अळ्णावर नगरपंचायतीत मानव तस्करी प्रतिबंधाची शपथ; “मानव तस्करी रोखण्यासाठी समाजाची जागरूकता आवश्यक”.
अळ्णावर (प्रतिनिधी) : संयुक्त राष्ट्रसंघाच्या आवाहनानुसार व कर्नाटक शासनाच्या निर्देशानुसार जागतिक मानव तस्करी प्रतिबंध दिनानिमित्त गुरुवारी अळ्णावर नगरपंचायतीत मानव तस्करीविरोधी शपथविधी कार्यक्रम आयोजित करण्यात आला.
या कार्यक्रमात समुदाय संघटक अधिकारी एम. एस. बेंतूर यांनी अधिकारी व कर्मचाऱ्यांना मानव तस्करी प्रतिबंधाची शपथ दिली.
“कर्नाटक राज्य मानव तस्करीमुक्त करण्यासाठी कटिबद्ध राहीन, संकटात सापडलेल्या नागरिकांचे संरक्षण करण्यासाठी तसेच मानव तस्करीच्या बळींना सुरक्षितपणे समाजाच्या मुख्य प्रवाहात आणण्यासाठी माझे योगदान देईन. भारतीय राज्यघटनेने दिलेल्या समानतेच्या तत्त्वांची प्रामाणिकपणे अंमलबजावणी करण्यासाठी प्रयत्नशील राहीन,” अशी शपथ यावेळी घेण्यात आली.
यानंतर मार्गदर्शन करताना एम. एस. बेंतूर यांनी सांगितले की, महिला व बालकांवरील मानव तस्करी रोखण्यासाठी समाजातील प्रत्येक नागरिकाने जागरूक राहणे अत्यंत आवश्यक आहे. शासनाच्या विविध विभागांनी समन्वयाने काम करत जनजागृती सातत्याने राबविल्यास मानव तस्करीसारख्या गंभीर गुन्ह्यांना आळा घालता येईल, असे त्यांनी नमूद केले.
कार्यक्रमाला नगरपंचायतीचे अधिकारी, कर्मचारी तसेच इतर उपस्थित होते.
ಅಳ್ನಾವರ ಪಟ್ಟಣ ಪಂಚಾಯಿತಿಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ “ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಮುದಾಯದ ಜಾಗೃತಿ ಅಗತ್ಯ”
ಅಳ್ನಾವರ: ವಿಶ್ವಸಂಸ್ಥೆಯ ಕರೆ ಹಾಗೂ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಮಾನವ ಕಳ್ಳ ಸಾಗಾಣಿಕೆ ತಡೆಗೆ ಬದ್ದತೆಯೊಂದಿಗೆ
ಪ್ರತಿಜ್ಞೆ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನಾಧಿಕಾರಿ ಎಂ.ಎಸ್. ಬೆಂತೂರು ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ಪ್ರತಿಜ್ಞೆ ಬೋಧಿಸಿದರು. “ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ವಿಮುಕ್ತಗೊಳಿಸುತ್ತೇನೆ,
ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಾಗೂ ಸಾಗಾಣಿಕೆಗೆ ಒಳಗಾಗುವವರನ್ನು ಸುರಕ್ಷಿತವಾಗಿ ಸಮಾಜದ ಮುಖ್ಯವಾಹಿನಿಗೆ ತರುವ
ನಿಟ್ಟಿನಲ್ಲಿ ನನ್ನ ಸೇವೆಯನ್ನು ಮುಡಿಪಾಗಿಡುತ್ತೇನೆ. ಸಂವಿಧಾನದಡಿ ನೀಡಿರುವ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
ಪ್ರತಿಜ್ಞೆ ಸ್ವೀಕಾರದ ನಂತರ ಅವರು ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕಿದ್ದು, ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಜೊತೆಗೆ ಸಾರ್ವಜನಿಕರಲ್ಲಿ ನಿರಂತರ ಅರಿವು ಮೂಡಿಸುವುದು ಅತ್ಯಂತ ಅಗತ್ಯ ಎಂದರು.
ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

