भिमगड जंगल परिसरातील 8 दुर्गम शाळांतील 114 विद्यार्थ्यांना शैक्षणिक साहित्य वाटप-फेसबुक फ्रेंड्स सर्कल टीमचा स्तुत्य उपक्रम; शिक्षणासाठी मदतीचा हात.
बेळगाव : प्रतिनिधी
खानापूर तालुक्यातील भिमगड जंगल परिसरातील दुर्गम गावांमध्ये शिक्षण घेणाऱ्या विद्यार्थ्यांना शैक्षणिक साहित्य उपलब्ध करून देण्याच्या उद्देशाने फेसबुक फ्रेंड्स सर्कल टीमतर्फे एक कौतुकास्पद उपक्रम राबविण्यात आला. टीमचे प्रमुख संतोष आर. दरेकर आणि विनायक लोकूर यांच्या नेतृत्वाखाली 8 दुर्गम शाळांमधील एकूण 114 विद्यार्थ्यांना शैक्षणिक साहित्याचे वाटप करण्यात आले.
जंगल भागातील अनेक विद्यार्थ्यांना मूलभूत शैक्षणिक साहित्याची कमतरता भासत असल्याचे लक्षात घेऊन फेसबुक फ्रेंड्स सर्कल टीमने पुढाकार घेत विद्यार्थ्यांच्या शिक्षणाला बळ देण्याचा प्रयत्न केला. या उपक्रमामुळे विद्यार्थ्यांना आत्मविश्वासाने शिक्षण सुरू ठेवण्यासाठी आवश्यक साहित्य उपलब्ध झाले असून त्यांच्या पालकांवरील आर्थिक भारही काही प्रमाणात कमी झाला आहे.
या उपक्रमांतर्गत मेंडील येथील एम.एल.पी.एस. शाळेतील 9, पास्तोली येथील 5, सायाचीमाळ येथील 10, कोंगळा येथील 15, गावळी येथील 10, पाली येथील 19, जटगे येथील 18 आणि डोंगरगाव येथील 28 अशा एकूण 114 विद्यार्थ्यांना शैक्षणिक साहित्याचे वाटप करण्यात आले.
विद्यार्थ्यांना प्रत्येकी एक कंपास बॉक्स याप्रमाणे 114 कंपास बॉक्स तसेच प्रत्येकी सहा वह्या याप्रमाणे एकूण 684 दीर्घ आकाराच्या (200 पानांच्या) वह्यांचे वितरण करण्यात आले.
उद्यमबाग, बेळगाव येथील एक्स्पर्ट व्हॉल्व्हज अँड इक्विपमेंट प्रा. लि. येथे हा वितरण कार्यक्रम पार पडला. या उपक्रमासाठी कंपनीचे व्यवस्थापकीय संचालक विनायक लोकूर यांच्यासह स्वप्नील देसाई, प्रशांत बिरजे, हर्षदा पाटील-निलजकर, अमोद नाडगौडा, अजित केशवराव कुलकर्णी, इंदुमती एम. अंगडी, माधव कुंटे, सुनील धोंगडी, स्वाती पोते आणि संजय अणवेकर यांनी सहकार्य केले.
कार्यक्रमावेळी एन. डी. अंगलकर, विठोबा एस. एस., सदानंद बी. सावंत, एस. आर. जाधव, दामोदर जे. पाटील, एस. बी. पाटील आणि सुनील आर. मदार हे शिक्षक उपस्थित होते.
यावेळी विनायक लोकूर म्हणाले, “देशाची खरी ताकद ही मुलांच्या शिक्षणात आहे. विद्यार्थ्यांना दिलेली प्रत्येक वही आणि शैक्षणिक साहित्य हे केवळ वस्तू नसून त्यांच्या उज्ज्वल भविष्यासाठीची संधी आहे. दुर्गम भागातील विद्यार्थ्यांच्या चेहऱ्यावरचे समाधान आणि आनंद पाहून या उपक्रमाचे सार्थक झाल्याची भावना निर्माण होते.”
फेसबुक फ्रेंड्स सर्कल टीमने भविष्यातही अशाच प्रकारे दुर्गम आणि वंचित भागातील विद्यार्थ्यांपर्यंत शैक्षणिक मदत पोहोचविण्याचा निर्धार व्यक्त केला असून या उपक्रमाच्या यशस्वीतेसाठी योगदान देणाऱ्या सर्व देणगीदार, शिक्षक, स्वयंसेवक आणि हितचिंतकांचे आभार मानले आहेत.
“एका मुलाला शिक्षण दिले म्हणजे एका कुटुंबाला सक्षम केले जाते, समाज बळकट होतो आणि राष्ट्राची उभारणी होते,” असा संदेश यावेळी देण्यात आला.
ಭೀಮಗಡ ಅರಣ್ಯ ಪ್ರದೇಶದ 8 ದುರ್ಗಮ ಶಾಲೆಗಳ 114 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ
ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಶ್ಲಾಘನೀಯ ಉಪಕ್ರಮ; ಶಿಕ್ಷಣಕ್ಕಾಗಿ ನೆರವಿನ ಹಸ್ತ. ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
ಬೆಳಗಾವಿ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಭೀಮಗಡ ಅರಣ್ಯ ಪ್ರದೇಶದ ದುರ್ಗಮ ಗ್ರಾಮಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡವು ಶ್ಲಾಘನೀಯ ಸಾಮಾಜಿಕ ಉಪಕ್ರಮವನ್ನು ಕೈಗೊಂಡಿದೆ. ತಂಡದ ಪ್ರಮುಖರಾದ ಸಂತೋಷ್ ಆರ್. ದರೆಕರ್ ಹಾಗೂ ವಿನಾಯಕ ಲೋಕೂರ್ ಅವರ ನೇತೃತ್ವದಲ್ಲಿ 8 ದುರ್ಗಮ ಶಾಲೆಗಳ ಒಟ್ಟು 114 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಅರಣ್ಯ ಪ್ರದೇಶದಲ್ಲಿರುವ ಅನೇಕ ವಿದ್ಯಾರ್ಥಿಗಳಿಗೆ ಮೂಲಭೂತ ಶೈಕ್ಷಣಿಕ ಸಾಮಗ್ರಿಗಳ ಕೊರತೆ ಎದುರಾಗುತ್ತಿರುವುದನ್ನು ಗಮನಿಸಿದ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡವು ಮುಂದಾಳತ್ವ ವಹಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಲ ತುಂಬುವ ಪ್ರಯತ್ನ ಮಾಡಿದೆ. ಈ ಉಪಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದಿಂದ ಶಿಕ್ಷಣ ಮುಂದುವರಿಸಲು ಅಗತ್ಯವಾದ ಸಾಮಗ್ರಿಗಳು ಲಭ್ಯವಾಗಿದ್ದು, ಅವರ ಪೋಷಕರ ಮೇಲಿನ ಆರ್ಥಿಕ ಭಾರವೂ ಕೆಲವು ಮಟ್ಟಿಗೆ ಕಡಿಮೆಯಾಗಿದೆ.
ಈ ಉಪಕ್ರಮದ ಅಡಿಯಲ್ಲಿ ಮೆಂಡೀಲ ಗ್ರಾಮದ ಎಂ.ಎಲ್.ಪಿ.ಎಸ್. ಶಾಲೆಯ 9 ವಿದ್ಯಾರ್ಥಿಗಳು, ಪಾಸ್ತೋಲಿ ಗ್ರಾಮದ 5, ಸಾಯಾಚಿಮಾಳ ಗ್ರಾಮದ 10, ಕೊಂಗ್ಳಾ ಗ್ರಾಮದ 15, ಗವಳಿ ಗ್ರಾಮದ 10, ಪಾಲಿ ಗ್ರಾಮದ 19, ಜಟಗೆ ಗ್ರಾಮದ 18 ಹಾಗೂ ಡೋಂಗರಗಾವ್ ಗ್ರಾಮದ 28 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 114 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ತಲಾ ಒಂದು ಕಂಪಾಸ್ ಬಾಕ್ಸ್ನಂತೆ ಒಟ್ಟು 114 ಕಂಪಾಸ್ ಬಾಕ್ಸ್ ಹಾಗೂ ತಲಾ ಆರು ನೋಟ್ಬುಕ್ಗಳಂತೆ ಒಟ್ಟು 684 ಎ ಫೋರ್ ಗಾತ್ರದ (200 ಪುಟಗಳ) ನೋಟ್ಬುಕ್ಗಳನ್ನು ವಿತರಿಸಲಾಯಿತು. ಉದ್ಯಮಬಾಗ್, ಬೆಳಗಾವಿಯ ಎಕ್ಸ್ಪರ್ಟ್ ವಾಲ್ವ್ಸ್ ಅಂಡ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಈ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಉಪಕ್ರಮಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿನಾಯಕ ಲೋಕೂರ ಅವರೊಂದಿಗೆ ಸ್ವಪ್ನಿಲ ದೇಸಾಯಿ, ಪ್ರಶಾಂತ್ ಬಿರಜೆ, ಹರ್ಷದಾ ಪಾಟೀಲ್-ನಿಲಜ್ಕರ್, ಅಮೋದ ನಾಡಗೌಡ, ಅಜಿತ್ ಕೇಶವರಾವ್ ಕುಲಕರ್ಣಿ, ಇಂದುಮತಿ ಎಂ. ಅಂಗಡಿ, ಮಾಧವ ಕುಂಟೆ, ಸುನೀಲ್ ಧೋಂಗಡಿ, ಸ್ವಾತಿ ಪೋತೆ ಹಾಗೂ ಸಂಜಯ ಅಣವೇಕರ್ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಎನ್. ಡಿ. ಅಂಗಲ್ಕರ್, ವಿಠೋಬಾ ಎಸ್. ಎಸ್., ಸದಾನಂದ ಬಿ. ಸಾವಂತ್, ಎಸ್. ಆರ್. ಜಾಧವ್, ದಾಮೋದರ ಜೆ. ಪಾಟೀಲ್, ಎಸ್. ಬಿ. ಪಾಟೀಲ್ ಹಾಗೂ ಸುನೀಲ್ ಆರ್. ಮಾದಾರ್ ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಾಯಕ ಲೋಕೂರ್, “ದೇಶದ ನಿಜವಾದ ಶಕ್ತಿ ಮಕ್ಕಳ ಶಿಕ್ಷಣದಲ್ಲಿದೆ. ವಿದ್ಯಾರ್ಥಿಗಳಿಗೆ ನೀಡುವ ಪ್ರತಿಯೊಂದು ನೋಟ್ಬುಕ್ ಹಾಗೂ ಶೈಕ್ಷಣಿಕ ಸಾಮಗ್ರಿಯು ಕೇವಲ ಒಂದು ವಸ್ತುವಲ್ಲ, ಅವರ ಉಜ್ವಲ ಭವಿಷ್ಯಕ್ಕೆ ದೊರೆಯುವ ಅವಕಾಶವಾಗಿದೆ. ದುರ್ಗಮ ಪ್ರದೇಶದ ವಿದ್ಯಾರ್ಥಿಗಳ ಮುಖದಲ್ಲಿನ ಸಂತೋಷ ಮತ್ತು ತೃಪ್ತಿಯನ್ನು ಕಂಡಾಗ ಈ ಉಪಕ್ರಮದ ಸಾರ್ಥಕತೆ ಅನುಭವವಾಗುತ್ತದೆ,” ಎಂದು ಹೇಳಿದರು.
ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡವು ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ದುರ್ಗಮ ಹಾಗೂ ವಂಚಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ತಲುಪಿಸುವ ಸಂಕಲ್ಪ ವ್ಯಕ್ತಪಡಿಸಿದ್ದು, ಈ ಉಪಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ದಾನಿಗಳು, ಶಿಕ್ಷಕರು, ಸ್ವಯಂಸೇವಕರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದೆ.
“ಒಬ್ಬ ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಒಂದು ಕುಟುಂಬವನ್ನು ಸಬಲಗೊಳಿಸುವುದು; ಸಮಾಜವನ್ನು ಬಲಪಡಿಸುವುದು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ ಹಾಕುವುದು,” ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಲಾಯಿತು.


