
कागवाड येथे भीषण रस्ता अपघात. एका जोडप्याचा मृत्यू
कागवाड : तालुक्यातील मंगळसुली ऐनापूर रोडवर भरधाव वेगाने जाणाऱ्या कारचे वळणावर नियंत्रण सुटून रस्त्याच्या बाजूला असलेल्या, पाण्याने भरलेल्या खड्ड्यात पडून दाम्पत्याचा मृत्यू झाला.
कोल्हापूर जिल्ह्यातील कराविर तालुक्यातील कोटेरा गावातील आदर्श युवराज पांडव (वय 27) आणि शिवानी आदर्श पांडव (वय 20) यांचा मृत्यू झाला आहे. तर पाच जण जखमी झाले असून, त्यांना रुग्णालयात दाखल करण्यात आले आहे.
शनिवारी हे दाम्पत्य त्यांच्या फोर्ड कारमधून तालुक्यातील ऐनापूर येथे नातेवाईकाच्या घरी, लग्न समारंभासाठी आले होते. लग्न समारंभ उरकून घरी परतत असताना मंगळसुळी ऐनापुर रस्त्याच्या वळणावर चालकाचे कारवरील नियंत्रण सुटल्याने गाडी खड्ड्यात पडली.
कारमध्ये एकूण सात प्रवासी प्रवास करत होते, रुपाली गाडेकर, कुणाल गाडेकर, राजवीर पांडव, अनवी पांडव, पूजा बामणे यांना किरकोळ दुखापत झाली.
याप्रकरणी कागवाड पोलिस ठाण्यात गुन्ह्याची नोंद करण्यात आली आहे. डीवायएसपी प्रशांत मुन्नोल्ली, सीपीआय संतोष हल्लूर, पीएसआय जी.जी. बिरादार यांनी घटनास्थळी भेट देऊन पाहणी केली आहे.
ಕಾಗವಾಡ – ಭೀಕರ ರಸ್ತೆ ಅಪಘಾತ ; ದಂಪತಿ ಸಾವು
ಕಾಗವಾಡ : ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿಗಳು ಸಾವನ್ನತ್ತಿರುವ ಘಟನೆ ತಾಲೂಕಿನ ಮಂಗಸುಳಿ ಐನಪುರ ರಸ್ತೆಯಲ್ಲಿ ಸಂಭವಿಸಿದೆ.
ಕೊಲ್ಲಾಪುರ್ ಜಿಲ್ಲೆಯ ಕರವೀರ ತಾಲೂಕಿನ ಕೂಟೆರ ಗ್ರಾಮದ ಆದರ್ಶ ಯುವರಾಜ್ ಪಾಂಡವ್ (27), ಶಿವಾನಿ ಆದರ್ಶ್ ಪಾಂಡವ (20) ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ದಂಪತಿಗಳು ತಮ್ಮ ಫೋರ್ಡ್ ಕಾರಿನಲ್ಲಿ ತಾಲೂಕಿನ ಐನಾಪುರದ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ಬಂದಿದ್ದರು. ಮರಳಿ ಮನೆಗೆ ಹೋಗುವಾಗ ಮಂಗಸುಳಿ – ಐನಾಪುರ ರಸ್ತೆ ತಿರುವಿನಲ್ಲಿ ಕಾರು ನಿಯಂತ್ರಣ ಯಪ್ಪಿ ಹಳ್ಳಕ್ಕೆ ಬಿದ್ದಿದೆ.
ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ರೂಪಾಲಿ ಗಾಡೇಕರ್, ಕುನಾಲ್ ಗಾಡೇಕರ್, ರಾಜವೀರ ಪಾಂಡವ್, ಅನವಿ ಪಾಂಡವ್, ಪೂಜಾ ಬಾಮನೆ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಸಿಪಿಐ ಸಂತೋಷ್ ಹಳ್ಳೂರ್, ಪಿಎಸ್ಐ ಜಿ.ಜಿ. ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.
