निडगल मंदिर तोडफोड प्रकरण वेड्या किंवा खुळ्या व्यक्तीचे काम नव्हे-प्रकरणाची सखोल चौकशी करा ; इरफान तालिकोटी.
खानापूर : निडगल येथील सिद्धेश्वर मंदिरात झालेल्या तोडफोडीच्या प्रकरणी पोलिसांनी एका मनोरुग्ण व्यक्तीला ताब्यात घेतले असून, या प्रकरणाची चौकशी सुरू आहे. या पार्श्वभूमीवर सामाजिक कार्यकर्ते, अंजुमन-ए-इस्लामचे अध्यक्ष तथा युवा काँग्रेसचे माजी अध्यक्ष इरफान तालिकोटी यांनी आज आपल्या कार्यकर्त्यांसमवेत निडगल येथील सिद्धेश्वर मंदिराला भेट देऊन घटनास्थळाची पाहणी केली.

यावेळी मंदिरातील झालेल्या नुकसानीची पाहणी केल्यानंतर इरफान तालिकोटी यांनी आपल्या भावना व्यक्त केल्या. ते म्हणाले की, “सिद्धेश्वर मंदिराची आज प्रत्यक्ष पाहणी केली. मंदिर परिसर बारकाईने पाहिल्यानंतर तुळशीचा कट्टा ज्या पद्धतीने फोडण्यात आला आहे, तसेच मंदिरातील दानपेटी फोडण्यात आली आहे. त्याचबरोबर कासव, नंदी आणि शिवलिंगाची ज्या पद्धतीने तोडफोड करण्यात आली आहे, ते पाहता हे कृत्य केवळ एखाद्या वेड्या किंवा खुळ्या व्यक्तीचे काम असल्याचे प्रथमदर्शनी वाटत नाही.”
“मंदिरातील वस्तूंची झालेली तोडफोड पाहता हे कृत्य उद्देशपूर्वक करण्यात आले असावे आणि हिंदू बांधवांच्या धार्मिक भावना दुखावण्याचा प्रयत्न असावा, असे मला दिसून येते. त्यामुळे या प्रकरणाचा सर्व बाजूंनी सखोल तपास होणे अत्यंत गरजेचे आहे,” असे तालिकोटी यांनी सांगितले.
“कोणतेही प्रार्थनास्थळ असो—चर्च, मशीद किंवा मंदिर—त्या ठिकाणी समाजाच्या आणि भाविकांच्या भावना जोडलेल्या असतात. त्यामुळे कोणत्याही धर्माच्या प्रार्थनास्थळाची तोडफोड करणे हे चुकीचे असून, अशा प्रकारचे कृत्य कोणीही करू नये,” असेही त्यांनी स्पष्ट केले.
या प्रकरणी प्रशासन आणि वरिष्ठ अधिकाऱ्यांची भेट घेऊन चर्चा करण्यात येणार असून, धार्मिक भावना दुखावणारे कृत्य करणाऱ्या समाजकंटकांचा शोध घेऊन त्यांच्यावर कठोरातील कठोर कारवाई करण्यात यावी, अशी मागणी तालिकोटी यांनी केली. तसेच या प्रकरणातील सत्य लवकरात लवकर समोर आणून दोषींवर कायदेशीर कारवाई करावी, अशीही त्यांनी मागणी केली.
दरम्यान, अंकले गावातील रेल्वे रुळांजवळ मंदिराची एक घंटा आढळल्याची माहिती मिळाली असून, ती घंटा नेमकी कोणत्या मंदिराची आहे, याचीही चौकशी होणे आवश्यक आहे, असे तालिकोटी यांनी सांगितले. मंदिर तोडफोडीशी संबंधित आतापर्यंत घडलेल्या विविध घटनांचा आपण सविस्तर अभ्यास केला असून, या प्रकरणाची वस्तुस्थिती समोर येणे गरजेचे असल्याचे त्यांनी नमूद केले.
ताब्यात घेण्यात आलेल्या व्यक्तीबाबत निडगल ग्रामस्थांमध्येही पूर्ण संमती व समाधान नसल्याचे तालिकोटी यांनी सांगितले. “मी निडगल गावच्या ग्रामस्थांसोबत आहे. या संपूर्ण प्रकाराची व्यवस्थित आणि सखोल चौकशी होईपर्यंत मी त्यांच्या पाठीशी ठामपणे उभा आहे. ग्रामस्थांची शक्ती बनून त्यांना माझी पूर्ण साथ राहील. निडगल ग्रामस्थ मला जेव्हा हाक मारतील, तेव्हा त्यांच्या सेवेसाठी मी सदैव हजर राहीन,” अशी भावना इरफान तालिकोटी यांनी व्यक्त केली.
दरम्यान, या प्रकरणाची चौकशी निष्पक्षपणे करून नेमके सत्य समोर आणावे आणि दोषी व्यक्तींवर कायद्यानुसार कठोर कारवाई करावी, अशी मागणी यावेळी इरफान तालिकोटी व उपस्थितांकडून करण्यात आली.
यावेळी सामाजिक कार्यकर्ते ज्योतिबा गुरव (गणेबैल) यांच्यासह खानापूर व निडगल येथील युवा वर्ग आणि ग्रामस्थ मोठ्या संख्येने उपस्थित होते.
ನಿಡಗಲ್ ದೇವಸ್ಥಾನ ಧ್ವಂಸ ಪ್ರಕರಣ ಹುಚ್ಚರು ಅಥವಾ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರುವ ಕೃತ್ಯವಲ್ಲ; ಪ್ರಕರಣದ ಸಮಗ್ರ ತನಿಖೆ ನಡೆಸಿ – ಇರ್ಫಾನ್ ತಾಲಿಕೋಟಿ.
ಖಾನಾಪುರ : ನಿಡಗಲ್ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ತನಿಖೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ, ಅಂಜುಮನ್-ಎ-ಇಸ್ಲಾಂ ಅಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಇರ್ಫಾನ್ ತಾಲಿಕೋಟಿ ಅವರು ಇಂದು ತಮ್ಮ ಕಾರ್ಯಕರ್ತರೊಂದಿಗೆ ನಿಡಗಲ್ ಊರಿನ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದ ಬಳಿಕ ಇರ್ಫಾನ್ ತಾಲಿಕೋಟಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ. ಮಾತನಾಡಿ, “ಸಿದ್ದೇಶ್ವರ ದೇವಸ್ಥಾನಕ್ಕೆ ಇಂದು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ದೇವಸ್ಥಾನದ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತುಳಸಿ ಕಟ್ಟೆಯನ್ನು ಯಾವ ರೀತಿಯಲ್ಲಿ ಒಡೆದು ಹಾಕಲಾಗಿದೆ, ದೇವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದಿರುವುದು, ಜೊತೆಗೆ ಆಮೆ, ನಂದಿ ಹಾಗೂ ಶಿವಲಿಂಗವನ್ನು ಯಾವ ರೀತಿಯಲ್ಲಿ ಧ್ವಂಸಗೊಳಿಸಲಾಗಿದೆ ಎಂಬುದನ್ನು ಗಮನಿಸಿದಾಗ, ಇದು ಕೇವಲ ಯಾವುದೋ ಹುಚ್ಚು ಅಥವಾ ಮಾನಸಿಕ ಅಸ್ವಸ್ಥ ವ್ಯಕ್ತಿಯ ಕೃತ್ಯ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ,” ಎಂದರು.
“ದೇವಸ್ಥಾನದಲ್ಲಿರುವ ವಸ್ತುಗಳನ್ನು ಧ್ವಂಸಗೊಳಿಸಿರುವ ರೀತಿಯನ್ನು ಗಮನಿಸಿದರೆ, ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿ ನಡೆಸಿರಬಹುದು ಹಾಗೂ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವಾಗಿರಬಹುದು ಎಂಬುದು ನನಗೆ ಕಂಡುಬರುತ್ತದೆ. ಆದ್ದರಿಂದ ಈ ಪ್ರಕರಣದ ಎಲ್ಲಾ ಆಯಾಮಗಳಲ್ಲೂ ಸಮಗ್ರ ಹಾಗೂ ಆಳವಾದ ತನಿಖೆ ನಡೆಯುವುದು ಅತ್ಯಂತ ಅಗತ್ಯವಾಗಿದೆ,” ಎಂದು ತಾಲಿಕೋಟಿ ಅಭಿಪ್ರಾಯ ವ್ಯಕ್ತಪಡಿಸಿದರು.
“ಯಾವುದೇ ಪ್ರಾರ್ಥನಾ ಸ್ಥಳವಾಗಿರಲಿ—ಚರ್ಚ್, ಮಸೀದಿ ಅಥವಾ ದೇವಸ್ಥಾನವಾಗಿರಲಿ—ಅಲ್ಲಿ ಸಮಾಜದ ಮತ್ತು ಭಕ್ತರ ಭಾವನೆಗಳು ಬೆಸೆದುಕೊಂಡಿರುತ್ತವೆ. ಆದ್ದರಿಂದ ಯಾವುದೇ ಧರ್ಮದ ಪ್ರಾರ್ಥನಾ ಸ್ಥಳವನ್ನು ಧ್ವಂಸಗೊಳಿಸುವುದು ತಪ್ಪು. ಇಂತಹ ಕೃತ್ಯವನ್ನು ಯಾರೂ ಮಾಡಬಾರದು,” ಎಂದು ಅವರು ಸ್ಪಷ್ಟಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಸಗಿದ ಸಮಾಜಕಂಟಕರನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲಿಕೋಟಿ ಒತ್ತಾಯಿಸಿದರು. ಅಲ್ಲದೆ ಈ ಪ್ರಕರಣದ ಸತ್ಯವನ್ನು ಆದಷ್ಟು ಬೇಗ ಹೊರತಂದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಮಧ್ಯೆ, ಅಂಕಲೆ ಗ್ರಾಮದ ರೈಲ್ವೆ ಹಳಿಗಳ ಸಮೀಪ ದೇವಸ್ಥಾನದ ಒಂದು ಗಂಟೆ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆ ಗಂಟೆ ನಿಖರವಾಗಿ ಯಾವ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ತಾಲಿಕೋಟಿ ಹೇಳಿದರು. ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಡೆದಿರುವ ವಿವಿಧ ಘಟನೆಗಳ ಕುರಿತು ತಾವು ಸವಿಸ್ತಾರವಾಗಿ ಅಧ್ಯಯನ ಮಾಡಿದ್ದು, ಈ ಪ್ರಕರಣದ ನೈಜ ಸತ್ಯ ಹೊರಬರಬೇಕಾಗಿದೆ ಎಂದು ಅವರು ತಿಳಿಸಿದರು.
ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿಯ ವಿಚಾರದಲ್ಲಿ ನಿಡಗಲ್ ಗ್ರಾಮಸ್ಥರಲ್ಲಿಯೂ ಸಂಪೂರ್ಣ ಒಮ್ಮತ ಹಾಗೂ ತೃಪ್ತಿ ಇಲ್ಲ ಎಂದು ತಾಲಿಕೋಟಿ ಹೇಳಿದರು. “ನಾನು ನಿಡಗಲ್ ಗ್ರಾಮದ ಗ್ರಾಮಸ್ಥರೊಂದಿಗೆ ಇದ್ದೇನೆ. ಈ ಸಂಪೂರ್ಣ ಪ್ರಕರಣದ ಸರಿಯಾದ ಮತ್ತು ಸಮಗ್ರ ತನಿಖೆ ನಡೆಯುವವರೆಗೆ ನಾನು ಅವರ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತೇನೆ. ಗ್ರಾಮಸ್ಥರ ಶಕ್ತಿಯಾಗಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಿಡಗಲ್ ಗ್ರಾಮಸ್ಥರು ಯಾವಾಗ ನನ್ನನ್ನು ಕರೆಯುತ್ತಾರೋ, ಆಗ ಅವರ ಸೇವೆಗಾಗಿ ನಾನು ಸದಾ ಹಾಜರಿರುತ್ತೇನೆ,” ಎಂದು ಇರ್ಫಾನ್ ತಾಲಿಕೋಟಿ ಭಾವನೆ ವ್ಯಕ್ತಪಡಿಸಿದರು.
ಈ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ನಿಖರವಾದ ಸತ್ಯವನ್ನು ಹೊರತರಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಇರ್ಫಾನ್ ತಾಲಿಕೋಟಿ ಹಾಗೂ ಉಪಸ್ಥಿತರಿದ್ದವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಜ್ಯೋತಿಬಾ ಗುರವ (ಗಣೇಬೈಲ್) ಸೇರಿದಂತೆ ಖಾನಾಪುರ ಹಾಗೂ ನಿಡಗಲ್ನ ಯುವಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



