7 हजारांहून अधिक विद्यार्थी एचआयव्ही पॉझिटिव्ह; कर्नाटक सरकारचा महाविद्यालयांसाठी मोठा निर्णय.
बंगळुरू : कर्नाटकात तरुणांमध्ये एचआयव्ही संसर्गाच्या वाढत्या प्रमाणामुळे राज्य सरकारने महत्त्वाचा निर्णय घेतला आहे. राज्यातील सर्व शासकीय, अनुदानित आणि खासगी महाविद्यालयांमध्ये मोफत एचआयव्ही तपासणी, जनजागृती आणि समुपदेशन शिबिरे आयोजित करण्याचे निर्देश देण्यात आले आहेत. या उपक्रमाचा उद्देश विद्यार्थ्यांमध्ये संसर्गाचे लवकर निदान करून त्यांना आवश्यक वैद्यकीय मार्गदर्शन आणि समुपदेशन उपलब्ध करून देणे हा आहे.
राष्ट्रीय एड्स नियंत्रण संघटनेच्या (NACO) उपलब्ध आकडेवारीनुसार, एचआयव्ही बाधितांच्या संख्येच्या बाबतीत कर्नाटक देशात तिसऱ्या क्रमांकावर आहे. राज्यात सध्या सुमारे 2.60 लाख नागरिक एचआयव्हीसह जीवन जगत असून त्यापैकी जवळपास 2.05 लाख जणांवर नियमित उपचार सुरू आहेत. मात्र, अंदाजे 54 हजार नागरिकांना स्वतःला एचआयव्हीची लागण झाल्याची माहितीच नसल्याने आरोग्य यंत्रणेची चिंता वाढली आहे.
विशेषतः 18 ते 35 वर्षे वयोगटातील तरुणांमध्ये संसर्गाचे प्रमाण झपाट्याने वाढत असल्याचे निरीक्षण समोर आले आहे. 2023-24 मध्ये या वयोगटातील एचआयव्ही बाधितांची संख्या सुमारे 44,500 होती, ती 2025-26 मध्ये वाढून 66,600 वर पोहोचल्याचे सांगितले जाते. तसेच 18 ते 25 वर्षे वयोगटातील 7 हजारांहून अधिक विद्यार्थ्यांची एचआयव्ही चाचणी पॉझिटिव्ह आल्याची माहिती समोर आल्याने शिक्षण व आरोग्य क्षेत्रात चिंतेचे वातावरण निर्माण झाले आहे.
या पार्श्वभूमीवर विश्वेश्वरैया तंत्रज्ञान विद्यापीठाने (VTU) आपल्या सर्व संलग्न अभियांत्रिकी महाविद्यालयांना एकात्मिक आरोग्य शिबिरे आयोजित करण्याचे निर्देश दिले आहेत. या शिबिरांमध्ये एचआयव्ही तपासणी, जनजागृती, समुपदेशन तसेच आवश्यक वैद्यकीय सल्ला दिला जाणार आहे. विद्यार्थ्यांची ओळख, वैद्यकीय माहिती आणि तपासणी अहवाल पूर्णपणे गोपनीय ठेवले जातील, असे विद्यापीठाने स्पष्ट केले आहे.
ही मोहीम ‘मोबिलायझेशन फॉर एड्स सेफ्टी (MAS)’ कार्यक्रमांतर्गत राबविण्यात येणार असून एचआयव्हीबरोबरच हिपॅटायटीस-बी आणि सिफिलिस यांसारख्या संसर्गजन्य आजारांबाबतही जनजागृती केली जाणार आहे. जिल्हा एड्स नियंत्रण अधिकाऱ्यांच्या सहकार्याने ही शिबिरे टप्प्याटप्प्याने आयोजित केली जातील.
महत्त्वाची बाब म्हणजे एचआयव्ही तपासणी कोणत्याही विद्यार्थ्यासाठी सक्तीची नसून ती पूर्णपणे ऐच्छिक असेल. विद्यार्थ्यांच्या संमतीनंतरच तपासणी केली जाणार आहे. तसेच कर्नाटक राज्य एड्स प्रतिबंधक संस्थेने (KSAPS) विद्यार्थ्यांसाठी क्यूआर कोड आधारित स्व-जोखीम मूल्यांकन प्रणाली विकसित केली आहे. हा क्यूआर कोड स्कॅन करून विद्यार्थी स्वतःच्या जोखमीचे प्राथमिक मूल्यांकन करू शकणार आहेत.
या उपक्रमातून विद्यार्थ्यांना केवळ तपासणीच नव्हे, तर गोपनीय समुपदेशन, आवश्यक उपचारांची माहिती आणि एचआयव्हीबाबतचे गैरसमज दूर करण्यासाठी मार्गदर्शनही दिले जाणार आहे. सामाजिक कलंक कमी करून वेळेत निदान व उपचाराला प्रोत्साहन देणे हेही या मोहिमेचे प्रमुख उद्दिष्ट आहे.
जुलै 2026 पासून सुरू झालेली ही मोहीम पुढील आठ महिन्यांत राज्यभर राबविण्यात येणार आहे. प्रारंभी जनजागृती कार्यक्रम, मार्गदर्शन सत्रे आणि आरोग्य शिबिरे आयोजित केली जातील. त्यानंतर 12 ऑगस्ट (युवा दिन) निमित्त फ्लॅश मॉब, पथनाट्य, सांस्कृतिक कार्यक्रम आणि विविध जनजागृती उपक्रमांच्या माध्यमातून तरुणांमध्ये एचआयव्ही प्रतिबंधाचा संदेश पोहोचविण्यात येणार आहे.
व्हीटीयूचे कुलगुरू एस. विद्याशंकर यांनी सांगितले की, हा अत्यंत संवेदनशील विषय असल्याने सर्व महाविद्यालयांना विद्यार्थ्यांच्या गोपनीयतेचे काटेकोर पालन करण्याच्या सूचना देण्यात आल्या आहेत. कोणत्याही विद्यार्थ्याला अस्वस्थ किंवा लाजिरवाणे वाटेल अशी परिस्थिती निर्माण होणार नाही, याची विशेष काळजी घेण्याचे निर्देशही देण्यात आले आहेत.
विद्यापीठाने सर्व संलग्न महाविद्यालयांना आयोजित करण्यात आलेल्या आरोग्य शिबिरांचा सविस्तर अहवाल सादर करण्यास सांगितले असून, त्याच्या आधारे मोहिमेचा आढावा घेऊन पुढील आरोग्य धोरणे निश्चित केली जाणार आहेत.
7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಚ್ಐವಿ ಪಾಸಿಟಿವ್; ಕರ್ನಾಟಕ ಸರ್ಕಾರದ ವತಿಯಿಂದ ಕಾಲೇಜುಗಳಿಗೆ ಮಹತ್ವದ ನಿರ್ಧಾರ.
ಬೆಂಗಳೂರು : ಕರ್ನಾಟಕದ ಯುವಕರಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ಉಚಿತ ಎಚ್ಐವಿ ಪರೀಕ್ಷೆ, ಜಾಗೃತಿ ಮತ್ತು ಸಮಾಲೋಚನಾ ಶಿಬಿರಗಳನ್ನು ಆಯೋಜಿಸಲು ಸೂಚನೆ ನೀಡಲಾಗಿದೆ. ಈ ಉಪಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಅವರಿಗೆ ಅಗತ್ಯ ವೈದ್ಯಕೀಯ ಮಾರ್ಗದರ್ಶನ ಮತ್ತು ಸಮಾಲೋಚನೆ ಒದಗಿಸುವುದಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಲಭ್ಯಪಡಿಸಿರುವ ಅಂಕಿಅಂಶಗಳ ಪ್ರಕಾರ, ಎಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 2.60 ಲಕ್ಷ ಜನರು ಎಚ್ಐವಿ ಸೊಂಕಿತರು ಬದುಕುತ್ತಿದ್ದು, ಅವರಲ್ಲಿ ಸುಮಾರು 2.05 ಲಕ್ಷ ಮಂದಿ ನಿಯಮಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅಂದಾಜು 54 ಸಾವಿರ ಜನರಿಗೆ ತಮಗೆ ಎಚ್ಐವಿ ಸೋಂಕು ತಗುಲಿರುವ ವಿಷಯವೇ ತಿಳಿದಿಲ್ಲ ಎನ್ನುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.
ವಿಶೇಷವಾಗಿ 18 ರಿಂದ 35 ವರ್ಷ ವಯೋಮಾನದ ಯುವಕರಲ್ಲಿ ಸೋಂಕಿನ ಪ್ರಮಾಣ ವೇಗವಾಗಿ ಏರಿಕೆಯಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. 2023-24ರಲ್ಲಿ ಈ ವಯೋಮಾನದ ಎಚ್ಐವಿ ಸೋಂಕಿತರ ಸಂಖ್ಯೆ ಸುಮಾರು 44,500 ಇದ್ದರೆ, 2025-26ರಲ್ಲಿ ಅದು 66,600ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ 18 ರಿಂದ 25 ವರ್ಷ ವಯೋಮಾನದ 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಎಚ್ಐವಿ ಪಾಸಿಟಿವ್ ಬಂದಿರುವ ಮಾಹಿತಿ ಬೆಳಕಿಗೆ ಬಂದಿರುವುದರಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ತನ್ನ ಅಧೀನದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಿಗೆ ಸಮಗ್ರ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಸೂಚಿಸಿದೆ. ಈ ಶಿಬಿರಗಳಲ್ಲಿ ಎಚ್ಐವಿ ಪರೀಕ್ಷೆ, ಜಾಗೃತಿ ಕಾರ್ಯಕ್ರಮಗಳು, ಸಮಾಲೋಚನೆ ಹಾಗೂ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳ ಗುರುತು, ವೈದ್ಯಕೀಯ ಮಾಹಿತಿ ಮತ್ತು ಪರೀಕ್ಷಾ ವರದಿಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ಈ ಅಭಿಯಾನವನ್ನು ‘ಮೊಬಿಲೈಸೇಶನ್ ಫಾರ್ ಏಡ್ಸ್ ಸೇಫ್ಟಿ (MAS)’ ಕಾರ್ಯಕ್ರಮದಡಿ ನಡೆಸಲಾಗುತ್ತಿದ್ದು, ಎಚ್ಐವಿಯ ಜೊತೆಗೆ ಹೆಪಟೈಟಿಸ್-ಬಿ ಮತ್ತು ಸಿಫಿಲಿಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಕುರಿತು ಸಹ ಜಾಗೃತಿ ಮೂಡಿಸಲಾಗುವುದು. ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳ ಸಹಯೋಗದೊಂದಿಗೆ ಈ ಶಿಬಿರಗಳನ್ನು ಹಂತ ಹಂತವಾಗಿ ಆಯೋಜಿಸಲಾಗುವುದು.
ಗಮನಾರ್ಹ ವಿಷಯವೆಂದರೆ, ಎಚ್ಐವಿ ಪರೀಕ್ಷೆ ಯಾವುದೇ ವಿದ್ಯಾರ್ಥಿಗೆ ಕಡ್ಡಾಯವಲ್ಲ; ಅದು ಸಂಪೂರ್ಣ ಸ್ವಯಂಪ್ರೇರಿತ (ಐಚ್ಛಿಕ)ವಾಗಿರುತ್ತದೆ. ವಿದ್ಯಾರ್ಥಿಗಳ ಸ್ಪಷ್ಟ ಒಪ್ಪಿಗೆಯ ನಂತರವೇ ಪರೀಕ್ಷೆ ನಡೆಸಲಾಗುವುದು. ಜೊತೆಗೆ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸಂಸ್ಥೆ (KSAPS) ವಿದ್ಯಾರ್ಥಿಗಳಿಗಾಗಿ ಕ್ಯೂಆರ್ ಕೋಡ್ ಆಧಾರಿತ ಸ್ವಯಂ-ಅಪಾಯ ಮೌಲ್ಯಮಾಪನ (Self-Risk Assessment) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಅಪಾಯದ ಮಟ್ಟವನ್ನು ಪ್ರಾಥಮಿಕವಾಗಿ ಸ್ವತಃ ಮೌಲ್ಯಮಾಪನ ಮಾಡಿಕೊಳ್ಳಬಹುದು.
ಈ ಉಪಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಷ್ಟೇ ಅಲ್ಲದೆ, ಗೌಪ್ಯ ಸಮಾಲೋಚನೆ, ಅಗತ್ಯ ಚಿಕಿತ್ಸೆಯ ಮಾಹಿತಿ ಹಾಗೂ ಎಚ್ಐವಿ ಕುರಿತ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸೂಕ್ತ ಮಾರ್ಗದರ್ಶನವೂ ನೀಡಲಾಗುವುದು. ಸಾಮಾಜಿಕ ಕಳಂಕವನ್ನು ಕಡಿಮೆ ಮಾಡಿ, ಸಮಯಕ್ಕೆ ಸರಿಯಾಗಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಉತ್ತೇಜನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಜುಲೈ 2026ರಿಂದ ಆರಂಭಗೊಂಡಿರುವ ಈ ಅಭಿಯಾನ ಮುಂದಿನ ಎಂಟು ತಿಂಗಳುಗಳ ಅವಧಿಯಲ್ಲಿ ರಾಜ್ಯಾದ್ಯಂತ ಜಾರಿಗೊಳ್ಳಲಿದೆ. ಆರಂಭದಲ್ಲಿ ಜಾಗೃತಿ ಕಾರ್ಯಕ್ರಮಗಳು, ಮಾರ್ಗದರ್ಶನ ಸತ್ರಗಳು ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ನಂತರ ಆಗಸ್ಟ್ 12 (ಯುವ ದಿನ)ದ ಅಂಗವಾಗಿ ಫ್ಲ್ಯಾಶ್ ಮಾಬ್, ಬೀದಿ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಜಾಗೃತಿ ಚಟುವಟಿಕೆಗಳ ಮೂಲಕ ಯುವಕರಿಗೆ ಎಚ್ಐವಿ ತಡೆಗಟ್ಟುವ ಸಂದೇಶವನ್ನು ತಲುಪಿಸಲಾಗುವುದು.
ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್ ಅವರು ಮಾತನಾಡಿ, ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಎಲ್ಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಯಾವುದೇ ವಿದ್ಯಾರ್ಥಿಗೆ ಮುಜುಗರ ಅಥವಾ ಅಸಹಜ ಪರಿಸ್ಥಿತಿ ಉಂಟಾಗದಂತೆ ವಿಶೇಷ ಕಾಳಜಿ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಅಲ್ಲದೆ, ಎಲ್ಲಾ ಸಂಯೋಜಿತ ಕಾಲೇಜುಗಳು ಆಯೋಜಿಸಿರುವ ಆರೋಗ್ಯ ಶಿಬಿರಗಳ ವಿವರವಾದ ವರದಿಯನ್ನು ಸಲ್ಲಿಸುವಂತೆ ವಿಶ್ವವಿದ್ಯಾಲಯ ಸೂಚಿಸಿದ್ದು, ಅದರ ಆಧಾರದ ಮೇಲೆ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿ ಮುಂದಿನ ಆರೋಗ್ಯ ನೀತಿಗಳನ್ನು ರೂಪಿಸಲಾಗುವುದು.


