पल्स पोलिओ मोहिमेसाठी खानापूर तालुका सज्ज; पाच वर्षांखालील सर्व बालकांना पोलिओचे दोन थेंब देण्याचे आवाहन.
खानापूर : प्रतिनिधी
राष्ट्रीय पल्स पोलिओ लसीकरण कार्यक्रम रविवार, दि. 28 जून 2026 रोजी खानापूर तालुक्यात उत्साहात राबविण्यात येणार आहे. या मोहिमेअंतर्गत पाच वर्षांखालील प्रत्येक बालकाला पोलिओ प्रतिबंधक लसीचे दोन थेंब देण्यात येणार असून, पालकांनी आपल्या पाल्यांना जवळच्या पल्स पोलिओ केंद्रावर आणून लसीकरण करून घ्यावे, असे आवाहन तालुका आरोग्य विभागाने केले आहे. हा कार्यक्रम राज्यभर राबविण्यात येत आहे.
या मोहिमेचा शुभारंभ जांबोटी गावातील पोलिओ लसीकरण केंद्रावर आमदार विठ्ठल हलगेकर यांच्या हस्ते होणार आहे.
तालुक्यात एकूण 16,180 बालकांना पोलिओचे डोस देण्याचे उद्दिष्ट ठेवण्यात आले असून, त्यासाठी 135 लसीकरण केंद्रे आणि 283 पथके कार्यरत राहणार आहेत. याशिवाय स्थलांतरित मजूर, बांधकाम कामगार आणि इतर वंचित घटकांच्या मुलांपर्यंतही पोलिओ लस पोहोचविण्यासाठी विशेष व्यवस्था करण्यात आली आहे.
“एकही बालक पोलिओ लसीपासून वंचित राहू नये,” यासाठी सर्व पालकांनी सहकार्य करून कार्यक्रम यशस्वी करावा, असे आवाहन तालुका आरोग्य अधिकारी डॉ. महेश किवडसण्णावर यांनी केले आहे.
ಪಲ್ಸ್ ಪೋಲಿಯೊ ಅಭಿಯಾನಕ್ಕೆ ಖಾನಾಪುರ ತಾಲ್ಲೂಕು ಸಜ್ಜು; ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊದ ಎರಡು ಹನಿ ಲಸಿಕೆ ಹಾಕಿಸುವಂತೆ ಮನವಿ.
ಖಾನಾಪುರ : ಪ್ರತಿನಿಧಿ
ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವು ಭಾನುವಾರ, ಜೂನ್ 28, 2026 ರಂದು ಖಾನಾಪುರ ತಾಲ್ಲೂಕಿನಾದ್ಯಂತ ಉತ್ಸಾಹದಿಂದ ನಡೆಯಲಿದೆ. ಈ ಅಭಿಯಾನದಡಿ ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೊ ತಡೆಗಟ್ಟುವ ಎರಡು ಹನಿ ಲಸಿಕೆಯನ್ನು ನೀಡಲಾಗುತ್ತದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸಮೀಪದ ಪಲ್ಸ್ ಪೋಲಿಯೊ ಕೇಂದ್ರಕ್ಕೆ ಕರೆತಂದು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ತಾಲ್ಲೂಕು ಆರೋಗ್ಯ ಇಲಾಖೆ ಮನವಿ ಮಾಡಿದೆ. ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನಕ್ಕೆ ಜಾಂಬೋಟಿ ಗ್ರಾಮದ ಪಲ್ಸ್ ಪೋಲಿಯೊ ಲಸಿಕಾ ಕೇಂದ್ರದಲ್ಲಿ ಶಾಸಕರಾದ ವಿಠ್ಠಲ ಹಲಗೇಕರ ಅವರು ಚಾಲನೆ ನೀಡಲಿದ್ದಾರೆ. ಖಾನಾಪುರ ತಾಲ್ಲೂಕಿನಲ್ಲಿ ಒಟ್ಟು 16,180 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 135 ಲಸಿಕಾ ಕೇಂದ್ರಗಳು ಹಾಗೂ 283 ತಂಡಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೆ ವಂಚಿತ ವರ್ಗಗಳ ಮಕ್ಕಳಿಗೂ ಪೋಲಿಯೊ ಲಸಿಕೆ ತಲುಪುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
“ಒಂದು ಮಗುವೂ ಪೋಲಿಯೊ ಲಸಿಕೆಯಿಂದ ವಂಚಿತವಾಗಬಾರದು” ಎಂಬ ಉದ್ದೇಶದಿಂದ ಎಲ್ಲಾ ಪಾಲಕರು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವಡಸಣ್ಣವರ ಅವರು ಮನವಿ ಮಾಡಿದ್ದಾರೆ.


