बिदरमध्ये विज पडल्याने दोन तरुण शेतकऱ्यांचा मृत्यु.
बिदर : कर्नाटकातील बिदर जिल्ह्यात दुर्दैवी घटना घडली असून बीज पडल्याने वीज विजेचा धक्का बसून दोन तरुण शेतकऱ्यांचा मृत्यू झाला आहे. ही घटना भालकी तालुक्यातील नावदगी गावात घडली आहे.
मृतांची नावे रेवणसिद्ध (वय 28, रा. नावदगी) आणि यल्लालिंग (वय 28, मूळ गाव जेवरगी) अशी आहेत. हे दोघेही तरुण शेतकरी शेतात कृषी काम करत असताना अचानक पावसासह विजेचा कडकडाट झाला आणि त्यांना विजेचा जबरदस्त धक्का बसला. या घटनेत दोघांचाही जागीच मृत्यू झाला, अशी माहिती मिळाली आहे.
घटनेची माहिती मिळताच खटाक चिंचोळी पोलिस ठाणे हद्दीतील पोलिसांनी घटनास्थळी भेट देऊन पंचनामा केला. या प्रकरणी गुन्हा नोंदवून पुढील तपास सुरू आहे.
या दुर्दैवी घटनेमुळे परिसरात शोककळा पसरली असून स्थानिक शेतकरी बांधवांनी दोन्ही तरुणांच्या अकाली निधनाबद्दल तीव्र दुःख व्यक्त केले आहे.
ಬೀದರ್ನಲ್ಲಿ ಗುಡುಗು ಮಿಂಚು ಬಡಿದು ಇಬ್ಬರು ಯುವ ರೈತರ ದುರ್ಮರಣ.
ಬೀದರ್ : ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಗುಡುಗು ಮಿಂಚು ಬಡಿದ ಪರಿಣಾಮ ಇಬ್ಬರು ಯುವ ರೈತರು ಸಾವನ್ನಪ್ಪಿದ್ದಾರೆ. ಈ ಘಟನೆ ಭಾಲ್ಕಿ ತಾಲೂಕು ವ್ಯಾಪ್ತಿಯ ನಾವದಗಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರೇವಣಸಿದ್ದ (ವಯಸ್ಸು 28, ನಿವಾಸಿ ನಾವದಗಿ) ಹಾಗೂ ಯಲ್ಲಾಲಿಂಗ (ವಯಸ್ಸು 28, ಮೂಲ ಊರು ಜೆವರ್ಗಿ) ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವ ರೈತರು ಹೊಲದಲ್ಲಿ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾಗ ಅಚಾನಕ್ ಮಳೆಯೊಂದಿಗೆ ಮಿಂಚು-ಗುಡುಗು ಸಂಭವಿಸಿ, ಅವರಿಗೆ ಭಾರೀ ಮಿಂಚು ಬಡಿದ.
ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಖಟಾಕ್ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಈ ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಸ್ಥಳೀಯ ರೈತ ಬಂಧುಗಳು ಇಬ್ಬರು ಯುವಕರ ಅಕಾಲಿಕ ನಿಧನಕ್ಕೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.


