खानापूरात पिसाळलेल्या कुत्र्याचा धुमाकूळ; 10 ते 15 जण जखमी, नगरपंचायतीच्या अधिकाऱ्याचा पाय फ्रॅक्चर.
खानापूर : शहरातील विद्यानगर रेल्वे स्टेशन परिसरात गुरुवार दिनांक 15 मे 2026 रोजी एका पिसाळलेल्या कुत्र्याने अक्षरशः धुमाकूळ घालत 10 ते 15 नागरिकांना चावा घेतल्याची धक्कादायक घटना घडली. जखमींमध्ये महिला व पुरुषांचा समावेश असून परिसरात भीतीचे वातावरण निर्माण झाले आहे.
घटनेनंतर सर्व जखमींना तातडीने खानापूर येथील प्राथमिक आरोग्य केंद्रात नेऊन प्राथमिक उपचार करण्यात आले. त्यानंतर पुढील उपचारासाठी त्यांना बेळगाव येथील बिम्स (जिल्हा रुग्णालय) येथे हलविण्यात आले.
दरम्यान आज शुक्रवारी सकाळी नगरपंचायतीचे अधिकारी प्रेमानंद नाईक व त्यांच्या कर्मचाऱ्यांनी संबंधित कुत्र्याचा पाठलाग करून त्याला ठार केले. मात्र या कारवाईदरम्यान कुत्र्याने प्रेमानंद नाईक यांच्यावर हल्ला केल्याने ते खाली पडून त्यांचा पाय फ्रॅक्चर झाला. त्यांच्यावर सध्या खानापूर मध्ये प्राथमिक उचार करून पुढील उपचारासाठी त्यांना बेळगावला पाठविण्यात आले. या झटापटीत तीन कामगारही किरकोळ जखमी झाले आहेत.
गुरुवारी सायंकाळी विद्यानगर परिसरात आरती सुतार (वय 21), ज्योती सुतार (वय 25), विठ्ठल सुतार (वय 70), पार्वती दाभिलकर (वय 70), निसार अहमद बचोळी (वय 76) व सुप्रिया पाटील (वय 27) यांना कुत्र्याने घरात घुसून चावा घेतल्याने ते गंभीर जखमी झाले.
सर्वोच्च न्यायालयाने ग्रामपंचायत, नगरपंचायत, नगरपालिका व महानगरपालिका प्रशासनाला बेवारस कुत्र्यांसाठी स्वतंत्र शेड उभारून अन्न व औषधोपचाराची व्यवस्था करण्याचे आदेश दिले आहेत. तरीदेखील याबाबत अद्याप ठोस उपाययोजना करण्यात आलेली नसल्याची टीका नागरिकांकडून होत आहे.
विद्यानगर व रेल्वे स्टेशन परिसरात अशा घटना टाळण्यासाठी तातडीने प्रभावी उपाययोजना कराव्यात, अशी मागणी स्थानिक नागरिकांनी प्रशासनाकडे केली आहे.
ಖಾನಾಪುರದಲ್ಲಿ ಹುಚ್ಚುನಾಯಿ ಯ ನಾಯಿಯ ಅಟ್ಟಹಾಸ; ಹುಚ್ಚು ನಾಯಿ ಕಚ್ಚಿದ ಕಾರಣ 10 ರಿಂದ 15 ಮಂದಿಗೆ ಗಾಯಾ, ನಾಯಿ ಹಿಡಿಯುವ ವೇಳೆ ನಗರಪಂಚಾಯಿತಿ ಅಧಿಕಾರಿಯ ಕಾಲು ಮುರಿದು ಗಾಯ.
ಖಾನಾಪುರ : ನಗರದ ವಿದ್ಯಾನಗರ ರೈಲು ನಿಲ್ದಾಣ ಪ್ರದೇಶದಲ್ಲಿ ಗುರುವಾರ, ದಿನಾಂಕ 15 ಮೇ 2026 ರಂದು ಹುಚ್ಚು ನಾಯಿಯು ಅಟ್ಟಹಾಸ ಮೆರೆದು 10 ರಿಂದ 15 ಮಂದಿಗೆ ಕಚ್ಚಿದ ಶಾಕಿಂಗ್ ಘಟನೆ ನಡೆದಿದೆ. ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದ್ದು, ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ನಂತರ ಎಲ್ಲಾ ಗಾಯಾಳುಗಳನ್ನು ತಕ್ಷಣ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ. ನಂತರ ಮುಂದಿನ ಚಿಕಿತ್ಸೆಗೆ ಅವರನ್ನು ಬೆಳಗಾವಿಯ ಬಿಮ್ಸ್ (ಜಿಲ್ಲಾ ಆಸ್ಪತ್ರೆ) ಗೆ ಸಾಗಿಸಲಾಯಿತು.
ಈ ನಡುವೆ ಶುಕ್ರವಾರ ಬೆಳಿಗ್ಗೆ ನಗರಪಂಚಾಯಿತಿ ಅಧಿಕಾರಿ ಪ್ರೇಮಾನಂದ ನಾಯ್ಕ್ ಮತ್ತು ಅವರ ಸಿಬ್ಬಂದಿಗಳು ಸಂಬಂಧಿತ ನಾಯಿಯನ್ನು ಬೆನ್ನಟ್ಟಿಕೊಂಡು ಕೊಂದಿದ್ದಾರೆ. ಆದರೆ ಈ ಕಾರ್ಯಾಚರಣೆಯ ವೇಳೆ ನಾಯಿಯು ನಗರ ಪಂಚಾಯತಿ ಸಿಬ್ಬಂದಿಯಾದ ಪ್ರೇಮಾನಂದ ನಾಯ್ಕ್ ಅವರ ಮೇಲೆ ದಾಳಿ ನಡೆಸಿದ ಪರಿಣಾಮ ಅವರು ಕೆಳಗೆ ಬಿದ್ದು ಅವರ ಕಾಲು ಮುರಿದಿದೆ. ಅವರಿಗೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗೊಂದಲದಲ್ಲಿ ಮೂವರು ಕಾರ್ಮಿಕರು ಸಹ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ ವಿದ್ಯಾನಗರ ಪ್ರದೇಶದಲ್ಲಿ ಆರತಿ ಸುತಾರ್ (ವಯಸ್ಸು 21), ಜ್ಯೋತಿ ಸುತಾರ್ (ವಯಸ್ಸು 25), ವಿಠ್ಠಲ ಸುತಾರ್ (ವಯಸ್ಸು 70), ಪಾರ್ವತಿ ದಾಭೀಲ್ಕರ್ (ವಯಸ್ಸು 70), ನಿಸಾರ್ ಅಹಮದ್ ಬಚೋಳಿ (ವಯಸ್ಸು 76) ಹಾಗೂ ಸುಪ್ರಿಯಾ ಪಾಟೀಲ (ವಯಸ್ಸು 27) ಅವರ ಮನೆಗೆ ನುಗ್ಗಿ ನಾಯಿಯು ಕಚ್ಚಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಗ್ರಾಮಪಂಚಾಯಿತಿ, ನಗರಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ಆಡಳಿತಕ್ಕೆ ಬೀದಿ ನಾಯಿಗಳಿಗಾಗಿ ಪ್ರತ್ಯೇಕ ಶೆಡ್ ನಿರ್ಮಿಸಿ ಆಹಾರ ಮತ್ತು ಔಷಧೋಪಚಾರದ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದೆ. ಆದರೂ ಖಾನಾಪುರ್ ಪಟ್ಟಣ ಪಂಚಾಯತ್ ಈ ಕುರಿತು ಇನ್ನೂ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಟೀಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ವಿದ್ಯಾನಗರ ಮತ್ತು ರೈಲು ನಿಲ್ದಾಣ ಪ್ರದೇಶದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಡಳಿತವನ್ನು ಒತ್ತಾಯಿಸಿದ್ದಾರೆ.


