
आयपीएल बेटींगप्रकरणी, खानापूरच्या 8 जणांवर कोलवा (गोवा) पोलिसांची कारवाई.
मडगाव : आयपीएल बेटींगप्रकरणी गोव्यातील, कोलवा पोलिस स्थानकाच्या हद्दीतील बाणावलीत खानापूर (बेळगाव) येथील आठ तरूणांना अटक करण्यात आली आहे. संशयीतांकडून 18 लाखांचा मुद्येमाल जप्त करण्यात आला आहे.
सदर प्रकरणात अटक करण्यात आलेल्या मध्ये, खानापुरातील युवकांचा सहभाग असून, पकडण्यात आलेल्या मधील काही युवकांनी 20 दिवसांपूर्वी, पालकमंत्र्यांच्या उपस्थितीत काँग्रेस पक्षाचे टावेल गळ्यात घालून, काँग्रेसमध्ये प्रवेश केला होता.
संशयीतांनी वासवाडो वाडी, बाणावली येथील जॅक कॉर्नरनजीक एक बंगला भाडेतत्वावर घेऊन, क्रिकेटवर बेटींग लावत होते. याची माहिती कोलवा पोलिसांना मिळाली. त्यानुसार अचानक छापा मारून, या सर्वांना ताब्यात घेण्यात आले आहे. त्यांच्याकडून मोबाईल, बेटींग साहित्य व वाहने असा एकूण 18 लाखांचा मुद्देमाल जप्त करण्यात आला आहे. शनिवारच्या रॉयल चॅलेंजर्स विरूध्द गुजरात टायटन्स या क्रिकेट सामान्यावर बेटिंग लावली जात असताना सदर कारवाई करण्यात आली आहे.
ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಖಾನಾಪುರದ 8 ಜನರನ್ನು ಕೋಲ್ವಾ (ಗೋವಾ) ಪೊಲೀಸರು ಬಂಧಿಸಿದ್ದಾರೆ ಹಾಗೂ ಅವರ ವಿರುದ್ಧ ಕ್ರಮ.
ಮಡಗಾಂವ್: ಐಪಿಎಲ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಕೋಲ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಾದ ಪೊಲೀಸರು ಖಾನಾಪುರದ (ಬೆಳಗಾವಿ) ಎಂಟು ಯುವಕರನ್ನು ಬಂಧಿಸಿ ಆರೋಪಿಗಳಿಂದ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಖಾನಾಪುರದ ಯುವಕರೂ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ, ಹಾಗೂ ಬಂಧಿತರಾದ ಕೆಲ ಯುವಕರು 20 ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಕಾಂಗ್ರೆಸ್ ಸೇರಿದ್ದರು.
ಶಂಕಿತ ಆರೋಪಿಗಳು ಬಾನಾವಳಿಯ ವಾಸ್ವಾಡೋ ವಾಡಿಯ ಜಾಕ್ ಕಾರ್ನರ್ ಬಳಿ ಬಂಗಲೆಯನ್ನು ಬಾಡಿಗೆಗೆ ಪಡೆದು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು. ಕೊಲ್ವಾ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ್ದು. ದಿಢೀರ್ ದಾಳಿ ನಡೆಸಿ ಎಲ್ಲರನ್ನೂ ವಶಕ್ಕೆ ಪಡೆದು ಇವರಿಂದ ಒಟ್ಟು 18 ಲಕ್ಷ ಮೌಲ್ಯದ ಮೊಬೈಲ್ ಫೋನ್, ಬೆಟ್ಟಿಂಗ್ ಸಾಮಗ್ರಿ, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರದ ರಾಯಲ್ ಚಾಲೆಂಜರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ಮಾಡುವಾಗ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
