
श्रीहरी छत्रपती शिवाजी महाराज गुरुकुल भूमिपूजन व मंजुनाथ भारती स्वामींचा द्वितीय पट्टाभिषेक सोहळा संपन्न.
हल्याळ अंत्योदय, ग्रामोदय आणि सर्वोदय या पद्धतीचे शिक्षण दिले पाहिजे. यासाठी गुरुकुल प्रकारची शैक्षणिक शाळा सुरू करण्याची संकल्पना अतिशय योग्य असल्याचे मत गोवा राज्याचे मुख्यमंत्री प्रमोद सावंत यांनी मत व्यक्त केले. मराठा समाजाच्या श्री हरी गोसाई मठाच्या वतीने हल्याळ शहराच्या सीमेवर असलेल्या हवागी गावात 3 एकर जागेवर बांधण्यात येणाऱ्या श्री हरी छत्रपती शिवाजी महाराज गुरुकुल शैक्षणिक संकुलनाचे भूमिपूजन आणि गविपुरम, बेंगळुरू येथील वेदांताचार्य श्री मंजुनाथ भारती स्वामीजींच्या द्वितीय वर्षाचा पट्टाभिषेक सोहळा मोठ्या उत्साहात संपन्न झाला यावेळी बोलताना त्यांनी वरील उद्गार काढले.
पुढे बोलताना मुख्यमंत्री प्रमोद सावंत म्हणाले की, आजच्या समाजात शिक्षण हे फक्त पैसे मिळवणे आणि नोकरी मिळवणे एवढेच मर्यादित होत चालले आहे. शिक्षणामध्ये कौशल्य, संस्कृती आणि मूल्यांचा समावेश असावा, ज्यासाठी प्राचीन गुरुकुल शिक्षण पद्धती परत येणे आवश्यक आहे. त्या संदर्भात मुख्यमंत्र्यांनी जाहीर केले की, मंजुनाथ भारती स्वामीजींनी गुरुकुल बांधण्याचा निर्णय घेतला असून आम्ही त्यांनां सर्वतोपरी सहकार्य करू. तसेच परमार्थ, धर्म, देवत्व, संस्कृती, अनुशासन इत्यादी मूल्यांवर आधारित शिक्षणासाठी देव, धर्म, देश या तीन तत्त्वांनुसार सुसंस्कृत समाजासाठी गुरुकुलाची उभारणी आवश्यक आहे. छत्रपती शिवाजी महाराजांच्या इच्छेनुसार महाराजांनी आपल्या काळात 18 पंथातील लोकांना एकत्र करून स्वराज्य उभारले, पंतप्रधान नरेंद्र मोदी यांनी 18 पंथातील लोकांच्या कल्याणासाठी विश्वकर्मा योजना राबवली, या योजनेचा सर्वांनी लाभ घ्यावा, असे आवाहन मुख्यमंत्री सावंत यांनी केले.

मराठा जगद्गुरु श्री मंजुनाथ भारती स्वामीजींनी आपल्या आर्शिवचनात सांगितले की, सर्वांच्या सहकार्याने ते उभारत असलेले गुरुकुल पाठशाळा ही केवळ मराठा समाजापुरती मर्यादित नसून ती इतर समाजातील प्रत्येकासाठी खुली आहे. शिवाजी महाराजांच्या नावावर असलेल्या या गुरुकुलात ज्या प्रकारे शिवाजी महाराजांनी 18 जातीजमातींना एकत्र करून एक मोठे साम्राज्य उभे केले त्याचप्रमाणे सुसंस्कृत शिक्षण, शिस्त, आत्मविश्वास, नैतिकता, व्यक्तिमत्व विकास असे शिक्षण आपण देणार आहोत. तरुण पिढीला वाईट व्यसनापासून मुक्त करण्याचे काम आपण करणार आहोत, स्वामीजींनी प्रत्येकाने आपले जीवन त्याप्रमाणे जगण्याचे आवाहन केले,
चिक्कमगळुरु गौरीगड्डे अवधूत विनय गुरुजी यांनी छत्रपती शिवाजी महाराज अभी जिंदा है मोदीजीके रूप में (शिवाजी महाराज आजही मोदीजींच्या रूपाने जिवंत आहेत) असे म्हणत भाषणाची सुरुवात केली. सध्या मॅकॉले शिक्षण पद्धतीमुळे वृद्धाश्रमांची संख्या वाढत आहे. मात्र, गुरुकुल शिक्षण पद्धतीमुळे वृद्धाश्रम कमी होतील, असे ते म्हणाले. तसेच मॅकॉले शिक्षणपद्धती रद्द करून गावोगावी गुरुकुल सुरू करावेत.
माजी उपमुख्यमंत्री डॉ. अस्वथनारायण म्हणाले की, सध्याच्या समाजात कोणत्या प्रकारचे शिक्षण उपलब्ध आहे. हे सर्वांना माहीत आहे. समाजाच्या सर्वांगीण प्रगतीसाठी आणि पुढच्या पिढीच्या चांगल्या भविष्यासाठी गुरुकुलाची उभारणी अत्यंत आवश्यक असल्याचे त्यांनी जाहीर केले.
खानापूरचे आमदार विठ्ठलराव हलगेकर यांनी आपल्या भाषणात, दुभंगलेल्या मराठा समाजाला एकत्र आणण्याच्या स्वामीजींच्या कार्याची प्रशंसा केली. शिवाजी महाराजांचा आदर्श सर्व वर्गांना एकत्र आणण्याचा असून हे सर्व केवळ गुरुकुल शिक्षणामुळेच शक्य असल्याचे सांगितले.
यावेळी माजी आमदार सुनील हेगडे, रुपाली नायक, मराठा विकास महामंडळाचे अध्यक्ष एम.जी.मुळे, श्री शिवलिंग स्वामीजी, श्री सुब्रमण्य स्वामीजी, मराठा प्राधिकरणाचे एमडी प्रकाश पागोजी, प्रख्यात नारायण तोसुर, सुभाष कोरवेकर, प्रकाश फाखरी, शंकर बेळगावकर, नंदा साळुंके, रामकुंकुरा, के. व इतर मराठा समाजाचे नेते मंडळी उपस्थित होते.
ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ್ ಗುರುಕುಲ ಭೂಮಿಪೂಜೆ ಮತ್ತು ಎರಡನೇ ಮಹಾಮಸ್ತಕಾಭಿಷೇಕ ಸಮಾರಂಭ ಪೂರ್ಣಗೊಂಡಿದೆ.
ಹಳಿಯಾಳ
ಅಂತ್ಯೋದಯ, ಗ್ರಾಮೋದಯ ಹಾಗೂ ಸರ್ವೋದಯ ಈ ಪದ್ದತಿಯಲ್ಲಿ ಶಿಕ್ಷಣ ದೊರೆಯಬೇಕು. ಅದಕ್ಕೆ ಗುರುಕುಲ ಮಾದರಿಯ ಶಿಕ್ಷಣ ಶಾಲೆ ಆರಂಭಿಸುವ ಪರಿಕಲ್ಪನೆ ಅತ್ಯಂತ ಯೋಗ್ಯವಾಗಿದೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ ಅಭಿಪ್ರಾಯಪಟ್ಟರು.
ಮರಾಠಾ ಸಮುದಾಯದ ಶ್ರೀ ಹರಿ ಗೋಸಾಯಿ ಮಠದವರು ಪಟ್ಟಣದ ಅಂಚಿನಲ್ಲಿರುವ ಹವಗಿ ಗ್ರಾಮದಲ್ಲಿಯ ೩ ಎಕರೆ ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲ ಶೈಕ್ಷಣಿಕ ಸಮುಚ್ಚಯದ ಭೂಮಿ ಪೂಜೆ ಹಾಗೂ ಬೆಂಗಳೂರಿನ ಗವಿಪುರಂನ ಗೋಸಾಯಿ ಮಹಾ ಸಂಸ್ಥಾನ ಮಠದ ಮರಾಠಾ ಜಗದ್ದರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಜಿಯವರ ದ್ವಿತೀಯ ವರ್ಷದ ಪಟ್ಟಾಭಿಷೇಕ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಶಿಕ್ಷಣವು ಕೇವಲ ಹಣ ಗಳಿಸಲು, ಉದ್ಯೋಗ ಪಡೆಯಲು ಮಾತ್ರ ಸೀಮಿತವಾಗುತ್ತಿದೆ. ಶಿಕ್ಷಣವು ಕೌಶಲ್ಯ, ಸಂಸ್ಕಾರ ಹಾಗೂ ಮೌಲ್ಯಯುತ ಅಂಶಗಳನ್ನು ಒಳಗೊಂಡಿರಬೇಕು, ಇದಕ್ಕಾಗಿ ಪುರಾತನ ಕಾಲದ ಗುರುಕುಲ ಶಿಕ್ಷಣ ಪದ್ದತಿ ಮತ್ತೇ ಮರಳಿ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಮಂಜುನಾಥ ಭಾರತಿ ಸ್ವಾಮಿಜಿಯವರು ಗುರುಕುಲ ನಿರ್ಮಾಣದ ಸಂಕಲ್ಪ ಮಾಡಿರುವುದು ನಾವು ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ಸಿಎಂ ಘೊಷಿಸಿದರು.
ದೇವ, ಧರ್ಮ, ದೇಶ ಈ ಮೂರು ಸೂತ್ರಗಳ ಅಡಿ ಸುಸಂಸ್ಕೃತ ಸಮಾಜಕ್ಕಾಗಿ, ದಾನ, ಧರ್ಮ, ದೇವತ್ವ, ಸಂಸ್ಕಾರ, ಶಿಸ್ತು ಇತ್ಯಾದಿ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಗುರುಕುಲ ನಿರ್ಮಾಣ ಕರ್ಯ ಸಮಾಜಕ್ಕೆ ಅವಶ್ಯಕವಾಗಿದೆ ಶಿವಾಜಿ ಮಹಾರಾಜ ಆದರ್ಶಗಳನ್ನು ಪಾಲಿಸಿಕೊಂಡು ಪ್ರಾಚೀನ ಕಾಲದಲ್ಲಿದ್ದ ಗುರಕುಲದ ಮಾದರಿಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲು ಕರೆ ನೀಡಿದರು.
ಛತ್ರಪತಿ ಶಿವಾಜಿ ಮಹಾರಾಜರ ಆಶಯದಂತೆ ಮಹಾರಾಜರು ಅವರ ಕಾಲದಲ್ಲಿ ೧೮ ಪಂಗಡಗಳ ಜನರನ್ನು ಕೂಡಿಸಿಕೊಂಡು ಸ್ವರಾಜ್ಯ ನಿರ್ಮಿಸಿದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ೧೮ ಪಂಗಡಗಳ ಜನರ ಉದ್ದಾರಕ್ಕಾಗಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಪ್ರತಿಯೊಬ್ಬರು ಈ ಯೋಜನೆಯ ಲಾಭ ಪಡೆಯುವಂತೆ ಸಿಎಂ ಸಾವಂತ ಕರೆ ನೀಡಿದರು.
ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮಿಜಿ ತಮ್ಮ ಆರ್ಶಿವಚನದಲ್ಲಿ ಸರ್ವರ ಸಹಕಾರದೊಂದಿಗೆ ತಾವು ನಿರ್ಮಿಸುತ್ತಿರುವ ಗುರುಕುಲ ಪಾಠಶಾಲೆ ಮರಾಠಾ ಸಮುದಾಯಕ್ಕೆ ಮಾತ್ರ ಸಿಮಿತವಾಗಿರದೇ ಸಮಾಜದ ಎಲ್ಲರಿಗೂ ಮುಕ್ತವಾಗಿದೆ. ಶಿವಾಜಿ ಮಹಾರಾಜರು ೧೮ ಜಾತಿಯ ಜನರನ್ನು ಒಂದುಗೂಡಿಸಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸಿದ ರೀತಿಯಲ್ಲಿಯೇ ಅವರ ಹೆಸರಿನ ಈ ಗುರುಕುಲದಲ್ಲಿ ಸಂಸ್ಕಾರಯುತ ಶಿಕ್ಷಣ, ಶಿಸ್ತು, ಆತ್ಮವಿಶ್ವಾಸ, ನೈತಿಕತೆ, ವ್ಯಕ್ತಿತ್ವ ವಿಕಸನದಂತಹ ಶಿಕ್ಷಣ ನೀಡಲಿದ್ದೇವೆ. ಯುವ ಪಿಳಿಗೆಯನ್ನು ದುಷ್ಟ ವ್ಯಸನದಿಂದ ಮುಕ್ತವಾಗಿಸುವ ಕರ್ಯ ಮಾಡಲಿದ್ದೇವೆಂದ ಸ್ವಾಮಿಜಿ ಪ್ರತಿಯೊಬ್ಬರು ಮಾಡಿದ ಪುಣ್ಯ ಕರ್ಯಗಳು ಮಾತ್ರ ಶಾಶ್ವತವಾಗಿ ಇರಲಿದ್ದು ಆ ನಿಟ್ಟಿನಲ್ಲಿ ಜೀವನ ನಡೆಸುವಂತೆ ಕರೆ ನೀಡಿದರು.
ಚಿಕ್ಕಮಗಳೂರು ಗೌರಿಗದ್ದೆಯ ಅವಧೂತ ವಿನಯ್ ಗುರುಜಿ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜ ಅಭಿಬಿ ಜಿಂದಾ ಹೈ ಮೋದಿಜಿಕೆ ರೂಪ ಮೇ( ಶಿವಾಜಿ ಮಹಾರಾಜರು ಮೋದಿಜಿಯವರ ರೂಪದಲ್ಲಿ ಇನ್ನೂ ಜೀವಂತ ಇದ್ದಾರೆ) ಎಂದು ಭಾಷಣ ಆರಂಭಿಸಿದ ಅವರು ಪ್ರಸ್ತುತ ಮೆಕಾಲೆ ಶಿಕ್ಷಣ ಪದ್ದತಿಯಿಂದ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಆದರೇ ಗುರುಕುಲ ಶಿಕ್ಷಣ ಪದ್ದತಿಯಿಂದ ವೃದ್ದಾಶ್ರಮಗಳು ಕಡಿಮೆ ಆಗಲಿವೆ ಎಂದರು. ಮೆಕಾಲೆ ಶಿಕ್ಷಣ ಪದ್ದತಿ ತೊಲಗಿ ಊರುರಲ್ಲಿ ಗುರುಕುಲಗಳು ಆರಂಭವಾಗಲಿ ಎಂದು ಆಶೀಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯಾವ ರೀತಿಯ ಶಿಕ್ಷಣ ದೊರೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಹಾಗೂ ಮುಂದಿನ ಪಿಳಿಗೆಯ ಉತ್ತಮ ಭವಿಷ್ಯಕ್ಕಾಗಿ ಗುರುಕುಲ ನಿರ್ಮಾಣ ಅತ್ಯಂತ ಅವಶ್ಯಕವಾಗಿದ್ದು ತಾವು ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೊಷಿಸಿದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ ಹರಿದು ಹಂಚಿ ಹೊಗಿರುವ ಮರಾಠಾ ಸಮಾಜವನ್ನು ಒಂದೂಗಿಡಿಸುತ್ತಿರುವ ಸ್ವಾಮೀಜಿಯವರ ಕರ್ಯವನ್ನು ಶ್ಲಾಘಿಸಿದ ಅವರು ಶಿವಾಜಿ ಮಹಾರಾಜರ ಆದರ್ಶಗಳು ಎಲ್ಲ ವರ್ಗದವರನ್ನು ಒಂದು ಗೂಡಿಸುವುದಾಗಿದ್ದು ಇವೆಲ್ಲವೂ ಗುರುಕುಲ ಶಿಕ್ಷಣದಿಂದ ಮಾತ್ರ ಸಾಧ್ಯವೆಂದರು.
ಮಾಜಿ ಶಾಸಕರಾದ ಸುನೀಲ್ ಹೆಗಡೆ, ರೂಪಾಲಿ ನಾಯ್ಕ, ಮರಾಠಾ ಅಭಿವೃದ್ದಿ ನಿಗಮದ ಅಧ್ಯಕ್ಷ ಎಮ್.ಜಿ.ಮುಳೆ, ಶ್ರೀ ಶಿವಲಿಂಗ ಸ್ವಾಮೀಜಿ, ಶ್ರೀ ಸುಬ್ರಮಣ್ಯ ಸ್ವಾಮಿಜಿ, ಮರಾಠಾ ಪ್ರಾಧಿಕಾರದ ಎಂಡಿ ಪ್ರಕಾಶ ಪಾಗೋಜಿ, ಪ್ರಮುಖರಾದ ನಾರಾಯಣ ಟೊಸುರ, ಸುಭಾಷ ಕೊರ್ವೆಕರ, ಪ್ರಕಾಶ ಫಾಕ್ರಿ, ಶಂಕರ ಬೆಳಗಾಂವಕರ, ನಂದಕುಮಾರ ಸಾಳುಂಕೆ, ರಮಾಕಾಂತ ಕೆ, ಇತರರು ಇದ್ದರು.
