संत निरंकारी मंडळाच्या वतीने मलप्रभा नदी घाटावर स्वच्छता अभियान.
खानापूर : खानापूर शहराची वरदायिनी ठरलेल्या मलप्रभा नदी घाटावर येत्या रविवारी दि. 22 फेब्रुवारी 2026 रोजी सकाळी 8 ते 11 या वेळेत भव्य स्वच्छता अभियान राबविण्यात येणार आहे. हे अभियान संत निरंकारी मंडळ दिल्ली शाखा बेळगाव-खानापूर यांच्या वतीने आयोजित करण्यात आले असून, सद्गुरू बाबा हरदेव सिंह जी महाराज यांच्या जन्मदिनाचे औचित्य साधून दरवर्षीप्रमाणे यंदाही देशभरात 1500 हून अधिक ठिकाणी स्वच्छता मोहीम राबविण्यात येत आहे.
संत निरंकारी मंडळ अध्यात्मिक जनजागृतीच्या माध्यमातून जगभरात विश्वबंधुत्वाची स्थापना करण्याचे कार्य करीत आहे. त्याचबरोबर सामाजिक बांधिलकी जपत रक्तदान शिबिरे, वृक्षारोपण, व्यसनमुक्ती अभियान, युवा व महिला सबलीकरण उपक्रम तसेच स्वच्छता मोहिमा अशा विविध समाजोपयोगी कार्यात मंडळ अग्रेसर आहे.
याच सामाजिक कार्याचा एक भाग म्हणून मलप्रभा नदी घाटावर स्वच्छता मोहीम हाती घेण्यात येत असून, या उपक्रमात शहरातील विविध मान्यवरांसह बेळगाव व खानापूर तालुक्यातील सेवादल बंधू-भगिनी आणि शेकडो भाविक स्वयंस्फूर्तीने सहभागी होणार आहेत.
स्वच्छता अभियानानंतर त्याच ठिकाणी आध्यात्मिक सत्संगाचे आयोजन करण्यात आले आहे. सत्संग समाप्तीनंतर उपस्थित सर्वांसाठी महाप्रसादाची व्यवस्था करण्यात आली आहे.
या उपक्रमात मोठ्या संख्येने सहभागी होऊन कार्यक्रम यशस्वी करावा, असे आवाहन संत निरंकारी मंडळ बेळगाव-खानापूर शाखेच्या वतीने करण्यात आले आहे.
ಸಂತ ನಿರಂಕಾರಿ ಸೇವಾ ಮಂಡಳದ ವತಿಯಿಂದ ಮಲಪ್ರಭಾ ನದಿಘಟ್ಟ ಸ್ವಚ್ಛತಾ ಅಭಿಯಾನ.
ಖಾನಾಪುರ : ಖಾನಾಪುರ ಪಟ್ಟಣದ ವರದಾವಾಹಿನಿಯಾದ ಮಲಪ್ರಭಾ ನದಿಘಟ್ಟದಲ್ಲಿ ಬರುವ ಭಾನುವಾರ ದಿನಾಂಕ 22 ಫೆಬ್ರುವರಿ 2026 ರಂದು ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಭವ್ಯ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಸಂತ ನಿರಂಕಾರಿ ಸೇವಾ ಮಂಡಳದ ದೆಹಲಿ ಶಾಖೆ ಬೆಳಗಾವಿ–ಖಾನಾಪುರ ಇವರ ವತಿಯಿಂದ ಆಯೋಜಿಸಲಾಗಿದ್ದು, ಸದ್ಗುರು ಬಾಬಾ ಹರದೇವ್ ಸಿಂಗಜೀ ಮಹಾರಾಜ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ದೇಶಾದ್ಯಂತ 1500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ.
ಸಂತ ನಿರಂಕರಿ ಮಂಡಳವು ಆಧ್ಯಾತ್ಮಿಕ ಜಾಗೃತಿಯ ಮೂಲಕ ವಿಶ್ವಬಂಧುತ್ವವನ್ನು ಸ್ಥಾಪಿಸುವ ಮಹತ್ವದ ಕಾರ್ಯ ಮಾಡುತ್ತಿರುವುದರ ಜೊತೆಗೆ, ಸಾಮಾಜಿಕ ಬದ್ಧತೆಯ ಭಾಗವಾಗಿ ರಕ್ತದಾನ ಶಿಬಿರಗಳು, ವೃಕ್ಷಾರೋಪಣ, ವ್ಯಸನಮುಕ್ತ ಅಭಿಯಾನ, ಯುವ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಮತ್ತು ಸ್ವಚ್ಛತಾ ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದೆ.
ಈ ಸಾಮಾಜಿಕ ಕಾರ್ಯದ ಭಾಗವಾಗಿ ಮಲಪ್ರಭಾ ನದಿಘಟ್ಟದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಟ್ಟಣದ ಗಣ್ಯ ವ್ಯಕ್ತಿಗಳೊಂದಿಗೆ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಸೇವಾದಳದ ಸಹೋದರ–ಸಹೋದರಿಯರು ಹಾಗೂ ನೂರಾರು ಭಕ್ತರು ಸ್ವಯಂಪ್ರೇರಿತವಾಗಿ ಭಾಗವಹಿಸಲಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದ ನಂತರ ಅದೇ ಸ್ಥಳದಲ್ಲಿ ಆಧ್ಯಾತ್ಮಿಕ ಸತ್ಸಂಗವೂ ನಡೆಯಲಿದೆ. ಸತ್ಸಂಗ ಸಮಾಪ್ತಿಯ ನಂತರ ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂತ ನಿರಂಕರಿ ಮಂಡಳ ಬೆಳಗಾವಿ–ಖಾನಾಪುರ ಶಾಖೆಯ ವತಿಯಿಂದ ಮನವಿ ಮಾಡಲಾಗಿದೆ.

