‘सिंघम’चे पुनरागमन; आयजीपी म्हणून आयपीएस अधिकारी, संदीप पाटील पुन्हा बेळगावकरांच्या सेवेत.
बेळगाव : बेळगावच्या पोलीस प्रशासनाच्या इतिहासात आपल्या धडाकेबाज कारभाराने आणि जनस्नेही भूमिकेने सुवर्णकाळ निर्माण करणारे आयपीएस अधिकारी संदीप पाटील तब्बल 15 वर्षांनंतर पुन्हा एकदा बेळगावात दाखल होत आहेत. उत्तर परीक्षेत्राचे आयजीपी म्हणून त्यांची नियुक्ती झाली असून 6 मे 2026 रोजी कर्नाटक सरकारने यासंदर्भातील अधिकृत आदेश जारी केले आहेत.
2010 ते 2013 या काळात बेळगावचे पोलीस अधीक्षक म्हणून कार्यरत असताना संदीप पाटील यांनी कायदा व सुव्यवस्था प्रभावीपणे हाताळत गुन्हेगारीवर कठोर कारवाई केली होती. त्यांच्या कार्यकाळात अनेक गुन्हेगारी टोळ्यांवर कारवाई झाली आणि सर्वसामान्य नागरिकांचा पोलिसांवरील विश्वास अधिक दृढ झाला. त्यांच्या पारदर्शक व लोकाभिमुख कार्यशैलीमुळे ते अल्पावधीतच बेळगावकरांचे लाडके अधिकारी बनले होते.
त्यांची तडकाफडकी बदली झाल्यानंतर बेळगावात अभूतपूर्व प्रतिक्रिया उमटली होती. जात, धर्म आणि राजकारण बाजूला ठेवत हजारो नागरिकांनी रस्त्यावर उतरून त्यांच्या बदलीला विरोध दर्शविला होता. जिल्हाधिकारी कार्यालयावर विराट मोर्चा काढत “संदीप पाटील यांची बदली रद्द करा” अशा घोषणांनी शहर दणाणून गेले होते. एखाद्या पोलीस अधिकाऱ्याच्या समर्थनार्थ झालेले ते कर्नाटकातील सर्वात मोठे आंदोलन मानले जाते.
दरम्यान, विद्यमान आयजीपी डॉ. चेतनसिंग राठोड यांची बदली बेंगळुरू येथे सीआयडी विभागात करण्यात आली असून त्यांच्या जागी संदीप पाटील उत्तर परीक्षेत्राची सूत्रे स्वीकारणार आहेत. तसेच, अनुपम अगरवाल यांची नियुक्ती केएसआरपी मध्ये करण्यात आली आहे.
विशेष म्हणजे, एसपी म्हणून काम केल्यानंतर त्याच ठिकाणी पदोन्नतीवर आयजीपी म्हणून पुनरागमन करणारे ते बेळगावच्या इतिहासातील पहिलेच वरिष्ठ अधिकारी ठरले आहेत. गेल्या 15 वर्षांत त्यांनी बेंगळुरू शहरासह राज्याच्या गुन्हे अन्वेषण विभागात विविध महत्त्वाच्या पदांवर काम केले आहे. त्यांचा प्रदीर्घ प्रशासकीय अनुभव आता बेळगाव जिल्ह्यासह संपूर्ण उत्तर परीक्षेत्रासाठी लाभदायक ठरणार असल्याचे मानले जात आहे.
त्यांच्या नियुक्तीचे सोशल मीडियावर “सिंघम इज बॅक” अशा घोषणांनी स्वागत करण्यात येत असून, त्यांच्या पुनरागमनामुळे गुन्हेगारी प्रवृत्तींमध्ये धास्तीचे वातावरण निर्माण झाले आहे. तर सर्वसामान्य नागरिकांमध्ये सुरक्षिततेची भावना पुन्हा दृढ झाली आहे.
ಬೆಳಗಾವಿಯ ಪೊಲೀಸ್ ಇಲಾಖೆಯಲ್ಲಿ ‘ಸಿಂಘಮ ಎಂದೆ ಹೆಸರುವಾಸಿಯಾಗಿದ್ದ’ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಐಜಿಪಿ ಆಗಿ ನಿಯುಕ್ತಿ.
ಬೆಳಗಾವಿ : ಬೆಳಗಾವಿ ಪೊಲೀಸ್ ಆಡಳಿತದ ಇತಿಹಾಸದಲ್ಲಿ ತಮ್ಮ ಕಡಕ್ ಕಾರ್ಯಶೈಲಿ ಹಾಗೂ ಜನಸ್ನೇಹಿ ನಿಲುವಿನಿಂದ ಸುವರ್ಣಯುಗ ನಿರ್ಮಿಸಿದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು 15 ವರ್ಷಗಳ ಬಳಿಕ ಮತ್ತೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಉತ್ತರ ವಲಯದ ಐಜಿಪಿ ಆಗಿ ಅವರ ನೇಮಕವಾಗಿದ್ದು, ಮೇ 6, 2026 ರಂದು ಕರ್ನಾಟಕ ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.
2010 ರಿಂದ 2013ರ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸಂದೀಪ್ ಪಾಟೀಲ್ ಅವರು ಕಾನೂನು-ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಅಪರಾಧ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಅವರ ಅವಧಿಯಲ್ಲಿ ಹಲವು ಅಪರಾಧಿ ಗುಂಪುಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದ್ದರು. ಪಾರದರ್ಶಕ ಹಾಗೂ ಜನಾಭಿಮುಖ ಕಾರ್ಯಶೈಲಿಯಿಂದ ಅವರು ಅಲ್ಪಾವಧಿಯಲ್ಲೇ ಬೆಳಗಾವಿಯ ಜನಪ್ರಿಯ ಅಧಿಕಾರಿಯಾಗಿ ಹೊರಹೊಮ್ಮಿದ್ದರು.
ಅವರ ತುರ್ತು ವರ್ಗಾವಣೆಯ ನಂತರ ಬೆಳಗಾವಿಯಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಾತಿ, ಧರ್ಮ ಹಾಗೂ ರಾಜಕೀಯ ಭೇದಗಳನ್ನು ಮೀರಿ ಸಾವಿರಾರು ನಾಗರಿಕರು ಬೀದಿಗಿಳಿದು ಅವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಭಾರಿ ಮೆರವಣಿಗೆ ನಡೆಸಿ “ಸಂದೀಪ್ ಪಾಟೀಲ್ ವರ್ಗಾವಣೆ ರದ್ದುಪಡಿಸಿ” ಎಂಬ ಘೋಷಣೆಗಳಿಂದ ನಗರ ಮೊಳಗಿತ್ತು. ಒಬ್ಬ ಪೊಲೀಸ್ ಅಧಿಕಾರಿಯ ಬೆಂಬಲಕ್ಕಾಗಿ ನಡೆದ ಆಂದೋಲನವು ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಪ್ರತಿಭಟನೆ ಎಂದು ಪರಿಗಣಿಸಲಾಗಿದೆ.
ಈ ನಡುವೆ, ಪ್ರಸ್ತುತ ಐಜಿಪಿ ಡಾ. ಚೇತನಸಿಂಗ್ ರಾಠೋಡ್ ಅವರನ್ನು ಬೆಂಗಳೂರು ನಗರದ ಸಿಐಡಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಸಂದೀಪ್ ಪಾಟೀಲ್ ಉತ್ತರ ವಲಯದ ಹೊಣೆಗಾರಿಕೆ ಸ್ವೀಕರಿಸಲಿದ್ದಾರೆ. ಹಾಗೆಯೇ ಅನುಪಮ್ ಅಗರವಾಲ್ ಅವರನ್ನು ಕೆಎಸ್ಆರ್ಪಿ ವಿಭಾಗಕ್ಕೆ ನೇಮಕ ಮಾಡಲಾಗಿದೆ.
ವಿಶೇಷವೆಂದರೆ, ಎಸ್ಪಿ ಆಗಿ ಸೇವೆ ಸಲ್ಲಿಸಿದ ಅದೇ ಸ್ಥಳಕ್ಕೆ ಪದೋನ್ನತಿಯೊಂದಿಗೆ ಐಜಿಪಿಯಾಗಿ ಮರಳುತ್ತಿರುವ ಬೆಳಗಾವಿಯ ಇತಿಹಾಸದಲ್ಲಿನ ಮೊದಲ ಹಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಸಂದೀಪ್ ಪಾಟೀಲ್ ಪಾತ್ರರಾಗಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅಪರಾಧ ತನಿಖಾ ವಿಭಾಗದಲ್ಲಿ ವಿವಿಧ ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರ ಪುನರಾಗಮನವನ್ನು ಸಾಮಾಜಿಕ ಜಾಲತಾಣಗಳಲ್ಲಿ “ಸಿಂಘಮ ಇಜ ಬ್ಯಾಕ್” ಎಂಬ ಘೋಷಣೆಗಳ ಮೂಲಕ ಸ್ವಾಗತಿಸಲಾಗುತ್ತಿದೆ. ಅವರ ನೇಮಕದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲಿ ಆತಂಕ ಮೂಡಿದರೆ, ಸಾರ್ವಜನಿಕರಲ್ಲಿ ಸುರಕ್ಷಿತೆಯ ಭಾವನೆ ಮತ್ತಷ್ಟು ಬಲಗೊಂಡಿದೆ.


