बेळगाव : वसतिगृहात विद्यार्थिनीची आत्महत्या; वाढदिवशीच दुर्दैवी अंत..!
बेळगाव : वाढदिवसाच्या दिवशीच वसतिगृहातील विद्यार्थिनीने आत्महत्या केल्याची धक्कादायक घटना सोमवारी बेळगाव येथील अजान नगर परिसरातील अनुसूचित जमातींच्या पोस्ट-मॅट्रिक मुलींच्या वसतिगृहात घडली.
हुक्केरी तालुक्यातील कटाबळ्ळी गावची कावेरी उमेश नायक (वय 21) ही बी.एस्सी. अंतिम वर्षाची विद्यार्थिनी होती. तिने वसतिगृहात गळफास घेऊन आत्महत्या केल्याची माहिती समोर आली आहे.
आत्महत्येचे नेमके कारण अद्याप समजू शकलेले नाही. सुमारे तीन महिन्यांपूर्वीच तिचा विवाह एका पोलीस शिपायासोबत ठरला होता. दरम्यान, मुलीच्या निधनामुळे कुटुंबीयांवर दुःखाचा डोंगर कोसळला असून त्यांचा आक्रोश हृदयद्रावक आहे.
घटनेची माहिती मिळताच एपीएमसी पोलीस ठाण्याचे अधिकारी तात्काळ घटनास्थळी दाखल झाले आणि पंचनामा केला. मृतदेह शवविच्छेदनासाठी जिल्हा रुग्णालयात पाठविण्यात आला आहे. एपीएमसी पोलिसांनी आकस्मिक मृत्यूची नोंद करून पुढील तपास सुरू केला आहे.
ಬೆಳಗಾವಿ : ಹುಟ್ಟುಹಬ್ಬದ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು; ವಸತಿ ನಿಲಯದಲ್ಲಿ ನಡೆದ ಘಟನೆ!
ಬೆಳಗಾವಿ : ಹುಟ್ಟುಹಬ್ಬದ ದಿನವೇ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ಬೆಳಗಾವಿಯ ಅಜಾನ್ ನಗರ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.
ಹುಕ್ಕೇರಿ ತಾಲ್ಲೂಕಿನ ಕಟಾಬಳ್ಳಿಯ ಗ್ರಾಮದ ಕಾವೇರಿ ಉಮೇಶ್ ನಾಯಕ್ (ವಯಸ್ಸು 21) ಅವರು ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಅವರು ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸುಮಾರು ಮೂರು ತಿಂಗಳ ಹಿಂದೆ ಅವರ ವಿವಾಹವನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ನಿಶ್ಚಯಿಸಲಾಗಿತ್ತು ಎನ್ನಲಾಗಿದೆ. ಮಗಳ ಅಕಾಲಿಕ ನಿಧನದಿಂದ ಕುಟುಂಬಸ್ಥರ ಮೇಲೆ ದುಃಖದ ಮೋಡ ಕವಿದಿದ್ದು, ಅವರ ಆಕ್ರಂದನ ಮನಕಲುಕುವಂತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಎಪಿಎಂಸಿ ಪೊಲೀಸರು ಆಕಸ್ಮಿಕ ಮರಣ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


