
लक्ष विचलित करून पाच तोळे सोन्याचे दागिने लंपास. देवलती येथील घटना.
खानापूर ; लक्ष विचलित करून पाच तोळे सोन्याचे दागिने लंपास केल्याची घटना खानापूर तालुक्यातील देवलती येथे घडली आहे. देवलत्ती येथील सोनाराचे लक्ष विचलित करून चोरट्यानीं पाच तोळ्याचे दागिने लंपास केल्याची घटना बुधवारी दुपारी देवलत्ती येथे घडली आहे. याबाबत खानापूर पोलिसात गुन्हा नोंदविण्यात आला आहे.
याबाबत खानापूर पोलिसां कडून मिळालेली माहिती अशी की, खानापूर तालुक्यातील देवलती येथील सोने व्यापारी ईरांना प्रल्हाद सूर्यवंशी यांचे श्री लक्ष्मी देवी ज्वेलर्स या नावाने सोन्याचे दुकान आहे. बुधवार दिनांक 29 रोजी दुपारी 1.30 वाजेच्या सुमारास, दुचाकीवरून दोघेजण सोने खरेदीच्या बहाण्याने सूर्यवंशी यांच्या दुकानात आले. त्यांनी सोन्याच्या दागिन्यांची चौकशी सुरू केली. वेगवेगळे दागिने पाहिले, काही दागिने पसंत केले. मात्र यावेळी चोरट्यांनी सूर्यवंशी यांचे लक्ष विचलित करून पाच तोळ्याचे दागिने लंपास करून पलायन केले.
चोरट्यानी आपल्या दुकानात चोरी केल्याचे काही वेळानंतर व्यापाऱ्याच्या लक्षात येताच, त्यांनी याबाबतची माहिती खानापूर पोलिसाना दिली. खानापूर पोलीस तातडीने घटनास्थळी दाखल झाले. आणि सीसीटीव्ही च्या आधारे चोरट्यांचा तपास करण्यासाठी धारवाड पर्यंत पोलीस पथक रवाना झाले होते. मात्र पोलिसांच्या हाती काही लागले नाही. खानापूर पोलीसात या गुन्ह्याची नोंद झाली असून, खानापूर पोलीस पुढील तपास करीत आहेत. याच प्रकारे खानापूर शहरात गेल्या दीड महिन्यापूर्वी रेणुका ज्वेलर्स या दुकानातही मालकाचे लक्ष विचलित करून जवळपास चार तोळ्याचे दागिने लंपास केल्याची घटना घडलेली आहे. या गुन्ह्यांची नोंद पोलीस स्थानकात झाली आहे. अशा अपरिचित ग्राहकांच्याबाबत सोने व्यापारानी दक्ष रहावेत असे आवाहान खानापूर पोलिसांनी केले आहे. देवलती येथे झालेल्या चोरीच्या तपासासाठी पथक निर्माण करण्यात आले आहे. या पथकाने धारवाड पर्यंत तपास केलेला आहे. मात्र पोलिसांच्या हाती काही लागले नाही. शहरात अशा चोरट्यांचे मोठ्या प्रमाणात जाळे पसरले असून, सातत्याने सोनार दुकान व प्रवाशांच्या बॅगमधून सोने व पैसे लंपास करण्याच्या घटना खानापूर बस स्थानक, तसेच बाजारात वारंवार घडत आहेत.
ಗಮನ ಬೇರೆಡೆ ಸೆಳೆದು ಐದು ತೊಲಿ ಚಿನ್ನಾಭರಣ ಕದ್ದ ಕದಿಮರು. ದೇವಲತಿಯಲ್ಲಿ ನಡೆದ ಘಟನೆ.
ಖಾನಾಪುರ; ಗಮನ ಬೇರೆಡೆ ಸೆಳೆದು ಐದು ತೊಲಿ ಚಿನ್ನಾಭರಣಗಳನ್ನು ಕದ್ದಿರುವ ಘಟನೆ ಖಾನಾಪುರ ತಾಲೂಕಿನ ದೇವಲತ್ತಿಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ದೇವಲತ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳರು ಚಿನ್ನದ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಐದು ತೊಲಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಖಾನಾಪುರ ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ, ಖಾನಾಪುರ ತಾಲೂಕಿನ ದೇವಲತಿಯ ಚಿನ್ನದ ವ್ಯಾಪಾರಿ ಈರಣ್ಣ ಪ್ರಹ್ಲಾದ್ ಸೂರ್ಯವಂಶಿ ಅವರು ಶ್ರೀ ಲಕ್ಷ್ಮಿ ದೇವಿ ಜ್ಯುವೆಲ್ಲರ್ಸ್ ಎಂಬ ಚಿನ್ನದ ಅಂಗಡಿಯನ್ನು ಹೊಂದಿದ್ದಾರೆ. ಬುಧವಾರ, ೨೯ನೇ ತಾರೀಖು, ಮಧ್ಯಾಹ್ನ ೧.೩೦ ರ ಸುಮಾರಿಗೆ, ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಚಿನ್ನ ಖರೀದಿಸುವ ನೆಪದಲ್ಲಿ ಸೂರ್ಯವಂಶಿ ಅವರ ಅಂಗಡಿಗೆ ಬಂದರು. ಅವರು ಚಿನ್ನದ ಆಭರಣಗಳನ್ನು ನೋಡಲು ಪ್ರಾರಂಭಿಸಿದರು. ಆಭರಣಗಳನ್ನು ನೋಡಿ ಅವುಗಳಲ್ಲಿನ ಕೆಲವು ಇಷ್ಟ ಪಟ್ಟುವಾದ ಹಾಗೆ ನಟಿಸಿ ಸೂರ್ಯವಂಶಿಯ ಗಮನ ಬೇರೆಡೆಗೆ ಸೆಳೆದು, ಐದು ತೊಲ ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ, ವ್ಯಾಪಾರಿಗೆ ತನ್ನ ಅಂಗಡಿಯಿಂದ ಕಳ್ಳರು ಕದ್ದಿದ್ದಾರೆಂದು ಅರಿವಾಗಿ ಅವನು ಖಾನಾಪುರ ಪೊಲೀಸರಿಗೆ ವಿಷಯ ತಿಳಿಸಿದನು. ಖಾನಾಪುರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಸಿಸಿಟಿವಿ ಆಧರಿಸಿ ಕಳ್ಳರ ತನಿಖೆ ನಡೆಸಲು ಪೊಲೀಸ್ ತಂಡ ಧಾರವಾಡಕ್ಕೆ ತೆರಳಿತ್ತು. ಆದರೆ ಪೊಲೀಸರಿಗೆ ಅವರ ಸುಳಿವು ಸಿಗಲಿಲ್ಲ. ಈ ಅಪರಾಧವನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಖಾನಾಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ, ಒಂದೂವರೆ ತಿಂಗಳ ಹಿಂದೆ ಖಾನಾಪುರ ನಗರದಲ್ಲಿ ರೇಣುಕಾ ಜ್ಯುವೆಲ್ಲರ್ಸ್ ಎಂಬ ಅಂಗಡಿಯಲ್ಲಿ ಮಾಲೀಕರ ಗಮನ ಬೇರೆಡೆಗೆ ತಿರುಗಿಸಿ ಸುಮಾರು ನಾಲ್ಕು ತೊಲಿ ಮೌಲ್ಯದ ಆಭರಣಗಳನ್ನು ಕದಿಯಲಾದ ಘಟನೆ ನಡೆದಿತ್ತು. ಈ ಅಪರಾಧವೂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಅಂತಹ ಅಪರಿಚಿತ ಗ್ರಾಹಕರ ವಿರುದ್ಧ ಜಾಗರೂಕರಾಗಿರಲು ಖಾನಾಪುರ ಪೊಲೀಸರು ಚಿನ್ನದ ವ್ಯಾಪಾರಿಗಳನ್ನು ಒತ್ತಾಯಿಸಿದ್ದಾರೆ. ದೇವಲತಿಯಲ್ಲಿ ಸಂಭವಿಸಿದ ಕಳ್ಳತನದ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ. ಈ ತಂಡ ಧಾರವಾಡದವರೆಗೆ ಶೂದ ನಡೆಸಿದೆ. ಆದರೆ ಪೊಲೀಸರಿಗೆ ಯಾವ ಪ್ರಯೋಜನೆ ಆಗಿರುವುದಿಲ್ಲ. ಇಂತಹ ಕಳ್ಳರ ದೊಡ್ಡ ಜಾಲವೇ ನಗರದಾದ್ಯಂತ ಹರಡಿದ್ದು, ಖಾನಾಪುರ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯಲ್ಲಿ ಚಿನ್ನದ ಅಂಗಡಿಗಳು ಮತ್ತು ಪ್ರಯಾಣಿಕರ ಬ್ಯಾಗ್ಗಳಿಂದ ಚಿನ್ನ ಕಳ್ಳತನವಾಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ.
