
बेळगाव येथील, कर्ले गावात भर रस्त्यात एकाचा निघृण खून.
बेळगाव : बेळगाव येथील कर्ले गावात एकाचा भर रस्त्यात निघृण खून केल्याची घटना, सोमवार दि. 19 रोजी दुपारी 2.30 वाजण्याच्या सुमारास घडली आहे. मृताचे नाव मोहन गिड्डू तलवार वय 55 असे आहे.
याबाबत समजलेली सविस्तर माहिती अशी की, कर्ले येथील माजी ग्रामपंचायत सदस्य, मोहन तलवार हे सोमवारी दुपारी किणये येथून कर्लेच्या दिशेने आपल्या दुचाकीवरून येत होते. त्यावेळी अज्ञात हल्लेखोरांनी मोहन यांच्यावर धारधार शस्त्रांनी मानेवर वार करून जखमी केले. त्यामुळे मोहन हे भर रस्त्यात रक्ताच्या थारोळ्यात कोसळले. त्यावेळी काही जणांनी या घटनेची माहिती पोलिसांना तसेच मोहन यांच्या घरी सांगितल्याने, घरच्या सदस्यांनी त्या ठिकाणी धाव घेतली. व गंभीर जखमी मोहन यांना दवाखान्यात दाखल केले. मात्र घाव वर्मी लागल्याने, संध्याकाळी 5.30 च्या सुमारास मोहनचा मृत्यू झाला. पुढील तपास बेळगाव ग्रामीण पोलीस करत आहेत. ग्रामीण पोलिसात या घटनेची नोंद झाली आहे. घटनेनंतर, या भागात भीतीचे वातावरण पसरले होते. सोमवारी रात्री वरिष्ठ पोलीस अधिकाऱ्यानी, घटनास्थळी भेट देऊन पाहणी केली.
ಕಾರ್ಲೆ ಗ್ರಾಮದ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ.
ಬೆಳಗಾವಿ: ಕರ್ಲೆ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ 19ರಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದೆ. ಮೃತರನ್ನು ಮೋಹನ್ ಗಿಡ್ಡು ತಲ್ವಾರ್ (55) ಎಂದು ಗುರುತಿಸಲಾಗಿದೆ.
ಈ ಕುರಿತು ವಿವರವಾದ ಮಾಹಿತಿ ಪ್ರಕಾರ, ಸೋಮವಾರ ಮಧ್ಯಾಹ್ನ ಕುರ್ಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್ ತಳವಾರ ಅವರು ಕಿನಯೆಯಿಂದ ಕರ್ಲೆ ಕಡೆಗೆ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದರು. ಆ ವೇಳೆ ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಮೋಹನ್ ಅವರ ಕುತ್ತಿಗೆ ಮೇಲೆ ಇರಿದು ಗಾಯಗೊಳಿಸಿದ್ದಾರೆ. ಇದರಿಂದ ಮೋಹನ್ ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದರು. ಆ ವೇಳೆ ಕೆಲವರು ಪೊಲೀಸರಿಗೆ ಹಾಗೂ ಮೋಹನ್ ಮನೆಗೆ ವಿಷಯ ತಿಳಿಸಿದ್ದರಿಂದ ಮನೆಯ ಸದಸ್ಯರು ಸ್ಥಳಕ್ಕೆ ಬಂದು ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಉಪಚಾರ ಫಲಿಸದೆ ಮೋಹನ್ ಸಂಜೆ 5.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸೋಮವಾರ ರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
