रतिनिधी
खानापूर शहरालगत असलेल्या करंबळ ग्रामपंचायतीचे ग्रामविकास अधिकारी (पीडीओ) गांधी एल्लारी गौडा यांनी करंबळ येथील ज्येष्ठ व प्रतिष्ठित नागरिक तसेच मराठा मंडळ शिक्षण संस्थेचे संचालक शिवाजी पाटील यांच्याशी अरेरावीची व अवमानकारक भाषा वापरल्याचा गंभीर आरोप समोर आला आहे. या घटनेमुळे करंबळ ग्रामस्थांसह ग्रामपंचायत हद्दीतील नागरिकांमध्ये तीव्र संतापाची भावना निर्माण झाली असून संबंधित अधिकाऱ्यांची चौकशी करून कठोर शिस्तभंगाची व निलंबनाची कारवाई करण्याची मागणी जोर धरू लागली आहे.

मिळालेल्या माहितीनुसार, शिवाजी पाटील यांच्या घरासमोरील गटारीमध्ये अनेक दिवसांपासून कचरा व सांडपाणी तुंबून अस्वच्छता निर्माण झाली होती. याबाबत त्यांनी ग्रामपंचायतीकडे वारंवार पाठपुरावा करून गटार स्वच्छ करण्याची मागणी केली होती. मात्र, या मागणीकडे सातत्याने दुर्लक्ष करण्यात आल्याचा आरोप करण्यात आला आहे.
अखेर या प्रश्नाबाबत जाब विचारण्यासाठी शिवाजी पाटील यांनी पीडीओ गांधी एल्लारी गौडा यांच्याशी संपर्क साधला. त्यावेळी गटार स्वच्छ करण्याची मागणी केल्यावर संबंधित अधिकाऱ्यांनी अत्यंत उद्धटपणे आणि अरेरावीच्या सुरात उत्तर दिल्याचा आरोप आहे. “तुझ्या घरासमोरील गटार स्वच्छ करत नाही, कुणाकडे जायचे ते जा, कोणाला सांगायचे ते सांग, काय करायचे ते करून घे,” अशा स्वरूपाची भाषा वापरून जेष्ठ नागरिकांचा अपमान करण्यात आल्याचे सांगितले जात आहे.
एका ज्येष्ठ आणि समाजात मानाचे स्थान असलेल्या व्यक्तीशी अशा प्रकारे वागणे हे केवळ निषेधार्हच नव्हे तर ग्रामपंचायत प्रशासनाच्या कार्यपद्धतीवर प्रश्नचिन्ह निर्माण करणारे असल्याची प्रतिक्रिया नागरिकांतून व्यक्त होत आहे. लोकसेवक म्हणून काम करणाऱ्या अधिकाऱ्यांकडून अपेक्षित असलेली जबाबदारी, संयम आणि नागरिकांप्रती आदरभाव या प्रकरणात दिसून आला नसल्याचा आरोप ग्रामस्थांनी केला आहे.
या घटनेनंतर करंबळ ग्रामपंचायतीच्या कारभाराबाबत नागरिकांमध्ये नाराजी वाढली असून संबंधित पीडीओ स्वतःला ग्रामपंचायतीचा मालक समजून मनमानी कारभार करत असल्याची चर्चा परिसरात रंगू लागली आहे. त्यामुळे या संपूर्ण प्रकरणाची वरिष्ठ अधिकाऱ्यांनी सखोल चौकशी करून कठोर कारवाई करावी, अशी मागणी नागरिकांकडून होत आहे.
दरम्यान, या प्रकरणात तातडीने कारवाई झाली नाही तर करंबळ व परिसरातील नागरिकांना लोकशाही मार्गाने आंदोलनाचा इशारा देण्याची वेळ येऊ शकते, अशी चर्चा गावात सुरू असून प्रशासनाने याची गंभीर दखल घेण्याची गरज व्यक्त केली जात आहे.
— संपादक : दिनकर मरगाळे | आपलं खानापूर
ಹಿರಿಯ ನಾಗರಿಕರೊಂದಿಗೆ ಉದ್ಧಟ ಮತ್ತು ದರ್ಪದಿಂದ ವರ್ತನೆ; ಕರಂಬಳ ಗ್ರಾಮ ಪಂಚಾಯಿತಿಯ ಪಿಡಿಒ ಗಾಂಧಿ ಎಲ್ಲಾರಿ ಗೌಡ ವಿರುದ್ಧ ಆಕ್ರೋಶ. ಚರಂಡಿ ಸ್ವಚ್ಛತೆಗೆ ಮನವಿ ಮಾಡಿದ್ದೇ ಅಪರಾಧವೇ? ‘ಯಾರ ಬಳಿಗಾದರೂ ಹೋಗಿ, ಚರಂಡಿ ಸ್ವಚ್ಛ ಮಾಡುವುದಿಲ್ಲ’ ಎಂದು ಪಿಡಿಒ ಅವರನ್ನು ಕೇಳಿದಾಗ ಊದ್ದಟನದಿಂದ ಹಾಗೂ ಅಹಂಕಾರದಿಂದ ಮಾತು ; ತನಿಖೆ ನಡೆಸಿ ಅಮಾನತು ಮಾಡುವಂತೆ ಒತ್ತಾಯ.
ಖಾನಾಪುರ : ಪ್ರತಿನಿಧಿ
ಖಾನಾಪುರ ಪಟ್ಟಣದ ಸಮೀಪದಲ್ಲಿರುವ ಕರಂಬಳ ಗ್ರಾಮ ಪಂಚಾಯಿತಿಯ ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಾಂಧಿ ಎಲ್ಲಾರಿ ಗೌಡ ಅವರು ಕರಂಬಳ ಗ್ರಾಮದ ಹಿರಿಯ ಹಾಗೂ ಗೌರವಾನ್ವಿತ ನಾಗರಿಕರು ಮತ್ತು ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶಿವಾಜಿ ಪಾಟೀಲ ಅವರೊಂದಿಗೆ ಉದ್ಧಟ ಹಾಗೂ ಅವಮಾನಕಾರಿ ಭಾಷೆಯಲ್ಲಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಕರಂಬಳ ಗ್ರಾಮಸ್ಥರು ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಬಂಧಿಸಿದ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಹಾಗೂ ಅಮಾನತು ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಜೋರಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಶಿವಾಜಿ ಪಾಟೀಲ ಅವರ ಮನೆಯ ಮುಂಭಾಗದ ಚರಂಡಿಯಲ್ಲಿ ಹಲವು ದಿನಗಳಿಂದ ಕಸ ಹಾಗೂ ಕೊಳಚೆ ನೀರು ಸೇಕರಿಸಿದ ಕಾರಣ ಅಸ್ವಚ್ಛತೆ ಉಂಟಾಗಿತ್ತು. ಈ ಕುರಿತು ಅವರು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿ ಚರಂಡಿ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ, ಈ ಬೇಡಿಕೆಯನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೊನೆಗೆ ಈ ಸಮಸ್ಯೆಯ ಕುರಿತು ಸ್ಪಷ್ಟನೆ ಕೇಳಲು ಶಿವಾಜಿ ಪಾಟೀಲ ಅವರು ಪಿಡಿಒ ಗಾಂಧಿ ಎಲ್ಲಾರಿ ಗೌಡ ಅವರನ್ನು ಸಂಪರ್ಕಿಸಿದರು. ಆ ವೇಳೆ ಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದಾಗ ಸಂಬಂಧಿಸಿದ ಅಧಿಕಾರಿ ಅತ್ಯಂತ ಉದ್ಧಟವಾಗಿ ಹಾಗೂ ದರ್ಪದಿಂದ ಉತ್ತರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನಿನ್ನ ಮನೆಯ ಮುಂದಿನ ಚರಂಡಿಯನ್ನು ಸ್ವಚ್ಛ ಮಾಡುವುದಿಲ್ಲ, ಯಾರ ಬಳಿಗಾದರೂ ಹೋಗು, ಯಾರಿಗೆ ಬೇಕಾದರೂ ಹೇಳು, ಏನು ಮಾಡಬೇಕೋ ಮಾಡಿಕೋ” ಎಂಬ ರೀತಿಯ ಮಾತುಗಳ ಮೂಲಕ ಹಿರಿಯ ನಾಗರಿಕರನ್ನು ಅವಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ಹೊಂದಿರುವ ಹಿರಿಯ ವ್ಯಕ್ತಿಯೊಂದಿಗೆ ಈ ರೀತಿಯ ವರ್ತನೆ ನಡೆಸಿರುವುದು ಖಂಡನೀಯ ಮಾತ್ರವಲ್ಲದೆ, ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯವೈಖರಿಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸುವಂತಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸೇವಕರಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಂದ ನಿರೀಕ್ಷಿಸಲಾಗುವ ಜವಾಬ್ದಾರಿ, ಸಂಯಮ ಹಾಗೂ ನಾಗರಿಕರ ಗೌರವಭಾವ ಈ ಪ್ರಕರಣದಲ್ಲಿ ಕಾಣಿಸಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
ಈ ಘಟನೆಯ ಬಳಿಕ ಕರಂಬಳ ಗ್ರಾಮ ಪಂಚಾಯಿತಿಯ ಆಡಳಿತದ ಬಗ್ಗೆ ನಾಗರಿಕರಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಸಂಬಂಧಿಸಿದ ಪಿಡಿಒ ತಾವೇ ಗ್ರಾಮ ಪಂಚಾಯಿತಿಯ ಮಾಲೀಕರಂತೆ ವರ್ತಿಸಿ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂಬ ಚರ್ಚೆ ಗ್ರಾಮದಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಸಂಪೂರ್ಣ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ನಾಗರಿಕರಿಂದ ಕೇಳಿಬರುತ್ತಿದೆ.
ಈ ನಡುವೆ, ಈ ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕರಂಬಳ ಹಾಗೂ ಸುತ್ತಮುತ್ತಲಿನ ಪ್ರದೇಶದ ನಾಗರಿಕರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಚರ್ಚೆ ಗ್ರಾಮದಲ್ಲಿ ನಡೆಯುತ್ತಿದ್ದು, ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
— ಸಂಪಾದಕರು : ದಿನಕರ ಮಾರಗಾಳೆ | ಆಪಲ ಖಾನಾಪುರ.

