बिष्ठवा देवी यात्रा महोत्सव 23 ऑक्टोबर पासून सुरू होत आहे.
कक्केरी : ऐतिहासिक पार्श्वभूमी असलेल्या बेळगाव जिल्ह्यातील खानापूर तालुक्यातील कक्केरी येथील श्री बिष्टवा देवी यात्रेची सुरुवात 23 तारखेपासून होणार आहे. सदर देवीची यात्रा फार प्राचीन काळापासून होत आहे.
सोमवार दिनांक 23 ते मंगळवार दिनांक 24 ऑक्टोबर पर्यंत देवीचा संपूर्ण कार्यक्रम. मंगळवारी दिनांक 24 ऑक्टोबर पहाटे 4 ते 6 वाजेपर्यंत नारळ फोडणे. तसेच मंगळवार 24 व बुधवारी 25 दोन दिवस खुल्या जंगी कुस्त्या होणार आहेत.
वर्षभरात देवीच्या नावाने देवीला एकही नारळ फोडला जात नाही. परंतु दसरा, दिवाळीचा पाडवा, आणि गुढी पाडवा अशा वर्षातील तीन सणांमध्ये पहाटे 4 ते 6 या वेळेत नारळ फोडण्याची प्रथा आहे. त्याचा भाविकांनी लाभ घ्यावात असे आवाहन मंदिराचे अध्यक्ष कार्तिक अंबोजी यांनी केले आहे.
बिष्टम्मा देवी यात्रेसाठी जिल्हा प्रशासन मूलभूत सुविधा पुरवणार आहे..
यात्रा म्हटले तर लोक जमतातच आणि मुलभूत सुविधांची गरज सुद्धा भासते. बाराव्या शतकातील शिवशरण दोहर कक्कय्या संघाची ऐतिहासिक पार्श्वभूमी असलेल्या बेळगाव जिल्ह्यातील खानापूर तालुक्यातील कक्केरी गावातील श्री बिष्टदेवी यात्रा ही जिल्ह्यातील सर्वात मोठी जत्रा म्हणून ओळखली जात आहे.
जिल्हा प्रशासनाने म्हैसूर दसरा, कित्तूर उत्सव, यल्लम्मा देवी यात्रे प्रमाणे, कक्केरी यात्रेलापण समान दर्जा मिळावात यासाठी जिल्हा प्रशासनाने अधिक महत्त्व देऊन प्रयत्न करावेत अशी मागणी खानापूर तालुका शेतकरी संघटनेच्या पदाधिकाऱ्यांनी केली आहे.
यामध्ये अधिक बस सुविधा, अग्निशमन दलाचे वाहन, (मोबाईल) टॉयलेट वाहने, सात दिवस अखंड वीजपुरवठा व्यवस्था,
जत्रा संपेपर्यंत सराईत दुकान सुरू ठेवणे, वाहतूक व कोंडी सोडविण्यासाठी अधिक पोलीस कर्मचारी नियुक्त करणे, पिण्याच्या पाण्याच्या टँकरची व्यवस्था करणे, रुग्णालयात अधिक कर्मचारी उपलब्ध करून देणे, दवाखान्यात औषध पुरवठा करणे. तसेच क्रीडापटूंसाठी खेळांचे आयोजन करावेत.
उत्तर कन्नड जिल्हा कारवार, हळीयाल, दांडेली, धारवाड जिल्हा, धारवाड, हुबळी, बेळगाव जिल्हा बैलहोंगल, कित्तूर, खानापूर, संवदत्ती, गोवा आणि महाराष्ट्र राज्यातील 4 लाखांहून अधिक भाविक या यात्रेत सामील होण्याची अपेक्षा आहे. जिल्हा प्रशासनाने अधिक परिश्रम घेऊन ही यात्रा चांगली व्हावीत म्हणून प्रयत्न करावेत.
श्री बिष्ठादेवी यात्रेत पशुबळी देण्यास बंदी..
भाविकांनी कोणत्याही कारणास्तव मंदिरासमोर पशु-पक्ष्यांचा बळी देऊ नयेत तसेच शेजारी मेंढ्या, कोंबडी किंवा इतर कोणत्याही प्राण्याचा बळी देऊ नयेत, तसे करण्याचे आढळल्यास कायदेशीर कारवाई केली जाईल. असे प्रशासनातर्फे कळविण्यात आले आहे.
आळनावर, हलियाळ, दांडेली, धारवाड, तसेच बेळगाव, खानापुर, कित्तूर, बैलहोंगल यासह अनेक गावांतील भाविक प्राणी, पक्षी बळी देण्यासाठी घेऊन येत असतात, हुलीकेरी क्रॉस आणि सुरापूर, केरवाड, (हिडकल) क्रॉसजवळ एक चेक पोस्ट करण्यात आला आहे. तेथे तपासणी करताना पशू,पक्षी, प्राणी आढळून आल्यास ते ताब्यात घेऊन वाचवले जाणार आहेत.
यात्रेत येणाऱ्या महिला भाविकांनी सोन्याचे दागिने घालून येऊ नयेत, जत्रेदरम्यान चोरीच्या घटना, लहान मुले पळवून घेऊन जाणें, कोणी महिलांचा विनयभंग करणे, यात्रे दरम्यान वाहणं चोरीच्या घटना घडू नयेत म्हणून ग्रामपंचायत व मंदिरातर्फे व नंदगड पोलिस स्टेशन यांच्यावतीने पोलिस बंदोबस्त ठेवण्यात आला आहे. तसी घटना घडल्यास पोलिसांकडे तक्रार करू शकता.
बेळगाव, खानापूर, नंदगडसह अनेक गावांतून येणाऱ्या भाविकांना आणि अळनावर , हल्याळ, दांडेली, धारवाड येथून दुचाकी, कार, ट्रॅक, ट्रॅक्टर, लॉरी घेऊन येणाऱ्यां भाविकांसाठी हुलीकेरी क्रॉस आणि सुरपूर केरवाड (हिडकल) जवळ पार्किंगची व्यवस्था करण्यात आली आहे. सोमवार दुपारी 3 ते मंगळवार सकाळी 10 वाजेपर्यंत यात्रा क्षेत्रात वाहनांना बंदी घालण्यात आली आहे.
ही यात्रा सुरळीत पार पडण्यासाठी भाविकांनी सहकार्य करावेत, असी विनंती नंदगड पोलीस स्टेशनचे पी.आय. श्री एस.सी.पाटील यांनी केली आहे.
ಬಿಷ್ಟಾದೇವಿ ಜಾತ್ರಾ ಮಹೋತ್ಸವ 23 ರಿಂದ ಪ್ರಾರಂಭ.
ಐತಿಹಾಸಿಕ ಹಿನ್ನೆಲೆ ಇರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿಯ ಶ್ರೀ ಬಿಷ್ಟಾದೇವಿ ಜಾತ್ರೆ ಅ.23ರಿಂದ ನಡೆಯಲಿದೆ.
ದೇವಿಯ ಜಾತ್ರೆಯನ್ನು ಪುರಾತನ ಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ.
ಅ. 23 ಸೋಮವಾರರಿಂದ 24 ಮಂಗಳವಾರ ವರೆಗೆ ದೇವಿಗೆ ಉಡಿ ತುಂಬ ಕಾರ್ಯಕ್ರಮ.
ಅ. 24 ಮಂಗಳವಾರ ಬೆಳಿಗ್ಗೆ 4 ರಿಂದ 6 ರು ಗಂಟೆಯ ವರೆಗೆ ಟೆಂಗಿನಕಾಯಿ ಕಾಯಿ ಒಡೆಯುವುದು .
ಅ.24 ಮಂಗಳವಾರ ಅ . 25 ಬುಧವಾರ ಎರಡು ದಿನ ಬಯಲು ಜಂಗೀ ಕುಸ್ತಿಗಳು ನಡೆಯುತ್ತವೆ.
ದೇವಿಯ ಹೆಸರಿನಲ್ಲಿ ದಿನನಿತ್ಯ ಕಾಯಿ ಒಡೆಯುವುದಿಲ್ಲ. ವರ್ಷದ ಮೂರು ಹಬ್ಬಗಳಾದ ದಸರಾ ಪಾಡ್ಯ, ದೀಪಾವಳಿ ಪಾಡ್ಯ, ಯುಗಾದಿ ಪಾಡ್ಯದಂದು ಮಾತ್ರ ಬೆಳಿಗ್ಗೆ 4ರಿಂದ6ರ ವರಿಗೆ ಕಾಯಿ ಒಡೆಯುವ ಪದ್ಧತಿ ಇದೆ. ಭಕ್ತರು ಇದರ ಸದುಪಯೋಗ ಪಡೆಯಬೇಕು ಎಂದು ಮಂದಿರದ ಅಧ್ಯಕ್ಷ ಕಾರ್ತಿಕ ಅಂಬೋಜಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಬಿಷ್ಟಾದೇವಿ ಜಾತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸುವುದು.
ಜಾತ್ರೆಯೆಂದರೆ ಜನ ಸೇರುವರು ಜನ ಸೇರುತ್ತಾರೆ ಎಂದರೆ .ಮೂಲಭೂತ ಸೌಕರ್ಯಗಳು ಬೇಕು.
12ನೇ ಶತಮಾನದ ಶಿವಶರಣ ಡೋಹರ ಕಕ್ಕಯ್ಯ ಐಕ್ಯ ಸ್ಥಳವಾಗಿದ್ದು ಐತಿಹಾಸಿಕ ಹಿನ್ನೆಲೆ ಇರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಜಾತ್ರೆಯು ಜಿಲ್ಲೆಯಲ್ಲಿ ಅತಿ ದೊಡ್ಡ ಜಾತ್ರೆ ಇದಾಗಿದ್ದು.
ಜಿಲ್ಲಾಡಳಿತ ಹೆಚ್ಚಿನ ಮುತರ್ಜಿವಹಿಸಿ ಮೈಸೂರು ದಸರಾ, ಕಿತ್ತೂರು ಉತ್ಸವ , ಯಲ್ಲಮ್ಮ ದೇವಿ ಜಾತ್ರೆಗೆ , ಸಿಕ್ಕಂತಹಾ ಸ್ಥಾನಮಾನ ಕಕ್ಕೇರಿ ಜಾತ್ರೆಗೂ ಸಿಗುವಂತಾಗಬೇಕು ಎಂದು ಖಾನಾಪುರ ತಾಲೂಕು ರೈತ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ .
ಮೂಲಭೂತ ಸೌಕರ್ಯಗಳಾದ.
ಹೆಚ್ಚಿನ ಬಸ್ ಸೌಲಭ್ಯಗಳು, ಅಗ್ನಿಶಾಮಕ ದಳದ ನೀರಿನ ವಾಹನ, ಮೊಬೈಲ್ ( ಸಂಚಾರಿ) ಶೌಚಾಲಯದ ವಾಹನ ಗಳು, ವಿದ್ಯುತ್ ನಿರಂತರ ಏಳು ದಿನ ಪೂರೈಸುವ ವ್ಯವಸ್ಥೆ,
ಜಾತ್ರೆ ಮುಗಿಯುವವರೆಗೆ ಸರಾಯಿ ಅಂಗಡಿ ಬಂದ ಮಾಡಿಸುವುದು, ವಾಹನ ಸಂಚಾರ, ಹಾಗೂ ಜನದಟ್ಟಣೆ ನಿವಾರಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದು, ಕುಡಿಯುವ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ, ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಔಷದ ಗುಳಿಗೆ ಪೂರೈಸುವುದು,
ಕ್ರೀಡಾಪಟುಗಳ ಗೋಸ್ಕರ ಕ್ರೀಡೆಗಳು ನಿಯೋಜನೆ ಮಾಡುವುದು,
ಈ ಜಾತ್ರೆಗೆ ಉತ್ತರ ಕನ್ನಡ ಜಿಲ್ಲೆ ಕಾರವಾರ, ಹಳಿಯಾಳ, ದಾಂಡೇಲಿ, ಧಾರವಾಡ ಜಿಲ್ಲೆ, ಧಾರವಾಡ ,ಹುಬ್ಬಳ್ಳಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ, ಕಿತ್ತೂರು, ಖಾನಪುರ, ಸವದತ್ತಿ, ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 4ಲಕ್ಷಕ್ಕೂ ಹೆಚ್ಚು ಜನರು ಭಕ್ತರು ಸೇರುವ ನಿರೀಕ್ಷೆ ಇದ್ದು. ಜಿಲ್ಲಾಡಳಿತ ಹೆಚ್ಚಿನ ಮುತರ್ಜಿವಹಿಸಿ ಈ ಜಾತ್ರೆಯು ಉತ್ತಮ ಜಾತ್ರೆಯನ್ನಾಗಿ ಮಾಡಬೇಕು.
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಬಿಷ್ಠಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಭಕ್ತರು ಯಾವುದೇ ಕಾರಣಕ್ಕೂ ಮಂದಿರದ ಮುಂದೆ ಪ್ರಾಣಿ ಪಕ್ಷಿ ತುರುವುದು ಹಾಗೂ ಅಕ್ಕಪಕ್ಕದಲ್ಲಿ ಕುರಿ, ಕೋಳಿ, ಯಾವುದೇ ಪ್ರಾಣಿ ಬಲಿ ಕೊಡಬಾರದು ಒಂದು ವೇಳೆ ಯಾರಾದರೂ ಕೊಟ್ಟರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಳ್ಳಾವರ, ಹಳಿಯಾಳ, ದಾಂಡೇಲಿ,ಧಾರವಾಡ, ಕಡೆಯಿಂದ ಬರುವ ಭಕ್ತರು, ಹಾಗೂ ಬೆಳಗಾವಿ, ಖಾನಾಪುರ, ಕಿತ್ತೂರ, ಬೈಲಹೊಂಗಲ, ಸೇರಿದಂತೆ ಹಲವಾರು ಗ್ರಾಮಗಳಿಂದ ಬರುವ ಭಕ್ತರು ಪ್ರಾಣಿ, ಪಕ್ಷಿ, ಬಲಿಕೊಡಲು ಭಕ್ತರು ತೆಗೆದುಕೊಂಡು ಬಂದಲ್ಲಿ, ಹುಲಿಕೇರಿ ಕ್ರಾಸ್, ಹಾಗೂ ಸುರಪುರ ಕೇರವಾಡ ( ಹಿಡಕಲ್) ಕ್ರಾಸ್ ಬಳಿ ಚೆಕ್ ಪೋಸ್ಟ್ ಮಾಡಲಾಗಿದೆ. ಅಲ್ಲಿ ತಪಾಸನೆ ಮಾಡಿದ ಸಂದರ್ಭದಲ್ಲಿ ಕಂಡುಬಂದಲ್ಲಿ ಬಲಿ ಕೊಡುವ ಪ್ರಾಣಿ-ಪಕ್ಷಿಗಳು ತೆಗೆದುಕೊಂಡು ರಕ್ಷಿಸಲಾಗುತ್ತದೆ. ದಯಮಾಡಿ ಭಕ್ತರು ಕೈ ಬಿಟ್ಟು , ದೇವರಿಗೆ ಹಣ್ಣು ಕಾಯಿ, ದೇನಿಗೆ ರೂಪದಲ್ಲಿ ಹಣ, ನೀಡಿ ಉಡಿ ತುಂಬುವುದು ಒಳ್ಳೆಯದು.
ಜಾತ್ರೆಗೆ ಬರುವ ಭಕ್ತರು ಮಹಿಳೆಯರು ಮೈಮೇಲೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳದೆ, ರೋಡ ಗೋಲ್ಡ್ ಆವರಣಗಳನ್ನು ಬಳಸುವುದು ಸೂಕ್ತ, ಕಳ್ಳರ ಕಾಟಕ್ಕಾಗಿ ಸರಗಳರು, ಕಿಸೆಕಳ್ಳರಿಂದ ಎಚ್ಚರಿಕೆಯನ್ನು ವಹಿಸಬೇಕು.
ಜಾತ್ರೆ ಸಂದರ್ಭದಲ್ಲಿ ಕಳ್ಳತನವಾದಗ, ಮಕ್ಕಳು ತಪ್ಪಿಸಿಕೊಂಡ, ಹಾಗೂ ಯಾರಾದರೂ ಮಹಿಳೆಯರಿಗೆ ಚುಡಾಯಿಸಿದ, ಸಂದರ್ಭದಲ್ಲಿ ವಾಹನಗಳು, ಕಳ್ಳತನವಾದಗ ಜಾತ್ರೆಯಲ್ಲಿ ಗ್ರಾಮ ಪಂಚಾಯತ ಪ್ರವಾಸಿ ಮಂದಿರದಲ್ಲಿ ನಂದಗಡ ಠಾಣೆಯ ವತಿಯಿಂದ ಪೊಲೀಸ ಠಾಣೆ ಕೇಂದ್ರ ಮಾಡಲಾಗಿದೆ ಭಕ್ತರು ಇಲ್ಲಿ ಬಂದು ಪೊಲೀಸರಿಗೆ ಮಾಹಿತಿ ನೀಡಿ ದಾಖಲಿಸಬಹುದು.
ಬೆಳಗಾವಿ, ಖಾನಾಪುರ, ನಂದಗಡ, ಸೇರಿದಂತೆ ಹಲವಾರು ಗ್ರಾಮಗಳಿಂದ ಬರುವ ಹಾಗೂ ಅಳ್ಳಾವರ, ಹಳಿಯಾಳ, ದಾಂಡೇಲಿ,ಧಾರವಾಡ, ಕಡೆಯಿಂದ ದ್ವಿಚಕ್ರ, ಕಾರು, ಟ್ರ್ಯಾಕ್ಸ್, ಟ್ಯಾಕ್ಟರ್, ಲಾರಿ, ತಂದವರಿಗೆ ಹುಲಿಕೇರಿ ಕ್ರಾಸ್ ಹಾಗೂ ಸುರಪುರ ಕೇರವಾಡ (ಹಿಡಕಲ್) ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 3, ರಿಂದ ಮಂಗಳವಾರ ಬೆಳಿಗ್ಗೆ 10 ಗಂಟೆವರೆಗೆ ಜಾತ್ರೆಯ ಒಳಗಡೆ ವಾಹನಗಳನ್ನು ಬಿಡಲಾಗುವುದಿಲ್ಲ.
ಭಕ್ತರು ಸಹಕರಿಸಿ ಈ ಜಾತ್ರೆಯು ಸುಗಮವಾಗಿ ಹೋಗಲು ಸಹಕರಿಸಬೇಕಾಗಿ ವಿನಂತಿ.
ನಂದಗಡ ಠಾಣೆಯ ಪಿ ಐ.ಎಸ ಸಿ ಪಾಟೀಲ ಪ್ರಕಟಣೆಗೆ ತಿಳಿಸಿದ್ದಾರೆ.