अळणावर रेल्वे स्थानकावर अधिक एक्स्प्रेस गाड्यांना थांबा द्यावा; केंद्रीय मंत्री प्रल्हाद जोशी यांना निवेदन.
अळणावर (प्रतिनिधी) : अमृत भारत स्थानक योजनेअंतर्गत अळ्णावर रेल्वे स्थानकाचे आधुनिकीकरण करण्यात आले असून, या स्थानकावरून धावणाऱ्या प्रमुख एक्स्प्रेस रेल्वेगाड्यांना नियमित थांबा देण्यात यावा, अशी मागणी बंगळुरू येथील गोसावीमठाचे मंजुनाथ भारती स्वामी यांनी केंद्रीय मंत्री प्रल्हाद जोशी यांच्याकडे निवेदनाद्वारे केली.
अळ्णावर रेल्वे स्थानकाच्या उद्घाटन समारंभासाठी आलेल्या केंद्रीय मंत्री प्रल्हाद जोशी यांची स्वामीजी यांच्या नेतृत्वाखाली शहरातील ज्येष्ठ नागरिक, विविध संघटना व संस्थांचे पदाधिकारी, विद्यमान व माजी स्थानिक स्वराज्य संस्थांचे सदस्य, रेल्वे स्थानक सल्लागार समितीचे सदस्य तसेच नागरिकांनी भेट घेऊन प्रवाशांच्या वतीने हे निवेदन सादर केले.

निवेदनात नमूद करण्यात आले आहे की, अळ्णावर हे पश्चिम घाटाचे महत्त्वाचे प्रवेशद्वार असून शिक्षण, रोजगार, व्यापार, पर्यटन आणि धार्मिक कारणांसाठी दररोज हजारो प्रवासी या मार्गावरून प्रवास करतात. त्यामुळे प्रमुख एक्स्प्रेस रेल्वेगाड्यांना अळणावर येथे थांबा दिल्यास सर्वसामान्य प्रवाशांची मोठी सोय होईल.
यावेळी अळ्णावर अर्बन बँकेचे अध्यक्ष शिवलिंग जकाती, रेल्वे स्थानक सल्लागार समितीचे सदस्य प्रवीण पवार, सोमशेखर अंबडगट्टी, नारायण मोरे, मल्लाप्पा गाणिगेर, भरतेश पाटील, पुंडलिक पारदी यांच्यासह अनेक मान्यवर उपस्थित होते.
ಅಳ್ನಾವರ ರೈಲು ನಿಲ್ದಾಣದಲ್ಲಿ ಹೆಚ್ಚಿನ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ.
ಅಳ್ನಾವರ (ಪ್ರತಿನಿಧಿ) : ಅಮೃತ ಭಾರತ ನಿಲ್ದಾಣ ಯೋಜನೆಯಡಿ ಅಳ್ನಾವರ ರೈಲು ನಿಲ್ದಾಣವನ್ನು ಆಧುನೀಕರಿಸಲಾಗಿದ್ದು, ಈ ನಿಲ್ದಾಣದ ಮೂಲಕ ಸಂಚರಿಸುವ ಪ್ರಮುಖ ಎಕ್ಸ್ಪ್ರೆಸ್ ರೈಲುಗಳಿಗೆ ನಿಯಮಿತ ನಿಲುಗಡೆ ನೀಡಬೇಕು ಎಂದು ಬೆಂಗಳೂರು ಗೋಸಾವಿಮಠದ ಮಂಜುನಾಥ ಭಾರತಿ ಸ್ವಾಮೀಜಿ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಅಳ್ನಾವರ ರೈಲು ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಪಟ್ಟಣದ ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಸದಸ್ಯರು, ರೈಲು ನಿಲ್ದಾಣ ಸಲಹಾ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಭೇಟಿ ಮಾಡಿ ಪ್ರಯಾಣಿಕರ ಪರವಾಗಿ ಈ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ ಅಳ್ನಾವರವು ಪಶ್ಚಿಮ ಘಟ್ಟದ ಪ್ರಮುಖ ಪ್ರವೇಶ ದ್ವಾರವಾಗಿದ್ದು, ಶಿಕ್ಷಣ, ಉದ್ಯೋಗ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕಾರಣಗಳಿಗಾಗಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಪ್ರಮುಖ ಎಕ್ಸ್ಪ್ರೆಸ್ ರೈಲುಗಳಿಗೆ ಅಳ್ನಾವರದಲ್ಲಿ ನಿಲುಗಡೆ ನೀಡಿದರೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಅಳ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಲಿಂಗ ಜಕಾತಿ, ರೈಲು ನಿಲ್ದಾಣ ಸಲಹಾ ಸಮಿತಿಯ ಸದಸ್ಯರಾದ ಪ್ರವೀಣ ಪವಾರ್, ಸೋಮಶೇಖರ ಅಂಬಡಗಟ್ಟಿ, ನಾರಾಯಣ ಮೋರೆ, ಮಲ್ಲಪ್ಪ ಗಾಣಿಗೇರ, ಭರತೇಶ ಪಾಟೀಲ, ಪುಂಡಲೀಕ ಪಾರದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

