हत्तरगुंजी येथील हक्कीपिक्की व कातकरी समाजाच्या वस्तीला जिल्हा परिषद मुख्य कार्यकारी अधिकाऱ्यांची भेट; मूलभूत सुविधांबाबत तातडीच्या उपाययोजनांचे निर्देश.
खानापूर, प्रतिनिधी : खानापूर तालुक्यातील हलकर्णी ग्रामपंचायत हद्दीतील हत्तरगुंजी गावाजवळील इंदिरानगर परिसरात वास्तव्यास असलेल्या हक्कीपिक्की आदिवासी व कातकरी समाजाच्या वस्तीला जिल्हा परिषदेचे मुख्य कार्यकारी अधिकारी राहुल शिंदे यांनी आज प्रत्यक्ष भेट देऊन नागरिकांच्या समस्या जाणून घेतल्या.
कर्नाटक राज्य दलित संघर्ष समिती (समन्वय संघटना) यांनी हक्कीपिक्की आदिवासी व कातकरी समाजाच्या विविध मागण्यांसाठी सातत्याने पाठपुरावा करत शासन, जिल्हाधिकारी तसेच जिल्ह्याचे पालकमंत्री यांच्याकडे निवेदने सादर केली होती. या पाठपुराव्याची दखल घेत जिल्हा परिषद मुख्य कार्यकारी अधिकारी राहुल शिंदे यांनी तालुक्यातील विविध विभागांच्या अधिकाऱ्यांसह वस्तीला भेट दिली.
यावेळी त्यांनी दोन्ही समाजातील मुलांच्या शिक्षणाची स्थिती, आरोग्य सुविधा, पिण्याच्या पाण्याची उपलब्धता, आधार कार्ड व ओळखपत्रांची पूर्तता, घरकुलासाठी जागा तसेच इतर मूलभूत सुविधांचा आढावा घेतला. नागरिकांशी संवाद साधून त्यांच्या अडचणी जाणून घेत संबंधित विभागांच्या अधिकाऱ्यांना आवश्यक सुविधा तातडीने उपलब्ध करून देण्याच्या सूचना दिल्या.
या भेटीदरम्यान खानापूर तालुक्याचे कार्यकारी अधिकारी रमेश मेत्री, समाजकल्याण विभागाचे सहाय्यक संचालक बसवराज चेन्नईनवर, क्षेत्र शिक्षणाधिकारी, महिला व बालकल्याण विभागाचे अधिकारी, हलकर्णी ग्रामपंचायतीच्या विकास अधिकारी रेश्मा पानेवाली तसेच तालुक्यातील विविध विभागांचे अधिकारी उपस्थित होते.
याशिवाय कर्नाटक राज्य दलित संघर्ष समितीचे जिल्हा प्रधान सचिव राजशेखर हिंडलगी, तालुका अध्यक्ष राघवेंद्र चलवादी, सावित्री मादार, ग्रामपंचायत सदस्य रवी मादार, संदीप चलवादी, मारुती कांबळे, बसवराज मादार, दयानंद हक्कीपिक्की, कुमार हक्कीपिक्की, कार्तिक तळवार, दत्तू कातकरी यांच्यासह समाजबांधव मोठ्या संख्येने उपस्थित होते.
ಹತ್ತರಗುಂಜಿ ಬಳಿ ಇರುವ ಹಕ್ಕಿಪಿಕ್ಕಿ ಹಾಗೂ ಕಾತ್ಕರಿ ಸಮುದಾಯದ ವಸತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಭೇಟಿ; ಮೂಲಭೂತ ಸೌಲಭ್ಯಗಳ ಕುರಿತು ತುರ್ತು ಕ್ರಮಕ್ಕೆ ಸೂಚನೆ.
ಖಾನಾಪುರ, ಪ್ರತಿನಿಧಿ : ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತರಗುಂಜಿ ಗ್ರಾಮದ ಬಳಿ ಇಂದಿರಾನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ ಆದಿವಾಸಿ ಹಾಗೂ ಕಾತ್ಕರಿ ಸಮುದಾಯದ ವಸತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಇಂದು ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಮನ್ವಯ ಸಂಘಟನೆ) ವತಿಯಿಂದ ಹಕ್ಕಿಪಿಕ್ಕಿ ಆದಿವಾಸಿ ಹಾಗೂ ಕಾತ್ಕರಿ ಸಮುದಾಯದ ವಿವಿಧ ಬೇಡಿಕೆಗಳ ಕುರಿತು ನಿರಂತರವಾಗಿ ಹೋರಾಟ ನಡೆಸಿ, ಸರ್ಕಾರ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಲವು ಮನವಿಗಳನ್ನು ಸಲ್ಲಿಸಲಾಗಿತ್ತು. ಈ ನಿರಂತರ ಪ್ರಯತ್ನಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಸತಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರು ಎರಡೂ ಸಮುದಾಯಗಳ ಮಕ್ಕಳ ಶಿಕ್ಷಣದ ಸ್ಥಿತಿ, ಆರೋಗ್ಯ ಸೌಲಭ್ಯಗಳು, ಕುಡಿಯುವ ನೀರಿನ ಲಭ್ಯತೆ, ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳ ಪೂರ್ಣಗೊಳಿಸುವಿಕೆ, ಮನೆ ನಿರ್ಮಾಣಕ್ಕಾಗಿ ಜಾಗದ ಲಭ್ಯತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ತಕ್ಷಣವೇ ಒದಗಿಸಲು ಸೂಚನೆ ನೀಡಿದರು.
ಈ ಭೇಟಿ ವೇಳೆ ಖಾನಾಪುರ ತಾಲೂಕಿನ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮೇತ್ರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಚೆನ್ನೈನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಹಲಕರ್ಣಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರೇಶ್ಮಾ ಪಾಣೇವಾಲಿ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಲ್ಲದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ, ತಾಲೂಕು ಅಧ್ಯಕ್ಷ ರಾಗವೇಂದ್ರ ಚಲವಾದಿ, ಸಾವಿತ್ರಿ ಮದಾರ, ಗ್ರಾಮ ಪಂಚಾಯಿತಿ ಸದಸ್ಯ ರವಿ ಮದಾರ, ಸಂದೀಪ್ ಚಲವಾದಿ, ಮಾರುತಿ ಕಾಂಬಳೆ, ಬಸವರಾಜ ಮದಾರ, ದಯಾನಂದ ಹಕ್ಕಿಪಿಕ್ಕಿ, ಕುಮಾರ್ ಹಕ್ಕಿಪಿಕ್ಕಿ, ಕಾರ್ತಿಕ್ ತಳವಾರ, ದತ್ತು ಕಾತ್ಕರಿ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಹಾಗೂ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

