तोराळीत ‘बांधाची कोंडी’ नाल्यावर नागरिकांच्या श्रमदानातून रस्ता; आमदार विठ्ठलराव हलगेकर व सदानंद पाटील यांचे सहकार्य.
खानापूर : प्रतिनिधी
खानापूर तालुक्यातील तोराळी गावाजवळील ‘बांधाची कोंडी’ या नाल्यावर अनेक वर्षांपासून नागरिकांना भेडसावत असलेली वाहतुकीची समस्या अखेर मार्गी लागली आहे. खानापूर तालुक्याचे आमदार विठ्ठलराव हलगेकर तसेच सदानंद पाटील यांच्या वैयक्तिक स्वखर्चातून पाच मोठ्या सिमेंट पाईपची व्यवस्था करण्यात आली. तसेच ग्रामस्थांच्या श्रमदानातून आणि जेसीबीच्या सहाय्याने नाल्यावर तात्पुरता पूल बनवून रस्ता तयार करण्यात आला आहे.
तोराळी गावातील ‘बांधाची कोंडी’ परिसरातून मोठा नाला वाहतो. पावसाळ्यात या नाल्याला पूर येऊन तो दुथडी भरून वाहत असतो. विशेष म्हणजे फेब्रुवारी–मार्चपर्यंत नाल्यात पाणी असल्याने शेतीवाडीकडे जाणारा रस्ता पूर्णपणे बंद होत असे. त्यामुळे ग्रामस्थांना जीव धोक्यात घालून पाण्यातून मार्ग काढावा लागत होता.
या नाल्यातून पलीकडे जाताना पूर्वी दोन वयोवृद्ध व्यक्तींना आपला जीव सुद्धा गमवावा लागल्याच्या दुर्दैवी घटनाही घडल्या होत्या. त्यामुळे कायमस्वरूपी उपाययोजनेची मागणी ग्रामस्थांकडून सातत्याने होत होती.
गावातील युवक व नागरिकांनी ही समस्या आमदार विठ्ठलराव हलगेकर आणि लैला शुगरचे एमडी सदानंद पाटील यांच्या निदर्शनास आणून दिल्यानंतर त्यांनी तत्काळ सहकार्य करत पाच मोठे सिमेंट पाईप उपलब्ध करून दिले. त्यानंतर ग्रामस्थांनी श्रमदानातून व जेसीबी द्वारे खोदकाम करून पाईप बसविले आणि नाल्यावर तात्पुरता पूल बनविला व रस्ता तयार केला. या कामासाठी गावातील युवा कार्यकर्ते आकाश पाटील यांनी आपल्या जेसीबी द्वारे श्रमदानात भाग घेतला.
या कामामुळे आता नाल्यात पाणी असतानाही वाहतूक सुरू राहणार असून शेतकरी, नागरिक आणि गुरे चारण्यासाठी जाणाऱ्या ग्रामस्थांना मोठा दिलासा मिळाला आहे. या कामाबद्दल ग्रामस्थांनी आमदार विठ्ठलराव हलगेकर आणि सदानंद पाटील यांचे आभार मानले आहेत.
यावेळी आमदार विठ्ठलराव हलगेकर यांनी भविष्यात या ठिकाणी कायमस्वरूपी मजबूत पुलाची उभारणी करून रस्ता अधिक सुरक्षित करण्यात येईल, अशी ग्वाही दिली.
या कामासाठी मारुती पार्लेकर, व्यंकट पाटील, कामाणा पाटील, नागू पाटील, नारायण पाटील, दत्तू कांबळे यांच्यासह गावातील युवक व नागरिकांनी विशेष प्रयत्न करून श्रमदानात सक्रिय सहभाग घेतला.
ತೋರಾಳಿ ಗ್ರಾಮದಲ್ಲಿ ‘ಬಾಂಧಾಚಿ ಕೊಂಡಿ’ ಎಂಬ ನಾಲೆಯ ಮೇಲೆ ಗ್ರಾಮಸ್ಥರ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ; ಶಾಸಕ ವಿಠ್ಠಲರಾವ್ ಹಲಗೆಕರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸದಾನಂದ ಪಾಟೀಲರ ಸಹಕಾರ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ತೋರಾಳಿ ಗ್ರಾಮದ ಸಮೀಪದ ‘ಬಾಂಧಾಚಿ ಕೊಂಡಿ’ ಎಂಬ ನಾಲೆಯ ಬಳಿ ಹಲವು ವರ್ಷಗಳಿಂದ ಗ್ರಾಮಸ್ಥರನ್ನು ಕಾಡುತ್ತಿದ್ದ ಸಂಚಾರ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದೆ. ಖಾನಾಪುರ ತಾಲ್ಲೂಕಿನ ಶಾಸಕ ವಿಠ್ಠಲರಾವ್ ಹಲಗೆಕರ ಹಾಗೂ ಲೈಲಾ ಶುಗರ್ ಸಂಸ್ಥೆಯ ಎಂಡಿ ಸದಾನಂದ ಪಾಟೀಲ ಅವರು ತಮ್ಮ ವೈಯಕ್ತಿಕ ವೆಚ್ಚದಿಂದ ಐದು ದೊಡ್ಡ ಸಿಮೆಂಟ್ ಪೈಪ್ಗಳನ್ನು ಒದಗಿಸಿದ್ದಾರೆ. ಜೊತೆಗೆ ಗ್ರಾಮಸ್ಥರ ಶ್ರಮದಾನ ಮತ್ತು ಜೆಸಿಬಿ ಯಂತ್ರದ ಸಹಾಯದಿಂದ ನಾಲೆಯ ಮೇಲೆ ರಸ್ತೆ ನಿರ್ಮಿಸಲಾಗಿದೆ.
ತೋರಾಳಿ ಗ್ರಾಮದ ‘ಬಾಂಧಾಚಿ ಕೊಂಡಿ’ ಪ್ರದೇಶದ ಮೂಲಕ ದೊಡ್ಡ ನಾಲೆ ಹರಿಯುತ್ತದೆ. ಮಳೆಗಾಲದಲ್ಲಿ ಈ ನಾಲೆಗೆ ಭಾರಿ ಪ್ರವಾಹ ಬಂದು ನೀರು ತುಂಬಿ ಹರಿಯುತ್ತಿತ್ತು. ವಿಶೇಷವಾಗಿ ಫೆಬ್ರವರಿ–ಮಾರ್ಚ್ ತಿಂಗಳವರೆಗೂ ನಾಲೆಯಲ್ಲಿ ನೀರು ಇರುವುದರಿಂದ ಕೃಷಿಭೂಮಿಯ ಕಡೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಬಂದ್ ಆಗುತ್ತಿತ್ತು. ಇದರಿಂದ ಗ್ರಾಮಸ್ಥರು ಜೀವದ ಹಂಗು ತೊರೆದು ನೀರಿನಲ್ಲೇ ದಾರಿ ಮಾಡಿಕೊಂಡು ಸಂಚರಿಸಬೇಕಾಗುತ್ತಿತ್ತು.
ಈ ನಾಲೆಯನ್ನು ದಾಟುವ ವೇಳೆ ಹಿಂದೆ ಇಬ್ಬರು ವೃದ್ಧರು ಜೀವ ಕಳೆದುಕೊಂಡ ದುರ್ಘಟನೆಗಳೂ ಸಂಭವಿಸಿದ್ದವು. ಆದ್ದರಿಂದ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದರು.
ಗ್ರಾಮದ ಯುವಕರು ಹಾಗೂ ನಾಗರಿಕರು ಈ ಸಮಸ್ಯೆಯನ್ನು ಶಾಸಕ ವಿಠ್ಠಲರಾವ್ ಹಲಗೆಕರ ಮತ್ತು ಲೈಲಾ ಶುಗರ್ ಎಂಡಿ ಸದಾನಂದ ಪಾಟೀಲ ಅವರ ಗಮನಕ್ಕೆ ತಂದ ಬಳಿಕ ಅವರು ತಕ್ಷಣ ಸ್ಪಂದಿಸಿ ಐದು ದೊಡ್ಡ ಸಿಮೆಂಟ್ ಪೈಪ್ಗಳನ್ನು ಒದಗಿಸಿದರು. ನಂತರ ಗ್ರಾಮಸ್ಥರು ಶ್ರಮದಾನದ ಮೂಲಕ ಹಾಗೂ ಜೆಸಿಬಿ ಸಹಾಯದಿಂದ ಅಗೆದು ಪೈಪ್ಗಳನ್ನು ಅಳವಡಿಸಿ ನಾಲೆಯ ಮೇಲೆ ರಸ್ತೆ ನಿರ್ಮಿಸಿದರು. ಈ ಕಾರ್ಯಕ್ಕಾಗಿ ಗ್ರಾಮದ ಯುವ ಕಾರ್ಯಕರ್ತ ಆಕಾಶ ಪಾಟೀಲ ತಮ್ಮ ಜೆಸಿಬಿ ಯಂತ್ರದ ಮೂಲಕ ಶ್ರಮದಾನದಲ್ಲಿ ಭಾಗವಹಿಸಿದರು.
ಈ ಕಾಮಗಾರಿಯಿಂದ ಇದೀಗ ನಾಲೆಯಲ್ಲಿ ನೀರು ಇದ್ದರೂ ಸಂಚಾರ ಸುಗಮವಾಗಲಿದ್ದು, ರೈತರು, ಗ್ರಾಮಸ್ಥರು ಹಾಗೂ ಪಶುಗಳನ್ನು ಮೇಯಿಸಲು ತೆರಳುವವರಿಗೆ ದೊಡ್ಡ ಮಟ್ಟದ ಅನುಕೂಲವಾಗಿದೆ. ಈ ಕಾರ್ಯಕ್ಕಾಗಿ ಗ್ರಾಮಸ್ಥರು ಶಾಸಕ ವಿಠ್ಠಲರಾವ್ ಹಲಗೆಕರ ಹಾಗೂ ಸದಾನಂದ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೆಕರ ಅವರು ಭವಿಷ್ಯದಲ್ಲಿ ಈ ಸ್ಥಳದಲ್ಲಿ ಶಾಶ್ವತ ಮತ್ತು ಬಲಿಷ್ಠ ಸೇತುವೆ ನಿರ್ಮಿಸಿ ರಸ್ತೆ ಇನ್ನಷ್ಟು ಸುರಕ್ಷಿತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಕಾರ್ಯದಲ್ಲಿ ಮಾರುತಿ ಪಾರ್ಲೇಕರ್, ವೆಂಕಟ್ ಪಾಟೀಲ, ಕಾಮಣ್ಣ ಪಾಟೀಲ, ನಾಗು ಪಾಟೀಲ, ನಾರಾಯಣ ಪಾಟೀಲ, ದತ್ತು ಕಾಂಬಳೆ ಸೇರಿದಂತೆ ಗ್ರಾಮದ ಯುವಕರು ಮತ್ತು ನಾಗರಿಕರು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

