क्षेत्र शिक्षणाधिकारी कार्यालयातर्फे एसएसएलसी 100% यशस्वी शाळांचा सन्मान.
खानापूर : खानापूर तालुक्यातील 2025-26 शैक्षणिक वर्षातील एस.एस.एल.सी. वार्षिक परीक्षेत शंभर टक्के निकाल मिळविणाऱ्या शाळांच्या मुख्याध्यापकांचा व विद्यार्थ्यांचा भव्य सत्कार समारंभ सोमवार, दि. 04 मे 2026 रोजी आयोजित करण्यात आला आहे.
क्षेत्र शिक्षणाधिकारी व क्षेत्र समन्वय अधिकारी, खानापूर यांच्या संयुक्त विद्यमाने हा कार्यक्रम स्वामी विवेकानंद इंग्लिश मीडियम हायस्कूल, खानापूर येथे पार पडणार आहे.
कार्यक्रमाच्या अध्यक्षस्थानी क्षेत्र शिक्षणाधिकारी श्री. पी. रामप्पा राहणार आहेत. प्रमुख पाहुणे म्हणून खानापूर विधानसभा मतदारसंघाचे आमदार श्री. विठ्ठलराव हलगेकर उपस्थित राहणार आहेत.
यावेळी तहसीलदार श्री. दुंडप्पा कोमार, उपसंचालक (शालेय शिक्षण विभाग) श्रीमती लीलावती हिरेमठ (बेळगाव), उपसंचालक (अ) डायट मण्णूर श्री. अशोक कुमार सिंधगी, तालुका पंचायत कार्यकारी अधिकारी श्री. रमेश मेत्री, तसेच जिल्हा एस.एस.एल.सी. नोडल अधिकारी व शिक्षणाधिकारी श्री. एस. एस. हिरेमठ यांची प्रमुख उपस्थिती लाभणार आहे.
तसेच तालुक्यातील माध्यमिक शाळांच्या संघटनांचे अध्यक्ष, सचिव व पदाधिकारी यांनाही निमंत्रित करण्यात आले आहे.
एस.एस.एल.सी. परीक्षेत उल्लेखनीय यश संपादन करून तालुक्याचा नावलौकिक वाढविणाऱ्या शाळा व विद्यार्थ्यांचा गौरव करण्यासाठी हा समारंभ आयोजित करण्यात आला असून, संबंधित सर्वांनी उपस्थित राहावे, असे आवाहन क्षेत्र समन्वय अधिकारी, क्षेत्र शिक्षणाधिकारी तसेच एस.एस.एल.सी. तालुका नोडल अधिकारी व कर्मचारी वर्ग यांच्या वतीने करण्यात आले आहे.
ಖಾನಾಊ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಎಸ್ಎಸ್ಎಲ್ಸಿ ಯಲ್ಲಿ 100% ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರಿಗೆ ಸನ್ಮಾನ.
ಖಾನಾಪುರ : ಖಾನಾಪುರ ತಾಲ್ಲೂಕಿನ 2025-26ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿದ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿಗಳ ಭವ್ಯ ಸನ್ಮಾನ ಸಮಾರಂಭವನ್ನು ಸೋಮವಾರ, ದಿನಾಂಕ 04 ಮೇ 2026ರಂದು ಆಯೋಜಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ, ಖಾನಾಪುರ ಅವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಖಾನಾಪುರದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಪಿ. ರಾಮಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲರಾವ್ ಹಲಗೇಕರ್ ಅವರು ಉಪಸ್ಥಿತ ಇರುವರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀ ದುಂಡಪ್ಪ ಕೋಮಾರ, ಉಪನಿರ್ದೇಶಕರು (ಶಾಲಾ ಶಿಕ್ಷಣ ಇಲಾಖೆ) ಶ್ರೀಮತಿ ಲೀಲಾವತಿ ಹಿರೇಮಠ (ಬೆಳಗಾವಿ), ಉಪನಿರ್ದೇಶಕರು (ಅ) ಡಯಟ್ ಮಣ್ಣೂರು ಶ್ರೀ ಅಶೋಕ್ ಕುಮಾರ್ ಸಿಂಧಗಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಮೇಶ್ ಮೇತ್ರಿ, ಹಾಗು ಜಿಲ್ಲಾ ಎಸ್.ಎಸ್.ಎಲ್.ಸಿ ನೊಡಲ್ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಶ್ರೀ ಎಸ್.ಎಸ್. ಹಿರೇಮಠ ಅವರ ಪ್ರಮುಖ ಉಪಸ್ಥಿತಿ ಇರಲಿದೆ. ಜೊತೆಗೆ ತಾಲ್ಲೂಕಿನ ಪ್ರೌಢಶಾಲೆಗಳ ಸಂಘಟನೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೂ ಆಹ್ವಾನ ನೀಡಲಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಶಾಲೆಗಳು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದ್ದು, ಸಂಬಂಧಪಟ್ಟ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಸ್.ಎಸ್.ಎಲ್.ಸಿ ತಾಲ್ಲೂಕು ನೊಡಲ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ವಿನಂತಿಸಲಾಗಿದೆ.

