खानापूर : इरफान तालिकोटी 8वी क्रिकेट स्पर्धेला 23 डिसेंबरपासून सुरुवात ; पीच बनविण्याची तयारी सुरू.
खानापूर ; खानापूर येथे आयोजित करण्यात आलेली इरफान तालिकोटी 8वी क्रिकेट स्पर्धा 2025-26 येत्या मंगळवार, दिनांक 23 डिसेंबर पासून सुरू होत असून, या स्पर्धेच्या तयारीला सध्या जोरदार सुरुवात झाली आहे. सदर क्रिकेट स्पर्धा सर्वोदया इंग्रजी शाळेच्या क्रीडांगणावर आयोजित करण्यात आली असून, सध्या मैदानावर पीच बनविण्याचे काम सुरू आहे.
पीच बनविण्याचे काम गेल्या सात वर्षांपासून सुरेश कुडाळे अत्यंत उत्कृष्टपणे करत असून, या पीचसाठी गोवा येथील फातोर्डा स्टेडियममध्ये वापरली जाणारीच माती वापरण्यात येत असल्याची माहिती या क्रिकेट स्पर्धेचे आयोजक व सामाजिक कार्यकर्ते इरफान तालिकोटी यांनी दिली.
यावेळी पुढे बोलताना इरफान तालिकोटी म्हणाले की, ही स्पर्धा संपूर्ण नियमांनुसार घेण्यात येणार असून, खानापूर तालुका मर्यादित क्रिकेट स्पर्धा स्वरूपात आयोजित करण्यात आली आहे. या स्पर्धेसाठी प्रथम बक्षीस 1,00,888 रुपये, तर द्वितीय बक्षीस 50,888 रुपये ठेवण्यात आले आहे.
या स्पर्धेसाठी नावनोंदणीची अंतिम तारीख आज 20 डिसेंबर असून, 21 डिसेंबररोजी लॉट्स काढण्यात येणार आहेत. नियमांनुसार ज्या क्रिकेट संघांनी आधीच फॉर्म घेतले आहेत, त्यांनाच या स्पर्धेत सहभाग नोंदविता येणार असल्याचे त्यांनी स्पष्ट केले.
सर्व क्रिकेट संघांच्या मागणीनुसार या स्पर्धेसाठी उत्तम दर्जाचा बॉल वापरण्यात येणार असून, खन्ना बॉल किंवा 70-70 बॉल वापरण्यात येईल, असेही त्यांनी सांगितले. 31 डिसेंबर रोजी अंतिम सामना होणार असून, हा सामना घरबसल्या पाहता यावा यासाठी लाईव्ह क्रिकेट प्रक्षेपणाची व्यवस्था करण्यात आली आहे.
ही क्रिकेट स्पर्धा 23 डिसेंबर रोजी सकाळी 9.00 वाजता उद्घाटनानंतर तात्काळ सुरू होणार असल्याचेही त्यांनी नमूद केले. गेल्या सात वर्षांपासून सातत्याने सुरू असलेल्या या स्पर्धेला क्रिकेट संघ व क्रिकेटप्रेमींकडून ज्या प्रकारचे सहकार्य लाभले आहे, तेच सहकार्य याही वर्षी मिळावे, असे आवाहन त्यांनी केले.
यावेळी क्रिकेट आयोजन समितीचे सदस्य परशराम चौगुले यांनी मनोगत व्यक्त करताना सांगितले की, खानापूर तालुक्यातील स्थानिक खेळाडूंना वाव मिळावा, या उद्देशाने इरफान तालिकोटी हे सातत्याने या क्रिकेट स्पर्धेचे आयोजन करीत आहेत. यासाठी त्यांनी इरफान तालिकोटी यांचे विशेष आभार मानले. यावेळी क्रिकेट आयोजन समितीचे पदाधिकारी व सदस्य उपस्थित होते.
ಖಾನಾಪುರ : ಇರ್ಫಾನ್ ತಾಲಿಕೋಟಿ 8ನೇ ಕ್ರಿಕೆಟ್ ಆವೃತ್ತಿ ಸ್ಪರ್ಧೆಗೆ ಡಿಸೆಂಬರ್ 23ರಿಂದ ಚಾಲನೆ; ಪಿಚ್ ತಯಾರಿ ಆರಂಭ.
ಖಾನಾಪುರ ; ಖಾನಾಪುರದಲ್ಲಿ ಆಯೋಜಿಸಲಾಗಿರುವ ಇರ್ಫಾನ್ ತಾಲಿಕೋಟಿ 8ನೇ ಕ್ರಿಕೆಟ್ ಆವೃತ್ತಿ ಸ್ಪರ್ಧೆ 2025-26 ಯು ಬರಲಿರುವ ಮಂಗಳವಾರ, ಡಿಸೆಂಬರ್ 23ರಿಂದ ಆರಂಭವಾಗಲಿದ್ದು, ಈ ಸ್ಪರ್ಧೆಯ ಪೂರ್ವಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಈ ಕ್ರಿಕೆಟ್ ಸ್ಪರ್ಧೆಯನ್ನು ಸರ್ವೋದಯ ವಿದ್ಯಾಲಯ ಇಂಗ್ಲಿಷ್ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಪ್ರಸ್ತುತ ಮೈದಾನದಲ್ಲಿ ಪಿಚ್ ತಯಾರಿ ಮಾಡುವ ಕೆಲಸ ಪ್ರಗತಿಯಲ್ಲಿದೆ.
ಪಿಚ್ ತಯಾರಿಯನ್ನು ಕಳೆದ ಏಳು ವರ್ಷಗಳಿಂದ ಸುರೇಶ್ ಕುಡಾಳೆ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದು, ಈ ಪಿಚ್ಗಾಗಿ ಗೋವಾ ರಾಜ್ಯದ ಫಾತೋರ್ಡಾ ಸ್ಟೇಡಿಯಂನಲ್ಲಿ ಬಳಸುವ ಅದೇ ಮಣ್ಣನ್ನು ಬಳಸಲಾಗುತ್ತಿದೆ ಎಂದು ಕ್ರಿಕೆಟ್ ಸ್ಪರ್ಧೆಯ ಆಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತ ಇರ್ಫಾನ್ ತಾಲಿಕೋಟಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇರ್ಫಾನ್ ತಾಲಿಕೋಟಿ ಅವರು, ಈ ಸ್ಪರ್ಧೆಯನ್ನು ಸಂಪೂರ್ಣ ನಿಯಮಾವಳಿಗಳಂತೆ ನಡೆಸಲಾಗುತ್ತಿದ್ದು, ಖಾನಾಪುರ ತಾಲ್ಲೂಕು ಮಟ್ಟದ ಸೀಮಿತ ಕ್ರಿಕೆಟ್ ಸ್ಪರ್ಧೆ ರೂಪದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸ್ಪರ್ಧೆಗೆ ಆಕರ್ಷಕ ಪ್ರಥಮ ಬಹುಮಾನ ರೂ. 1,00,888, ಮತ್ತು ದ್ವಿತೀಯ ಬಹುಮಾನ ರೂ. 50,888 ನಿಗದಿಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಸಲ್ಲಿಸುವ ಅಂತಿಮ ದಿನಾಂಕ ಇಂದು, ಡಿಸೆಂಬರ್ 20 ಆಗಿದ್ದು, ಡಿಸೆಂಬರ್ 21ರಂದು ಲಾಟ್ಸ್ (ಚೀಟಿ) ಎತ್ತಲಾಗುತ್ತದೆ. ನಿಯಮಾನುಸಾರ ಈಗಾಗಲೇ ಫಾರಂ ಪಡೆದುಕೊಂಡಿರುವ ಕ್ರಿಕೆಟ್ ತಂಡಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಲಾ ಕ್ರಿಕೆಟ್ ತಂಡಗಳ ಬೇಡಿಕೆಯಂತೆ ಈ ಸ್ಪರ್ಧೆಗೆ ಉತ್ತಮ ಗುಣಮಟ್ಟದ ಬಾಲ್ ಬಳಸಲಾಗುತ್ತಿದ್ದು, ಖನ್ನಾ ಬಾಲ್ ಅಥವಾ 70-70 ಬಾಲ್ ಬಳಸಲಾಗುತ್ತದೆ ಎಂದು ತಿಳಿಸಿದರು.
ಡಿಸೆಂಬರ್ 31ರಂದು ಅಂತಿಮ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಮನೆಲ್ಲೇ ವೀಕ್ಷಿಸಲು ಲೈವ್ ಕ್ರಿಕೆಟ್ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಈ ಕ್ರಿಕೆಟ್ ಸ್ಪರ್ಧೆ ಡಿಸೆಂಬರ್ 23ರಂದು ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನೆಯ ನಂತರ ತಕ್ಷಣ ಆರಂಭವಾಗಲಿದೆ ಎಂದು ಅವರು ಹೇಳಿದರು.
ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಸ್ಪರ್ಧೆಗೆ ಕ್ರಿಕೆಟ್ ತಂಡಗಳು ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಲಭಿಸಿದ ಸಹಕಾರದಂತೆಯೇ, ಈ ವರ್ಷವೂ ಸಹಕಾರ ದೊರಕಲಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಆಯೋಜನಾ ಸಮಿತಿಯ ಸದಸ್ಯ ಪರಶುರಾಮ ಚೌಗುಲೆ ಅವರು ಮಾತನಾಡಿ, ಖಾನಾಪುರ ತಾಲ್ಲೂಕಿನ ಸ್ಥಳೀಯ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇರ್ಫಾನ್ ತಾಲಿಕೋಟಿ ಅವರು ನಿರಂತರವಾಗಿ ಈ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಇದಕ್ಕಾಗಿ ಇರ್ಫಾನ್ ತಾಲಿಕೋಟಿ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
ಈ ವೇಳೆ ಕ್ರಿಕೆಟ್ ಆಯೋಜನಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.


