शिंदोळी परिसरात मोठ्या अस्वलाचा वावर; विद्यार्थी, महिला व ग्रामस्थांमध्ये भीतीचे वातावरण, वन विभागाकडे तातडीच्या कारवाईची मागणी.
खानापूर (प्रतिनिधी) : खानापूर-लोंढा मार्गावरील शिंदोळी कत्री बसथांबा परिसर, लगतचे जंगल तसेच गावाकडे जाणाऱ्या रस्त्यावर गेल्या काही दिवसांपासून एका मोठ्या अस्वलाचा वावर आढळून येत असल्याने शिंदोळी गावातील नागरिकांमध्ये भीतीचे वातावरण निर्माण झाले आहे. विशेषतः शाळकरी विद्यार्थी, महिला आणि सकाळ-सायंकाळ प्रवास करणाऱ्या नागरिकांना मोठी धास्ती बसली असून वन विभागाने तातडीने दखल घेऊन योग्य उपाययोजना कराव्यात, अशी मागणी ग्रामस्थांनी केली आहे.
गावातील नागरिक दीपक पाटील यांनी दिलेल्या माहितीनुसार, दोन दिवसांपूर्वी ते आपल्या मुलीला बसमध्ये बसविण्यासाठी बसथांब्याकडे जात असताना गावाच्या वेशीजवळ त्यांना एक मोठे अस्वल दिसले. त्यावेळी बसची वाट पाहत असलेल्या काही शाळकरी विद्यार्थ्यांनीही अस्वल पाहिल्याचे त्यांनी सांगितले. त्यानंतरही गावातील नागरिकांना आणखी दोन वेळा त्याच परिसरात अस्वल दिसल्याची माहिती समोर आली आहे.
ग्रामस्थांच्या म्हणण्यानुसार, हे अस्वल आकाराने अतिशय मोठे असून ते अचानक समोर आल्यास कोणाच्याही मनात भीती निर्माण होईल. त्यामुळे शिंदोळी गावातील नागरिक सध्या भीतीच्या छायेखाली वावरत आहेत. खानापूर व बेळगाव येथे शिक्षणासाठी जाणारे विद्यार्थी बसथांब्यावर जाण्यास घाबरत असून महिला व ज्येष्ठ नागरिकांनाही एकटे बाहेर पडणे धोकादायक वाटत आहे.
या पार्श्वभूमीवर वन विभागाच्या अधिकाऱ्यांनी तातडीने घटनास्थळी पाहणी करून अस्वलाचा सुरक्षित बंदोबस्त करावा, तसेच परिसरात गस्त वाढवून नागरिकांच्या सुरक्षिततेसाठी आवश्यक उपाययोजना कराव्यात, अशी जोरदार मागणी शिंदोळी गावातील ग्रामस्थांनी केली आहे.
ಶಿಂದೋಳಿ ಪ್ರದೇಶದಲ್ಲಿ ಭಾರಿ ಗಾತ್ರದ ಕರಡಿಯ ಚಲನವಲನ; ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರಲ್ಲಿ ಭಯದ ವಾತಾವರಣ, ಅರಣ್ಯ ಇಲಾಖೆ ವತಿಯಿಂದ ತಕ್ಷಣದ ಕ್ರಮಕ್ಕೆ ಆಗ್ರಹ.
ಖಾನಾಪುರ (ಪ್ರತಿನಿಧಿ) : ಖಾನಾಪುರ–ಲೋಂಡಾ ಮಾರ್ಗದಲ್ಲಿರುವ ಶಿಂದೋಳಿ ಕತ್ರಿ ಬಸ್ ನಿಲ್ದಾಣದ ಸುತ್ತಮುತ್ತ, ಸಮೀಪದ ಅರಣ್ಯ ಪ್ರದೇಶ ಹಾಗೂ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಕಳೆದ ಕೆಲವು ದಿನಗಳಿಂದ ಒಂದು ಭಾರಿ ಗಾತ್ರದ ಕರಡಿಯ ಚಲನವಲನ ಕಂಡುಬರುತ್ತಿರುವುದರಿಂದ ಶಿಂದೋಳಿ ಗ್ರಾಮದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಬೆಳಿಗ್ಗೆ-ಸಂಜೆ ಸಂಚಾರ ಮಾಡುವ ಸಾರ್ವಜನಿಕರು ತೀವ್ರ ಆತಂಕದಲ್ಲಿದ್ದು, ಅರಣ್ಯ ಇಲಾಖೆ ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪಕ್ ಪಾಟೀಲ್ ಅವರು ನೀಡಿದ ಮಾಹಿತಿಯ ಪ್ರಕಾರ, ಎರಡು ದಿನಗಳ ಹಿಂದೆ ಅವರು ತಮ್ಮ ಮಗಳನ್ನು ಬಸ್ಗೆ ಕೂರಿಸಲು ಬಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದಾಗ ಗ್ರಾಮದ ಪ್ರವೇಶದ್ವಾರದ ಸಮೀಪ ಒಂದು ದೊಡ್ಡ ಗಾತ್ರದ ಕರಡಿ ಕಾಣಿಸಿಕೊಂಡಿತು. ಆ ವೇಳೆ ಬಸ್ಗಾಗಿ ಕಾಯುತ್ತಿದ್ದ ಕೆಲ ಶಾಲಾ ವಿದ್ಯಾರ್ಥಿಗಳೂ ಸಹ ಕರಡಿಯನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ನಂತರವೂ ಇದೇ ಪ್ರದೇಶದಲ್ಲಿ ಇನ್ನೂ ಎರಡು ಬಾರಿ ಕರಡಿ ಕಾಣಿಸಿಕೊಂಡಿರುವ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ.
ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಕರಡಿ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿದ್ದು, ಅದು ಏಕಾಏಕಿ ಎದುರಾದರೆ ಯಾರಲ್ಲಾದರೂ ಭಯ ಹುಟ್ಟಿಸುವಂತಿದೆ. ಇದರಿಂದ ಶಿಂದೋಳಿ ಗ್ರಾಮದ ಜನರು ಸದ್ಯ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಖಾನಾಪುರ ಹಾಗೂ ಬೆಳಗಾವಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಹೋಗಲು ಹೆದರುತ್ತಿದ್ದು, ಮಹಿಳೆಯರು ಹಾಗೂ ಹಿರಿಯ ನಾಗರಿಕರೂ ಸಹ ಒಬ್ಬರೇ ಹೊರಗೆ ಹೋಗಲು ಆತಂಕಪಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು, ಕರಡಿಯನ್ನು ಸುರಕ್ಷಿತವಾಗಿ ಹಿಡಿದು ಅಥವಾ ಅರಣ್ಯಕ್ಕೆ ಓಡಿಸುವ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಶಿಂದೋಳಿ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



