भटकळजवळील समुद्रकिनाऱ्यावर दुर्दैवी दुर्घटना; एकाच कुटुंबातील आठ जणांचा बुडून मृत्यू ; खासदार विश्वेश्वर हेगडे-कागेरी यांनी दु:ख व्यक्त केले.
उत्तर कन्नड : प्रतिनिधी
भटकळ तालुक्यातील तट्टेहक्कल समुद्रकिनाऱ्यावर कापेचिप्पू (शंख-शिंपले) गोळा करण्यासाठी गेलेल्या एकाच कुटुंबातील आठ जणांचा पाण्यात बुडून दुर्दैवी मृत्यू झाल्याची हृदयद्रावक घटना घडली आहे. या घटनेमुळे संपूर्ण उत्तर कन्नड जिल्ह्यात शोककळा पसरली असून, समाजमन हादरून गेले आहे.
या दुर्दैवी घटनेबाबत उत्तर कन्नडचे खासदार विश्वेश्वर हेगडे-कागेरी यांनी तीव्र दुःख व्यक्त केले आहे. “ही अत्यंत दुर्दैवी आणि वेदनादायक घटना असून, नियतीच्या क्रूर खेळात एकाच कुटुंबातील आठ जणांचा जीव जाणे ही अत्यंत शोकांतिका आहे. मृतांच्या आत्म्यास परमेश्वराने सद्गती द्यावी. तसेच आपल्या जिवलगांना गमावलेल्या कुटुंबीयांना व नातेवाईकांना हे दुःख सहन करण्याची शक्ती देवो,” अशी भावना त्यांनी व्यक्त केली.
तसेच, या दुर्घटनेतील संत्रस्त कुटुंबांना मदत मिळवून देण्यासाठी पंतप्रधान राष्ट्रीय सहायता निधी (PMNRF) मधून योग्य व जास्तीत जास्त आर्थिक मदत मिळवून देण्यासाठी आपण खासदार म्हणून प्रामाणिक प्रयत्न करणार असल्याचेही त्यांनी सांगितले. यासाठी संबंधित केंद्रीय मंत्रालये व अधिकाऱ्यांशी तातडीने चर्चा करून आवश्यक कार्यवाही करण्यात येणार असल्याची माहिती त्यांनी दिली.
ಭಟ್ಕಳ ಸಮೀಪದ ಸಮುದ್ರ ತೀರದಲ್ಲಿ ದಾರುಣ ದುರಂತ; ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವು ; ಸಂತಾಪ ಸೂಚಿಸಿದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ.
ಉತ್ತರ ಕನ್ನಡ : ಪ್ರತಿನಿಧಿ
ಭಟ್ಕಳ ತಾಲೂಕಿನ ತಟ್ಟೆಹಕ್ಕಲು ಸಮುದ್ರ ತೀರದಲ್ಲಿ ಕಪ್ಪೆಚಿಪ್ಪು (ಶಂಖ-ಚಿಪ್ಪು) ಸಂಗ್ರಹಿಸಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಈ ಘಟನೆಯಿಂದ ಸಂಪೂರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಈ ದುರ್ಘಟನೆ ಕುರಿತು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಇದು ಅತ್ಯಂತ ದುಃಖಕರ ಹಾಗೂ ವೇದನಾದಾಯಕ ಘಟನೆ. ವಿಧಿಯ ಕ್ರೂರ ಆಟದಲ್ಲಿ ಒಂದೇ ಕುಟುಂಬದ ಎಂಟು ಮಂದಿ ಜೀವ ಕಳೆದುಕೊಳ್ಳುವುದು ಅತ್ಯಂತ ದುರಂತಕರ ಸಂಗತಿ. ಮೃತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಬಂಧುಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ,” ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ, ಈ ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ ಸೂಕ್ತ ಹಾಗೂ ಗರಿಷ್ಠ ಪ್ರಮಾಣದ ಆರ್ಥಿಕ ನೆರವು ದೊರಕಿಸಿಕೊಡಲು ತಾವು ಸಂಸದರಾಗಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಸಂಬಂಧಿತ ಕೇಂದ್ರ ಸಚಿವಾಲಯಗಳು ಹಾಗೂ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನೂ ನೀಡಿದ್ದಾರೆ.


