भुमी अमावास्येनिमित्त कक्केरीच्या बिष्टादेवी व मूकम्मादेवी मंदिरात भाविकांची मोठी गर्दी.
कक्केरी (प्रतिनिधी) : खानापूर तालुक्यातील कक्केरी येथील श्री बिष्टादेवी तसेच मूकम्मादेवी मंदिरात मंगळवारी भुमी अमावास्येनिमित्त भाविकांनी मोठ्या संख्येने दर्शनासाठी हजेरी लावली. दिवसभर मंदिर परिसरात भक्तांची मोठी गर्दी पाहायला मिळाली. भाविकांनी देवीचे दर्शन घेऊन सोने, चांदी, रोख रक्कम, ओठी भरणे तसेच विविध नवस अर्पण केले आणि देवीचा आशीर्वाद घेतला.
यावेळी अनेक भाविकांनी नव्याने खरेदी केलेले ट्रॅक्टर, लॉरी, दुचाकी तसेच इतर वाहने मंदिरासमोर आणून मंदिराच्या पुजाऱ्यांकडून विशेष पूजाविधी करून घेतला.
कक्केरी, लिंगणमठ, गुंडोळी, गोधोळी, चुंचवाड, मास्केनट्टी, करिकट्टी, सुरपूर, केरवाड, भूरणकी, दड्डी, हिरेकरदड्डी, गस्टोळी, बीडी आदी गावांतील शेतकऱ्यांनी पारंपरिक पद्धतीने मातीचे बसवाण्णा तयार करून त्याची पूजा केली. काही ठिकाणी लोहार व सुतार समाजातील कारागिरांनी तयार केलेल्या रंगीत मातीच्या बसवण्णाचीही विधीवत पूजा करण्यात आली.
ಭೂಮಿ ಅಮಾವಾಸ್ಯೆ ನಿಮಿತ್ತ ಕಕ್ಕೇರಿಯ ಬಿಷ್ಟಾದೇವಿ ಹಾಗೂ ಮೂಕಮ್ಮದೇವಿ ದೇವಸ್ಥಾನಗಳಲ್ಲಿ ಅಪಾರ ಭಕ್ತ ಸಮೂಹ ನೆರೆದಿತ್ತು.
ಕಕ್ಕೇರಿ : ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಭಿಷ್ಟಾದೇವಿ ಹಾಗೂ ಸಹೋದರಿ ಮೂಕಮಾದೇವಿ ಮಂದಿರಕ್ಕೆ ಮಂಗಳವಾರದಂದು ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ ಭಕ್ತರ ದಂಡೇ ಹರಿದು ಬಂತು. ಭಕ್ತರು ಮಂದಿರಕ್ಕೆ ಭೇಟಿ ನೀಡಿ ಬೇಡಿಕೊಂಡ ಹರಕೆ ತೀರಿಸಲು ಬಂಗಾರ, ಬೆಳ್ಳಿ , ಹಣ,ಉಡಿ ತುಂಬಿ , ಆಶೀರ್ವಾದ ಪಡೆದರು.
ಮಂದಿರದ ಮುಂದೆ ಭಕ್ತರು ಹೊಸ ವಾಹನಗಳು, ಟ್ರ್ಯಾಕ್ಟರ್,ಲಾರಿ, ದ್ವಿಚಕ್ರ ವಾಹನಗಳು, ತೆಗೆದುಕೊಂಡು ಬಂದು ಅರ್ಚಕರ ಕಡೆಯಿಂದ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು ಹಾಗೆಯೇ
ಕಕ್ಕೇರಿ, ಲಿಂಗನಮಠ,ಗುಂಡೊಳ್ಳಿ, ಗೋಧೋಳಿ ಚುಂಚವಾಡ, ಮಾಸ್ಕೆನಟ್ಟಿ, ಕರಿಕಟ್ಟಿ, ಸುರಪುರ ಕೇರವಾಡ, ಭೂರನಕಿ, ಸುರಪುರ, ದಡ್ಡಿ, ಹಿರೇಕರದಡ್ಡಿ, ಘಸ್ಟೋಳ್ಳಿ ,ಬೀಡಿ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರು ಬಸವಣ್ಣನನ್ನು ಮಣ್ಣಿನಿಂದ ತಯಾರಿಸಿದರೆ, ಇನ್ನೂ ಕೆಲ ರೈತರು ಕಮ್ಮಾರರು, ಬಡಿಗೇರರು, ಮಣ್ಣಿನಿಂದ ತಯಾರಿಸಿ ಬಣ್ಣ ಹಚ್ಚಿರುವ ಬಸವಣ್ಣನನ್ನು ತಂದು ಪೂಜಿಸಿದರು.

