खानापूर : शांतीनिकेतन पब्लिक स्कूलला कर्नाटक विधानसभेचे उपसभापती रुद्राप्पा लमानी यांची सदिच्छा भेट.
खानापूर ; कर्नाटक विधानसभेचे उपसभापती रुद्राप्पा लमानी यांनी आज शनिवार, दिनांक 20 डिसेंबर रोजी खानापूर येथील शांतीनिकेतन पब्लिक स्कूलला सदिच्छा भेट दिली. या भेटीप्रसंगी शाळेचे संस्थापक व विद्यमान चेअरमन तसेच खानापूर तालुक्याचे आमदार विठ्ठल हलगेकर यांनी शाळेच्या वतीने उपसभापती लमानी यांचे स्वागत केले.

यावेळी उपसभापती लमानी यांनी संपूर्ण शाळेची पाहणी केली. शाळेतील शैक्षणिक सुविधा, अध्यापन पद्धती, शिस्तबद्ध वातावरण व विद्यार्थ्यांच्या सर्वांगीण विकासासाठी राबविण्यात येणाऱ्या उपक्रमांची त्यांनी माहिती घेतली. शाळेची झालेली उल्लेखनीय प्रगती पाहून त्यांनी समाधान व्यक्त केले. तसेच शाळेचे संस्थापक आमदार विठ्ठल हलगेकर, संचालक मंडळ, शिक्षकवर्ग व कर्मचारीवर्ग यांच्या कार्याचे त्यांनी विशेष कौतुक केले.

पुढे बोलताना उपसभापती रुद्राप्पा लमानी म्हणाले की, खानापूर तालुका हा निसर्गसंपन्न तालुका असून हा तालुका मला फार आवडतो. लवकरच आपण खानापूर तालुक्याच्या सविस्तर दौऱ्यावर येणार असल्याचे त्यांनी सांगितले. खानापूर तालुक्याच्या सर्वांगीण विकासासाठी विविध योजना राबविण्यासाठी आमदार विठ्ठल हलगेकर यांच्या पाठीशी आपण खंबीरपणे उभे राहू, तसेच यासंदर्भात मुख्यमंत्री सिद्धरामय्या यांच्याकडे पाठपुरावा करणार असल्याची ग्वाहीही त्यांनी दिली.
या कार्यक्रमास शांतीनिकेतन शिक्षण संस्थेचे सचिव आर. एस. पाटील, शाळेच्या प्रिन्सिपल स्वातीकमल पाठक (वाळवे), शाळेच्या पीआरओ मनीषा हालगेकर (भोसले) यांच्यासह शाळेतील शिक्षकवर्ग व कर्मचारीवर्ग मोठ्या संख्येने उपस्थित होते.
ಖಾನಾಪುರ : ಶಾಂತಿನಿಕೇತನ ಪಬ್ಲಿಕ್ ಶಾಲೆಗೆ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಸೌಹಾರ್ದ ಭೇಟಿ
ಖಾನಾಪುರ ; ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಇಂದು ಶನಿವಾರ, ದಿನಾಂಕ 20 ಡಿಸೆಂಬರ್ ರಂದು ಖಾನಾಪುರದಲ್ಲಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಗೆ ಸೌಹಾರ್ದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರು ಹಾಗೂ ಹಾಲಿ ಚೇರ್ಮನ್ ಮತ್ತು ಖಾನಾಪುರ ತಾಲ್ಲೂಕಿನ ಜನ ಪ್ರಿಯ ಶಾಸಕರಾದ ವಿಠ್ಠಲ ಹಲಗೇಕರ ಅವರು ಶಾಲೆಯ ಪರವಾಗಿ ಉಪಸಭಾಪತಿ ಲಮಾಣಿ ಅವರಿಗೆ ಸ್ವಾಗತ ಕೋರಿದರು.
ಈ ವೇಳೆ ಉಪಸಭಾಪತಿ ಲಮಾಣಿ ಅವರು ಸಂಪೂರ್ಣ ಶಾಲೆಯ ವೀಕ್ಷಣೆ ನಡೆಸಿ, ಶಾಲೆಯ ಶೈಕ್ಷಣಿಕ ಸೌಲಭ್ಯಗಳು, ಬೋಧನಾ ವಿಧಾನಗಳು, ಶಿಸ್ತುಬದ್ಧ ವಾತಾವರಣ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು. ಶಾಲೆಯ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಕಂಡು ಅವರು ತೃಪ್ತಿ ವ್ಯಕ್ತಪಡಿಸಿದರು. ಜೊತೆಗೆ ಶಾಲೆಯ ಸಂಸ್ಥಾಪಕ ಹಾಗೂ ಶಾಸಕರಾದ ವಿಠ್ಠಲ ಹಲಗೇಕರ, ನಿರ್ದೇಶಕ ಮಂಡಳಿ, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದರು.
ಮುಂದೆ ಮಾತನಾಡಿದ ಉಪಸಭಾಪತಿ ರುದ್ರಪ್ಪ ಲಮಾಣಿ ಯವರು, ಖಾನಾಪುರ ತಾಲ್ಲೂಕು ಪ್ರಕೃತಿ ಸಂಪನ್ನ ತಾಲ್ಲೂಕಾಗಿದ್ದು, ಈ ತಾಲ್ಲೂಕು ನನಗೆ ಬಹಳ ಇಷ್ಟ ಎಂದು ಹೇಳಿದರು. ಶೀಘ್ರದಲ್ಲೇ ಸಮಗ್ರ ಖಾನಾಪುರ ತಾಲ್ಲೂಕಿನ ಪ್ರವಾಸ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಖಾನಾಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಶಾಸಕರಾದ ವಿಠ್ಠಲ ಹಲಗೇಕರ ಅವರ ಬೆಂಬಲಕ್ಕೆ ನಾವೂ ದೃಢವಾಗಿ ನಿಲ್ಲುತ್ತೇವೆ ಮತ್ತು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅನುಸರಣೆ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್. ಎಸ್. ಪಾಟೀಲ, ಶಾಲೆಯ ಪ್ರಿನ್ಸಿಪಲ್ ಸ್ವಾತಿಕಮಲ್ ಪಾಠಕ್ (ವಾಳ್ವೆ), ಶಾಲೆಯ ಪಿಆರ್ಒ ಮನಿಷಾ ಹಲಗೇಕರ (ಭೋಸಲೆ) ಸೇರಿದಂತೆ ಶಾಲೆಯ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


