जांबेगाळी–देवराईतील आपत्तीग्रस्तांना दिलासा; तालिकोटींकडून रोख रक्कम वाटप.
खानापूर : खानापूर तालुक्यातील जांबेगाळी व देवराई येथे वादळी पावसामुळे नुकसान झालेल्या सहा कुटुंबीयांना सामाजिक कार्यकर्ते इरफान तालिकोटी यांनी प्रत्येकी दहा हजार रुपयांची वैयक्तिक मदत दिली. गुरुवार दिनांक १४ मे रोजी त्यांनी दोन्ही गावांना प्रत्यक्ष भेट देऊन संबंधित कुटुंबीयांच्या स्वाधीन रोख रक्कम सुपूर्द केली.
मंगळवार दिनांक १२ मे २०२६ रोजी सायंकाळी जोरदार वाऱ्यासह झालेल्या वादळी पावसामुळे जांबेगाळी व देवराई परिसरात मोठे नुकसान झाले होते. अनेक घरांची पत्रे उडून गेली, तर काही घरांच्या भिंती कोसळल्याने नागरिकांचे मोठ्या प्रमाणात आर्थिक नुकसान झाले. या घटनेनंतर तहसीलदार व संबंधित अधिकाऱ्यांनी नुकसानग्रस्त घरांची पाहणी करून पंचनामा केला. मात्र शासकीय मदत मिळण्यास दीड ते दोन महिने लागणार असल्याची माहिती मिळताच इरफान तालिकोटी यांनी तत्काळ मदतीचा हात पुढे केला.
घरांची तात्पुरती दुरुस्ती व पत्रे घालण्यासाठी प्रत्येकी दहा हजार रुपये देण्याची घोषणा त्यांनी केली होती. त्यानुसार देवराई येथील कौशल्या कृष्णा कोलकार, झाकीर हुसेन इनामदार, सोगरा नूरहम्मद इनामदार, बसवानी जी तिरमीलकर तसेच जांबेगाळी येथील इस्माईल एम. मुल्ला आणि रजिया एम. पाटील या सहा कुटुंबीयांना प्रत्येकी दहा हजार रुपयांची मदत देण्यात आली. या मदतीमुळे नुकसानग्रस्त कुटुंबीयांना मोठा दिलासा मिळाला असून त्यांनी तालिकोटी यांचे आभार मानले.
यावेळी एम. डी. श्रीप इनामदार, अकबर इनामदार, इमामसाब इनामदार, नवीद झुंझवाडकर, मारुती दानबेलकर, चंद्रकांत देसाई, रामू चौरी, बसाप्पा तेरिमिलकर, कैफ इनामदार, ज्ञानेश्वर मारुती गुरव सुळेगाळी, सीताराम देसाई, जोतिबा तांडे, रामनिग नरकड, नागो नारायण बावकर, पांडुरंग मेंडेगाळकर, हबीबी इनामदार, झाहेर इनामदार, झुबेर इनामदार, अलीसाब इनामदार, इब्राहिम सवदागर, सदानंद तांडे, महादू वीर, फोडापा मनवडकर, यलारी सुतार, मारुती केसरकर, संतोष तिरिमेडकर, तैय्यब मुल्ला, रफीक पटेल, पुडलीक दळवी आदी ग्रामस्थ मोठ्या संख्येने उपस्थित होते.
ಜಾಂಬೆಗಾಳಿ–ದೇವರಾಯಿಯಲ್ಲಿ ಪೀಡಿತರಿಗೆ ಸಹಾಯದ ರೂಪದಲ್ಲಿ ನಗದು ಪರಿಹಾರ ವಿತರಿಸಿದ ಸಾಮಾಜಿಕ ಕಾರ್ಯಕರ್ತ ತಾಲಿಕೋಟಿ
ಖಾನಾಪುರ : ಖಾನಾಪುರ ತಾಲ್ಲೂಕಿನ ಜಾಂಬೆಗಾಳಿ ಹಾಗೂ ದೇವರಾಯಿ ಗ್ರಾಮಗಳಲ್ಲಿ ಗಾಳಿ ಮಳೆಯ ಪರಿಣಾಮದಿಂದ ಹಾನಿಗೊಳಗಾದ ಆರು ಕುಟುಂಬಗಳಿಗೆ ಸಾಮಾಜಿಕ ಕಾರ್ಯಕರ್ತ ಇರ್ಫಾನ್ ತಾಲಿಕೋಟಿ ಅವರು ತಲಾ ಹತ್ತು ಸಾವಿರ ರೂಪಾಯಿ ವೈಯಕ್ತಿಕ ಸಹಾಯ ನೀಡಿದರು. ಗುರುವಾರ, ಮೇ 14 ರಂದು ಅವರು ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಸಂಬಂಧಿತ ಕುಟುಂಬಗಳಿಗೆ ನಗದು ಮೊತ್ತವನ್ನು ಸ್ವಹಸ್ತದಿಂದ ವಿತರಿಸಿದರು.
ಮಂಗಳವಾರ, ಮೇ 12, 2026 ರಂದು ಸಂಜೆ ವೇಳೆ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಜಾಂಬೆಗಾಳಿ ಮತ್ತು ದೇವರಾಯಿ ಪ್ರದೇಶದಲ್ಲಿ ಭಾರೀ ಹಾನಿ ಸಂಭವಿಸಿತ್ತು. ಅನೇಕ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಕೆಲ ಮನೆಗಳ ಗೋಡೆಗಳು ಕುಸಿದ ಪರಿಣಾಮ ನಾಗರಿಕರಿಗೆ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಯಿತು. ಘಟನೆಯ ಬಳಿಕ ತಹಶೀಲ್ದಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಆದರೆ ಸರ್ಕಾರಿ ನೆರವು ದೊರಕಲು ಒಂದೂವರೆ ಯಿಂದ ಎರಡು ತಿಂಗಳು ಹಿಡಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದ ತಕ್ಷಣ ಇರ್ಫಾನ್ ತಾಲಿಕೋಟಿ ಅವರು ತಕ್ಷಣ ಸಹಾಯ ಹಸ್ತ ಚಾಚಿದರು.
ಮನೆಗಳ ತಾತ್ಕಾಲಿಕ ದುರಸ್ತಿ ಮತ್ತು ಮೇಲ್ಛಾವಣಿ ಅಳವಡಿಸಲು ತಲಾ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಅವರು ಘೋಷಿಸಿದ್ದರು. ಅದರಂತೆ ದೇವರಾಯಿ ಗ್ರಾಮದ ಕೌಶಲ್ಯ ಕೃಷ್ಣ ಕೊಲ್ಕಾರ್, ಜಾಕೀರ್ ಹುಸೇನ್ ಇನಾಮದಾರ್, ಸೋಗ್ರಾ ನೂರಹಮ್ಮದ್ ಇನಾಮದಾರ್, ಬಸವಾನಿ ಜಿ ತಿರಮೀಲ್ಕರ್ ಹಾಗೂ ಜಾಂಬೆಗಾಳಿ ಗ್ರಾಮದ ಇಸ್ಮಾಯಿಲ್ ಎಂ. ಮುಲ್ಲಾ ಮತ್ತು ರಜಿಯಾ ಎಂ. ಪಾಟೀಲ್ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ನೆರವು ವಿತರಿಸಲಾಯಿತು.
ಈ ನೆರವಿನಿಂದ ಹಾನಿಗೊಳಗಾದ ಕುಟುಂಬಗಳಿಗೆ ಮಹತ್ತರ ನೆಮ್ಮದಿ ದೊರೆತಿದ್ದು, ಅವರು ತಾಲಿಕೋಟಿ ಅವರಿಗಾಗಿಯು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ.ಡಿ. ಶ್ರೀಪ್ ಇನಾಮದಾರ್, ಅಕ್ಬರ್ ಇನಾಮದಾರ್, ಇಮಾಮಸಾಬ್ ಇನಾಮದಾರ್, ನವೀದ್ ಝುಂಜವಾಡ್ಕರ್, ಮಾರುತಿ ದಾನಬೆಲ್ಕರ್, ಚಂದ್ರಕಾಂತ್ ದೇಸಾಯಿ, ರಾಮು ಚೌರಿ, ಬಸಪ್ಪ ತೇರಿಮೀಲ್ಕರ್, ಕೈಫ್ ಇನಾಮದಾರ್, ಜ್ಞಾನೇಶ್ವರ ಮಾರುತಿ ಗುರುವ ಸುಳೆಗಾಳಿ, ಸೀತಾರಾಮ ದೇಸಾಯಿ, ಜೋತಿಬಾ ತಾಂಡೆ, ರಾಮನಿಂಗ ನರಕಡ, ನಾಗೋ ನಾರಾಯಣ ಬಾವ್ಕರ್, ಪಾಂಡುರಂಗ ಮೆಂಡೆಗಾಳ್ಕರ್, ಹಬೀಬಿ ಇನಾಮದಾರ್, ಜಾಹೇರ್ ಇನಾಮದಾರ್, ಜುಬೇರ್ ಇನಾಮದಾರ್, ಅಲಿಸಾಬ್ ಇನಾಮದಾರ್, ಇಬ್ರಾಹಿಂ ಸವದಾಗರ್, ಸದಾನಂದ ತಾಂಡೆ, ಮಹಾದು ವೀರ್, ಫೋಡಪ್ಪ ಮನವಡ್ಕರ್, ಯಲಾರಿ ಸುತಾರ್, ಮಾರುತಿ ಕೇಸರಕರ, ಸಂತೋಷ ತಿರಿಮೆಡ್ಕರ್, ತಯ್ಯಬ್ ಮುಲ್ಲಾ, ರಫೀಕ್ ಪಟೇಲ್, ಪುಂಡಲೀಕ್ ದಳವಿ ಸೇರಿದಂತೆ ಅನೇಕ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.


