अल्लेहोळच्या बालाजी पाटीलची राज्यस्तरीय ॲथलेटिक्स स्पर्धेत सुवर्ण झेप; 400 मीटर धावण्यात पटकावले सुवर्णपदक.
खानापूर : प्रतिनिधी
खानापूर तालुक्यातील अल्लेहोळ गावचे सुपुत्र बालाजी कल्लाप्पा पाटील यांनी कर्नाटक राज्यस्तरीय सिनियर ॲथलेटिक मीट-2026 मध्ये 400 मीटर धावण्याच्या स्पर्धेत सुवर्णपदक पटकावून उल्लेखनीय यश संपादन केले आहे. ही स्पर्धा कलबुर्गी (गुलबर्गा) येथे आयोजित करण्यात आली होती.

बालाजी पाटील हे खानापूर येथील सह्याद्री सोसायटीचे मॅनेजर कल्लाप्पा रामचंद्र पाटील यांचे चिरंजीव आहेत. राज्यस्तरीय स्पर्धेत उत्कृष्ट कामगिरी करत त्यांनी 400 मीटर धावण्याच्या प्रकारात अव्वल स्थान मिळविले आहे.
बालाजीच्या या यशामुळे अल्लेहोळ गावासह खानापूर तालुका आणि बेळगाव जिल्ह्याच्या शिरपेचात आणखी एक मानाचा तुरा रोवला गेला आहे. त्यांच्या या कामगिरीचे सर्वत्र कौतुक होत असून, कुटुंबीय, मित्रपरिवार, क्रीडाप्रेमी तसेच ग्रामस्थांकडून बालाजीचे अभिनंदन करून पुढील वाटचालीसाठी शुभेच्छा दिल्या जात आहेत.
ಅಲ್ಲೇಹೊಳದ ಬಾಲಾಜಿ ಪಾಟೀಲನ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ; 400 ಮೀಟರ್ ಓಟದಲ್ಲಿ ಚಿನ್ನದ ಪದಕ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಅಲ್ಲೇಹೊಳ ಗ್ರಾಮದ ಹೆಮ್ಮೆಯ ಪುತ್ರ ಬಾಲಾಜಿ ಕಲ್ಲಪ್ಪ ಪಾಟೀಲ ಅವರು ಕರ್ನಾಟಕ ರಾಜ್ಯಮಟ್ಟದ ಸೀನಿಯರ್ ಅಥ್ಲೆಟಿಕ್ ಮೀಟ್-2026ರಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ರಾಜ್ಯಮಟ್ಟದ ಕ್ರೀಡಾಕೂಟವನ್ನು ಕಲಬುರಗಿ (ಗುಲ್ಬರ್ಗಾ)ನಲ್ಲಿ ಆಯೋಜಿಸಲಾಗಿತ್ತು.
ಬಾಲಾಜಿ ಪಾಟೀಲ ಅವರು ಖಾನಾಪುರದ ಸಹ್ಯಾದ್ರಿ ಸೊಸೈಟಿಯ ಮ್ಯಾನೇಜರ್ ಕಲ್ಲಪ್ಪ ರಾಮಚಂದ್ರ ಪಾಟೀಲ ಅವರ ಪುತ್ರರಾಗಿದ್ದಾರೆ. ರಾಜ್ಯಮಟ್ಟದ ಈ ಪ್ರತಿಷ್ಠಿತ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಾಲಾಜಿ ಅವರು 400 ಮೀಟರ್ ಓಟದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬಾಲಾಜಿ ಅವರ ಈ ಸಾಧನೆಯಿಂದ ಅಲ್ಲೇಹೊಳ ಗ್ರಾಮ ಮಾತ್ರವಲ್ಲದೆ ಖಾನಾಪುರ ತಾಲ್ಲೂಕು ಹಾಗೂ ಬೆಳಗಾವಿ ಜಿಲ್ಲೆಯ ಕೀರ್ತಿಗೆ ಮತ್ತೊಂದು ಗರಿಮೆ ಸೇರ್ಪಡೆಯಾಗಿದೆ. ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿರುವ ಬಾಲಾಜಿ ಅವರ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಾಲಾಜಿ ಅವರ ಈ ಯಶಸ್ಸಿಗೆ ಕುಟುಂಬಸ್ಥರು, ಸ್ನೇಹಿತರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ಕ್ರೀಡಾ ಪಯಣದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.



