श्रवण पाटीलची कुस्ती स्पर्धेत दमदार कामगिरी; 82 किलो वजन गटात सुवर्णपदक.
खानापूर : प्रतिनिधी
कर्नाटक सरकारच्या पदवीपूर्व शिक्षण विभाग व केएलई संस्थेच्या पदवीपूर्व महाविद्यालय, बैलहोंगल यांच्या संयुक्त विद्यमाने बेळगाव जिल्ह्यातील पदवीपूर्व महाविद्यालयीन विद्यार्थ्यांच्या कुस्ती स्पर्धेचे आयोजन जिल्हा क्रीडांगण, बेळगाव येथे करण्यात आले.

या स्पर्धेत SPDCL संयुक्त महाविद्यालय, चंद्रगी येथील विद्यार्थी श्रवण मऱ्याप्पा पाटील (खानापूर) याने 82 किलो वजन गटात उत्कृष्ट कामगिरी करत प्रथम क्रमांक पटकावून सुवर्णपदक मिळविले. या उल्लेखनीय कामगिरीमुळे श्रवण पाटील याची राज्यस्तरीय कुस्ती स्पर्धेसाठी निवड झाली आहे.
श्रवणच्या या यशाबद्दल महाविद्यालयाचे प्राचार्य सतीश पाटील, कुस्ती प्रशिक्षक मंजुनाथ टी. व रवी के. यांचे मार्गदर्शन लाभले. तसेच त्याचे वडील मऱ्याप्पा पाटील यांनी सातत्याने प्रोत्साहन दिले.
श्रवण पाटीलच्या या यशाबद्दल महाविद्यालयातील शिक्षक, विद्यार्थी तसेच खानापूर व चंद्रगी परीसरातून त्याचे अभिनंदन होत असून, राज्यस्तरीय स्पर्धेसाठी त्याला शुभेच्छा देण्यात येत आहेत.
ಕುಸ್ತಿ ಸ್ಪರ್ಧೆಯಲ್ಲಿ ಶ್ರವಣ ಪಾಟೀಲನಿಗೆ ಭರ್ಜರಿ ಸಾಧನೆ; 82 ಕೆ.ಜಿ. ತೂಕದ ವಿಭಾಗದಲ್ಲಿ ಚಿನ್ನದ ಪದಕ.
ಖಾನಾಪುರ : ಪ್ರತಿನಿಧಿ
ಕರ್ನಾಟಕ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕೆಎಲ್ಇ ಸಂಸ್ಥೆಯ ಬೈಲಹೊಂಗಲ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕುಸ್ತಿ ಸ್ಪರ್ಧೆಯನ್ನು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಎಸ್ಪಿಡಿಸಿಎಲ್ ಸಂಯುಕ್ತ ಪದವಿಪೂರ್ವ ಕಾಲೇಜು, ಚಂದ್ರಗಿಯ ವಿದ್ಯಾರ್ಥಿ ಶ್ರವಣ ಮರ್ಯಪ್ಪ ಪಾಟೀಲ (ಖಾನಾಪುರ) ಅವರು 82 ಕೆ.ಜಿ. ತೂಕದ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಗಮನಾರ್ಹ ಸಾಧನೆಯ ಹಿನ್ನೆಲೆಯಲ್ಲಿ ಶ್ರವಣ ಪಾಟೀಲ ಅವರು ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶ್ರವಣ ಅವರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಸತೀಶ ಪಾಟೀಲ, ಕುಸ್ತಿ ತರಬೇತುದಾರರಾದ ಮಂಜುನಾಥ ಟಿ. ಹಾಗೂ ರವಿ ಕೆ. ಅವರ ಮಾರ್ಗದರ್ಶನ ದೊರೆತಿದೆ. ಅಲ್ಲದೆ, ಅವರ ತಂದೆ ಮರ್ಯಪ್ಪ ಪಾಟೀಲ ಅವರು ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಶ್ರವಣ ಪಾಟೀಲ ಅವರ ಈ ಸಾಧನೆಗೆ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಖಾನಾಪುರ ಮತ್ತು ಚಂದ್ರಗಿ ಪರಿಸರದ ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.



