जगलबेट क्रॉसवर चार वाहनांचा भीषण अपघात; टिप्पर चालक ठार, सात जण गंभीर जखमी.
खानापूर : प्रतिनिधी
खानापूर–रामनगर–जोयडा मार्गावरील जगलबेट गावाजवळील वळणावर बुधवारी (दि. 10) दुपारी चार वाहनांचा भीषण अपघात घडला. या अपघातात डस्ट भरलेल्या टिप्परचा चालक जागीच ठार झाला असून सात जण गंभीर जखमी झाल्याची प्राथमिक माहिती मिळाली आहे.
मिळालेल्या माहितीनुसार, डस्ट भरून कारवारच्या दिशेने जाणारा टिप्पर जगलबेट येथील वळणावर नियंत्रण सुटल्याने प्रथम एका कारला धडकला. त्यानंतर दुचाकी आणि केशव सिमेंट कंपनीच्या बलेरो प्रवासी वाहनाला जोरदार धडक दिली. या साखळी अपघातात कारमधील तिघेजण गंभीर जखमी झाले.
दरम्यान, दुचाकीस्वार कृष्णा (रा. पारिषवाड, ता. खानापूर) हा कदरा येथे कामावर जाण्यासाठी निघाला असताना अपघातात गंभीर जखमी झाला. तसेच केशव सिमेंट कंपनीच्या बलेरो वाहनातील तीन प्रवासी गंभीर जखमी झाल्याचे समजते.
अपघातानंतर सर्व जखमींना तातडीने रुग्णवाहिकेद्वारे रामनगर येथील प्राथमिक आरोग्य केंद्रात दाखल करण्यात आले. तेथे प्राथमिक उपचार केल्यानंतर त्यांना पुढील उपचारासाठी बेळगाव येथील रुग्णालयात हलविण्यात आले.
अपघातानंतर डस्ट भरलेला टिप्पर रस्त्यावर पलटी झाल्याने मोठ्या प्रमाणात डस्ट रस्त्यावर पसरला. तसेच टिप्परमधील ऑइल रस्त्यावर सांडल्याने वाहतुकीस धोका निर्माण झाला आहे. अपघातात मृत्यू झालेला चालक टिप्परमध्ये अडकून पडला होता. स्थानिक नागरिकांनी आणि मदतकार्य करणाऱ्यांनी क्रेनच्या साहाय्याने टिप्पर रस्त्याच्या बाजूला करून चालकाचा मृतदेह बाहेर काढला.
घटनेची माहिती मिळताच पोलीस घटनास्थळी दाखल झाले असून पंचनामा करून पुढील तपास सुरू केला आहे. या भीषण अपघातामुळे परिसरात काही काळ वाहतूक विस्कळीत झाली होती.
ಜಗಲಬೆಟ್ ಕ್ರಾಸ್ನಲ್ಲಿ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಅಪಘಾತ; ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು, ಏಳು ಮಂದಿಗೆ ಗಂಭೀರ ಗಾಯ.
ಖಾನಾಪುರ : ಪ್ರತಿನಿಧಿಖಾನಾಪುರ–ರಾಮನಗರ– ಜೋಯಿಡಾ ಮಾರ್ಗದ ಜಗಲಬೆಟ್ ಗ್ರಾಮದ ಸಮೀಪದ ತಿರುವಿನಲ್ಲಿ ಇಂದು ಬುಧವಾರ ಜೂನ್ 10 ರಂದು ಮಧ್ಯಾಹ್ನದ ವೇಳೆ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಡಸ್ಟ್ ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಖಾನಾಪುರ–ರಾಮನಗರ– ಜೋಯಿಡಾ ಮಾರ್ಗದ ಜಗಲಬೆಟ್ ಗ್ರಾಮದ ಸಮೀಪದ ತಿರುವಿನಲ್ಲಿ ಇಂದು ಬುಧವಾರ ಜೂನ್ 10 ರಂದು ಮಧ್ಯಾಹ್ನದ ವೇಳೆ ನಾಲ್ಕು ವಾಹನಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಡಸ್ಟ್ ತುಂಬಿಕೊಂಡು ಸಾಗುತ್ತಿದ್ದ ಟಿಪ್ಪರ್ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಡಸ್ಟ್ ತುಂಬಿಕೊಂಡು ಕಾರವಾರದ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಜಗಲಬೆಟ್ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮೊದಲು ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ದ್ವಿಚಕ್ರ ವಾಹನ ಹಾಗೂ ಕೇಶವ ಸಿಮೆಂಟ್ ಕಂಪನಿಯ ಬೊಲೆರೋ ಪ್ರಯಾಣಿಕ ವಾಹನಕ್ಕೆ ರಭಸದಿಂದ ಭಾರೀ ಢಿಕ್ಕಿ ನೀಡಿದೆ. ಈ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ, ದ್ವಿಚಕ್ರ ವಾಹನ ಸವಾರನಾದ ಕೃಷ್ಣ (ಸಾ: ಪಾರಿಷವಾಡ, ತಾ. ಖಾನಾಪುರ) ಅವರು ಕದ್ರಾದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೆಯೇ ಕೇಶವ ಸಿಮೆಂಟ್ ಕಂಪನಿಯ ಬೊಲೆರೋ ವಾಹನದಲ್ಲಿದ್ದ ಮೂವರು ಪ್ರಯಾಣಿಕರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಗಾಯಗೊಂಡ ಎಲ್ಲರನ್ನು ತಕ್ಷಣ ಆಂಬುಲೆನ್ಸ್ ಮೂಲಕ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ರವಾನಿಸಲಾಯಿತು.
ಅಪಘಾತದ ನಂತರ ಡಸ್ಟ್ ತುಂಬಿದ್ದ ಟಿಪ್ಪರ್ ರಸ್ತೆ ಮೇಲೆ ಪಲ್ಟಿಯಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಡಸ್ಟ್ ರಸ್ತೆ ಮೇಲೆ ಹರಡಿಕೊಂಡಿತು. ಅಲ್ಲದೆ, ಟಿಪ್ಪರ್ನಲ್ಲಿದ್ದ ಎಣ್ಣೆ (ಆಯಿಲ್) ರಸ್ತೆ ಮೇಲೆ ಸೋರಿಕೆಯಾಗಿದ್ದರಿಂದ ವಾಹನ ಸಂಚಾರಕ್ಕೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪಘಾತದಲ್ಲಿ ಮೃತಪಟ್ಟ ಚಾಲಕ ಟಿಪ್ಪರ್ ವಾಹನದೊಳಗೆ ಸಿಲುಕಿಕೊಂಡಿದ್ದನು. ಸ್ಥಳೀಯ ನಾಗರಿಕರು ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ಕ್ರೇನ್ ಸಹಾಯದಿಂದ ಟಿಪ್ಪರ್ ಅನ್ನು ರಸ್ತೆಯ ಬದಿಗೆ ಸರಿಸಿ ಚಾಲಕನ ಮೃತದೇಹವನ್ನು ಹೊರತೆಗೆದರು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಈ ಭೀಕರ ಅಪಘಾತದಿಂದಾಗಿ ಕೆಲಕಾಲ ಪ್ರದೇಶದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.


