खानापूर : पाईपलाईन खोदकामामुळे रस्त्यावर खड्डा; अपघातांची मालिका, जबाबदार कोण? (नगरपंचायत की पीडब्ल्यूडी)
खानापूर : शहरांतर्गत जाणाऱ्या खानापूर–पणजी मार्गावरील मलप्रभा नदी पुला शेजारी, नगरपंचायतीच्या जॅकवेल परिसरात खानापूर शहराच्या पाणीपुरवठ्यासाठी नवीन जलवाहिनी (पाईपलाईन) टाकण्यात आली आहे. मात्र पाईपलाईनचे काम पूर्ण झाल्यानंतर रस्त्यावर करण्यात आलेले खोदकाम योग्यरीत्या मुजविण्यात न आल्याने त्या ठिकाणी खड्डेसदृश परिस्थिती निर्माण झाली आहे. परिणामी या मार्गावर लहान-मोठ्या अपघातांची मालिका सुरू झाली असून वाहनचालक व नागरिकांमध्ये तीव्र संताप व्यक्त होत आहे.
सदर मार्गावर खोदलेला चर नीट बुजविण्यात न आल्याने चारचाकी व दुचाकी वाहनचालकांना तो सहज लक्षात येत नाही. अचानक समोर आलेल्या या खड्ड्यामुळे वाहनांचे संतुलन बिघडून अनेक जण किरकोळ जखमी झाले आहेत. विशेषतः रात्रीच्या वेळी किंवा पावसाळ्यात हा धोका अधिक वाढत असल्याचे वाहनचालकांचे म्हणणे आहे.
दरम्यान, “उद्या एखादा मोठा अपघात होऊन जीवितहानी झाली तर त्याला जबाबदार कोण?” असा सवाल प्रवासी व स्थानिक नागरिक उपस्थित करत आहेत. नगरपंचायत तसेच सार्वजनिक बांधकाम विभागाच्या अधिकाऱ्यांनी तातडीने याकडे लक्ष देऊन खोदकाम केलेला चर व्यवस्थित भरून रस्ता पूर्ववत करावा, अशी मागणी जोर धरत आहे.
यासंदर्भात सामाजिक कार्यकर्त्यांनी इशारा दिला असून, भविष्यात कोणताही मोठा अनर्थ घडल्यास संबंधित नगरपंचायत व सार्वजनिक बांधकाम खात्याच्या अधिकाऱ्यांवर मनुष्यवधाचा गुन्हा दाखल करण्याची मागणी करण्यात येईल, असे स्पष्ट केले आहे.
अपघात टाळण्यासाठी तातडीने दुरुस्तीची कामे हाती घेण्याची अपेक्षा नागरिकांकडून व्यक्त होत आहे.
ಖಾನಾಪುರ : ಪೈಪ್ಲೈನ್ ಅಳವಡಿಸುವ ವೇಳೆ ರಸ್ತೆಯನ್ನು ತೋಡಿದ ಕಾರಣ ಗುಂಡಿ; ಅಪಘಾತಗಳ ಸರಣಿ, ಜವಾಬ್ದಾರಿ ಹೋರುವವರು ಯಾರು? (ನಗರಪಂಚಾಯತ್ ಅಥವಾ ಪಿಡಬ್ಲ್ಯುಡಿ?)
ಖಾನಾಪುರ : ನಗರ ವ್ಯಾಪ್ತಿಯ ಖಾನಾಪುರ–ಪಣಜಿ ಮಾರ್ಗದಲ್ಲಿ ಮಲಪ್ರಭಾ ನದಿ ಸೇತುವೆ ಸಮೀಪ, ನಗರಪಂಚಾಯತ್ ಜಾಕ್ವೆಲ್ ಪ್ರದೇಶದ ಬಳಿ ಖಾನಾಪುರ ನಗರಕ್ಕೆ ನೀರು ಪೂರೈಕೆ ಮಾಡಲು ಹೊಸ ಪೈಪ್ಲೈನ್ ಅಳವಡಿಸಲಾಗಿದೆ. ಆದರೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ತೋಡಿದ ಭಾಗವನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಅಲ್ಲಿ ದೊಡ್ಡ ಗುಂಡಿಯಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ಸಣ್ಣ-ಪುಟ್ಟ ಅಪಘಾತಗಳ ಸರಣಿ ಆರಂಭವಾಗಿದ್ದು, ವಾಹನ ಸವಾರರು ಹಾಗೂ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸದರ ರಸ್ತೆಯಲ್ಲಿ ತೋಡಿದ ಚರವನ್ನು ಸರಿಯಾಗಿ ತುಂಬದ ಕಾರಣ ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಅದು ಗೋಚರವಾಗುವುದಿಲ್ಲ . ಏಕಾಏಕಿ ಎದುರಾಗುವ ಈ ಗುಂಡಿಯಿಂದ ವಾಹನಗಳ ನಿಯಂತ್ರಣ ತಪ್ಪಿ ಹಲವರು ಸಣ್ಣಪುಟ್ಟ ಗಾಯಗಳಾಗಿರುವ ಘಟನೆಗಳು ನಡೆದಿವೆ. ವಿಶೇಷವಾಗಿ ರಾತ್ರಿ ವೇಳೆ ಅಥವಾ ಮಳೆಗಾಲದಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚುತ್ತಿದೆ ಎಂದು ವಾಹನ ಸವಾರರು ತಿಳಿಸಿದ್ದಾರೆ.
ಈ ನಡುವೆ, “ನಾಳೆ ಯಾವುದೇ ದೊಡ್ಡ ಅಪಘಾತ ಸಂಭವಿಸಿ ಜೀವಹಾನಿ ಉಂಟಾದರೆ ಅದಕ್ಕೆ ಜವಾಬ್ದಾರಿ ಯಾರದು?” ಎಂಬ ಪ್ರಶ್ನೆಯನ್ನು ಪ್ರಯಾಣಿಕರು ಹಾಗೂ ಸ್ಥಳೀಯರು ಎತ್ತಿದ್ದಾರೆ. ನಗರಪಂಚಾಯತ್ ಹಾಗೂ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳು ತಕ್ಷಣವೇ ಗಮನ ಹರಿಸಿ ತೋಡಿದ ಭಾಗವನ್ನು ಸರಿಯಾಗಿ ತುಂಬಿ ರಸ್ತೆ ಹಳೆಯ ಸ್ಥಿತಿಗೆ ತರಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸಿದರೆ ಸಂಬಂಧಿತ ನಗರಪಂಚಾಯತ್ ಹಾಗೂ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳ ವಿರುದ್ಧ ಮಾನವ ಹತ್ಯೆ ಪ್ರಕರಣ ದಾಖಲಿಸಲು ಆಗ್ರಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಅಪಘಾತಗಳನ್ನು ತಡೆಯಲು ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.


