खानापूरच्या विकासाला गती; रस्ते, पूल आणि शहर विकासासाठी 131 कोटींपेक्षा अधिक निधी मंजूर, आणखी 400 कोटींच्या निधीसाठी आमदार हलगेकरांचा पाठपुरावा.
खानापूर (प्रतिनिधी) : खानापूर मतदारसंघातील रस्ते, पूल आणि शहर विकासाच्या कामांना मोठी चालना मिळाली असून विविध केंद्र व राज्य शासनाच्या योजनांतून 131 कोटी रुपयांहून अधिक निधी मंजूर झाला आहे. अनेक कामांना प्रत्यक्ष सुरुवात झाली असून काही महत्त्वाच्या प्रकल्पांची निविदा प्रक्रिया अंतिम टप्प्यात आहे. आमदार विठ्ठलराव हलगेकर यांच्या सातत्यपूर्ण पाठपुराव्यामुळे ग्रामीण व शहरी भागातील दळणवळण व्यवस्था अधिक सक्षम करण्यासाठी मोठ्या प्रमाणावर विकासकामे हाती घेण्यात आली आहेत.
केंद्र सरकारच्या सीआरआयएफ (CRIF) योजनेतून एकूण 22 कोटी रुपये मंजूर झाले असून निलावडे–कान्सली क्रॉस, गोल्याळी–बेटगेरी–बाकणूर तसेच खानापूर–नंदगड–बिडी–लिंगणमठ या प्रमुख मार्गांच्या सुधारणेची कामे हाती घेण्यात आली आहेत. राज्य सरकारच्या एसएचडीपी (SHDP) योजनेतून 12 कोटी रुपयांच्या निधीतून लालवाडी–कारलगा–चापगाव–कोडचवाड, कोडचवाड क्रॉस–आवरोळी–बिळकी आणि इटगी–पारिश्वाड या मार्गांवर सिमेंट काँक्रीट व डांबरीकरणाची कामे करण्यात येणार आहेत.
याशिवाय सार्वजनिक बांधकाम विभागाकडून 28 कोटी रुपयांचा निधी मंजूर झाल्याने बेकवाड क्रॉस–कडतन बागेवाडी–तोलगी–इटगी–इटगी क्रॉस या महत्त्वाच्या मार्गाचे रुंदीकरण व मजबुतीकरण होणार आहे. विशेष म्हणजे, तालुक्यातील साडेतीन मीटर रुंदीचे सर्व रस्ते आता पाच मीटर रुंद करण्याचा निर्णय घेण्यात आला असून त्यामुळे वाहतुकीची क्षमता वाढणार आहे.
आशियाई विकास बँकेच्या (ADB) सहकार्याने राबविण्यात येणाऱ्या ‘प्रगतीपथ’ योजनेतून 15 कोटी रुपये मंजूर झाले आहेत. गणेशबैल–काटगाळी, कक्केरी–प्रज्ञाश्रम, गुंड्यामुट्टी–भुरणकी क्रॉस, गस्टोळी–गस्टोळी क्रॉस, कक्केरी–चुंचवाड तसेच मुगवडे–कबनाळी या ग्रामीण रस्त्यांचा या योजनेत समावेश आहे. सध्या निविदा प्रक्रिया सुरू असून पावसाळ्यानंतर प्रत्यक्ष कामांना सुरुवात होणार आहे.
काही तांत्रिक कारणांमुळे रखडलेले मेरडा–हलगा–हलसी रस्त्याचे काम आमदार हलगेकर यांच्या विशेष प्रयत्नांमुळे पूर्ण करण्यात आले असून पुढील टप्प्यातील कामालाही मंजुरी मिळाली आहे. तसेच सीएमआयडीपी (CMIDP) योजनेअंतर्गत येडोगा–चापगाव, गर्लगुंजी–सन्नहोसूर, तोपिनकट्टी–लोकाळी क्रॉस आणि बैलूर–देवाचीहट्टी या रस्त्यांसाठी प्रत्येकी 1 कोटी रुपयांचा निधी मंजूर होऊन कामांना वेग आला आहे.
तालुक्यातील अनेक अंतर्गत रस्त्यांची कामे पूर्ण झाली असून गर्लगुंजी–नंदिहळ्ळी, गर्लगुंजी–तोपिनकट्टी, इदलोड–अंकले, नागुर्डे–काटगाळी, अलगोळी–कानसुली, मळव–निलावडे, नागुर्डे वाडा रोड, जांबोटी वाडा रोड, पूर गाव रस्ता आणि रुमेवाडी रोड यांसह अनेक मार्गांचे काँक्रीटीकरण व डांबरीकरण पूर्ण झाले आहे. गंगवळी रोडचे काम प्रगतीपथावर आहे.
लोकोपयोगी रस्त्यांच्या सुधारणेसाठी पीडब्ल्यूडीकडून आणखी 8 कोटी रुपयांचा निधी मंजूर झाला आहे. यामध्ये बैलूर रोडसाठी 4 कोटी रुपये, तर शिवोली–चापगाव, बोगूर आणि बिदरभावी परिसरातील रस्त्यांसाठी 4 कोटी रुपयांचा निधी उपलब्ध करून देण्यात आला आहे.
मागील वर्षी मुख्यमंत्री पायाभूत सुविधा विकास निधीतून 25 कोटी रुपये मंजूर करण्यात आले होते. या निधीतून मंदिरांचा जीर्णोद्धार, गावांतील सिमेंट काँक्रीट रस्ते, शाळांची दुरुस्ती, क्रीडा मैदानांचा विकास अशा विविध कामांची अंमलबजावणी वेगाने सुरू असून संबंधित कामांची अधिकृत यादी लवकरच प्रसिद्ध होणार आहे.
खानापूर शहराच्या सर्वांगीण विकासासाठी ओटीडीपी (OTDP) योजनेतून 14 कोटी रुपयांच्या सिमेंट काँक्रीट अंतर्गत रस्त्यांची कामे सुरू आहेत. काही तांत्रिक व तक्रारींच्या कारणांमुळे मच्छी मार्केट परिसरातील रस्त्याचे काम तात्पुरते थांबले असले, तरी ते लवकरच मार्गी लागणार असल्याची माहिती देण्यात आली आहे.
दरम्यान, रस्त्यांबरोबरच पुलांच्या उभारणीलाही मोठी गती मिळाली आहे. रस्ते अभिवृद्धी निगम (RDC) 50 व 54 अंतर्गत 23 कोटी रुपयांचा निधी मंजूर झाला असून मणतुर्गीजवळ सिंधनूर–हेम्माडगा राज्य महामार्गावरील हलात्री नाल्यावर 8 कोटी रुपयांचा पूल उभारण्यात येणार आहे. तसेच नागरगाळी–कुटकोल राज्य महामार्गावरील पारिश्वाडजवळ मलप्रभा नदीवर 15 कोटी रुपयांचा नवीन पूल उभारला जाणार आहे. या दोन्ही पुलांमुळे अनेक गावांचा वर्षानुवर्षांचा दळणवळणाचा प्रश्न कायमस्वरूपी निकाली निघणार असल्याचे सांगितले जात आहे.
तसेच खानापूर मच्छी मार्केट जवळील काही तक्रारीमुळे अर्धवट स्थितीत असलेला रस्ता सुद्धा सामोपचाराने मिटविण्यात येऊन लवकरात लवकर मार्गी लावण्यात येणार असल्याचे सांगण्यात आले आहे.
याशिवाय मतदारसंघातील उर्वरित रस्ते आणि पायाभूत सुविधांची कामे पूर्ण करण्यासाठी आमदार विठ्ठलराव हलगेकर यांनी राज्य सरकारकडे 400 कोटी रुपयांच्या अतिरिक्त निधीची मागणी केली आहे. हा निधी मंजूर झाल्यास खानापूर तालुक्यातील उर्वरित ग्रामीण रस्ते, पूल आणि मूलभूत सुविधांच्या विकासाला आणखी मोठी गती मिळणार असून मतदारसंघाचा सर्वांगीण कायापालट होईल, असा विश्वास व्यक्त केला जात आहे.
ಖಾನಾಪುರದ ಅಭಿವೃದ್ಧಿಗೆ ವೇಗ; ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿಗೆ ₹131 ಕೋಟಿಗೂ ಅಧಿಕ ಅನುದಾನ ಮಂಜೂರು, ಇನ್ನೂ ₹400 ಕೋಟಿ ಅನುದಾನಕ್ಕಾಗಿ ಶಾಸಕ ವಿಠಲ ಹಲಗೇಕರ ಅವರ ನಿರಂತರ ಪ್ರಯತ್ನ.
ಖಾನಾಪುರ (ಪ್ರತಿನಿಧಿ): ಖಾನಾಪುರ ವಿಧಾನಸಭಾ ಕ್ಷೇತ್ರದ ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿ ಕಾಮಗಾರಿಗಳಿಗೆ ಮಹತ್ವದ ವೇಗ ದೊರೆತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ₹131 ಕೋಟಿಗೂ ಅಧಿಕ ಅನುದಾನ ಮಂಜೂರಾಗಿದೆ. ಅನೇಕ ಕಾಮಗಾರಿಗಳು ಈಗಾಗಲೇ ಆರಂಭವಾಗಿದ್ದು, ಇನ್ನೂ ಕೆಲವು ಪ್ರಮುಖ ಯೋಜನೆಗಳ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿವೆ. ಶಾಸಕ ವಿಠ್ಠಲರಾವ್ ಹಳಗೇಕರ ಅವರ ನಿರಂತರ ಪ್ರಯತ್ನದ ಫಲವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಸಿಆರ್ಐಎಫ್ (CRIF) ಯೋಜನೆಯಡಿ ಒಟ್ಟು ₹22 ಕೋಟಿ ಮಂಜೂರಾಗಿದ್ದು, ನಿಲಾವಡೆ–ಕಾನ್ಸಲಿ ಕ್ರಾಸ್, ಗೋಳ್ಯಾಳಿ–ಬೆಟಗೇರಿ–ಬಾಕಣೂರು ಹಾಗೂ ಖಾನಾಪುರ–ನಂದಗಡ–ಬಿಡಿ–ಲಿಂಗಣಮಠ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ರಾಜ್ಯ ಸರ್ಕಾರದ ಎಸ್ಎಚ್ಡಿಪಿ (SHDP) ಯೋಜನೆಯಡಿ ₹12 ಕೋಟಿಗಳ ಅನುದಾನದಲ್ಲಿ ಲಾಲವಾಡಿ–ಕಾರಲಗಾ–ಚಾಪಗಾವ್–ಕೋಡಚವಾಡ, ಕೋಡಚವಾಡ ಕ್ರಾಸ್–ಆವರೋಳಿ–ಬಿಳ್ಕಿ ಹಾಗೂ ಇಟಗಿ–ಪಾರಿಶ್ವಾಡ ರಸ್ತೆಗಳಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಇದಲ್ಲದೆ, ಸಾರ್ವಜನಿಕ ಕಾಮಗಾರಿಗಳ ಇಲಾಖೆಯಿಂದ (PWD) ₹28 ಕೋಟಿ ಅನುದಾನ ಮಂಜೂರಾಗಿದ್ದು, ಬೇಕವಾಡ ಕ್ರಾಸ್–ಕಡತನ ಬಾಗೇವಾಡಿ–ತೋಲಗಿ–ಇಟಗಿ–ಇಟಗಿ ಕ್ರಾಸ್ ಪ್ರಮುಖ ರಸ್ತೆಯ ಅಗಲೀಕರಣ ಹಾಗೂ ಬಲವರ್ಧನೆ ನಡೆಯಲಿದೆ. ವಿಶೇಷವಾಗಿ, ತಾಲ್ಲೂಕಿನ 3.5 ಮೀಟರ್ ಅಗಲದ ಎಲ್ಲಾ ರಸ್ತೆಗಳನ್ನು 5 ಮೀಟರ್ ಅಗಲಕ್ಕೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ವಾಹನ ಸಂಚಾರ ಸಾಮರ್ಥ್ಯ ಹೆಚ್ಚಲಿದೆ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಸಹಯೋಗದಲ್ಲಿ ಜಾರಿಯಾಗುತ್ತಿರುವ ‘ಪ್ರಗತಿಪಥ’ ಯೋಜನೆಯಡಿ ₹15 ಕೋಟಿ ಮಂಜೂರಾಗಿದೆ. ಗಣೇಶಬೈಲ್–ಕಾಟಗಾಳಿ, ಕಕ್ಕೇರಿ–ಪ್ರಜ್ಞಾಶ್ರಮ, ಗುಂಡ್ಯಾನಹಟ್ಟಿ–ಭುರಣಕಿ ಕ್ರಾಸ್, ಗಸ್ತೋಳಿ–ಗುಸ್ತೋಳಿ ಕ್ರಾಸ್, ಕಕ್ಕೇರಿ–ಚುಂಚವಾಡ ಹಾಗೂ ಮುಗವಡೆ–ಕಬನಾಳಿ ಗ್ರಾಮೀಣ ರಸ್ತೆಗಳನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮಳೆಗಾಲದ ನಂತರ ಕಾಮಗಾರಿಗಳು ಆರಂಭವಾಗಲಿವೆ.
ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಮೇರಡಾ–ಹಲಗಾ–ಹಲಸಿ ರಸ್ತೆಯ ಕಾಮಗಾರಿಯನ್ನು ಜನ ಪ್ರಿಯ ಶಾಸಕರಾದ ಹಲಗೇಕರರ ವಿಶೇಷ ಪ್ರಯತ್ನದಿಂದ ಪೂರ್ಣಗೊಳಿಸಲಾಗಿದ್ದು, ಮುಂದಿನ ಹಂತದ ಕಾಮಗಾರಿಗೂ ಅನುಮೋದನೆ ದೊರೆತಿದೆ.
ಹಾಗೆಯೇ ಸಿಎಂಐಡಿಪಿ (CMIDP) ಯೋಜನೆಯಡಿ ಯೇಡೋಗಾ–ಚಾಪಗಾವ್, ಗರ್ಲಗುಂಜಿ–ಸನ್ನಹೊಸೂರು, ತೋಪಿನಕಟ್ಟಿ–ಲೋಕೂಳಿ ಕ್ರಾಸ್ ಹಾಗೂ ಬೈಲೂರು–ದೇವಾಚಿಹಟ್ಟಿ ರಸ್ತೆಗಳಿಗೆ ತಲಾ ₹1 ಕೋಟಿ ಅನುದಾನ ಮಂಜೂರಾಗಿ ಕಾಮಗಾರಿಗಳಿಗೆ ವೇಗ ಬಂದಿದೆ.
ತಾಲ್ಲೂಕಿನ ಅನೇಕ ಒಳರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ಗರ್ಲಗುಂಜಿ–ನಂದಿಹಳ್ಳಿ, ಗರ್ಲಗುಂಜಿ–ತೋಪಿನಕಟ್ಟಿ, ಇದಲೋಡ್–ಅಂಕಲೆ, ನಾಗುರ್ಡಾ–ಕಾಟಗಾಳಿ, ಅಲಗೋಳಿ–ಕಾನ್ಸುಲಿ, ಮಳವ–ನಿಲಾವಡೆ, ನಾಗುರ್ಡಾ ವಾಡಾ ರಸ್ತೆ, ಜಾಂಬೋಟಿ ವಾಡಾ ರಸ್ತೆ, ಪೂರ ಗ್ರಾಮ ರಸ್ತೆ ಹಾಗೂ ರುಮೇವಾಡಿ ರಸ್ತೆ ಸೇರಿದಂತೆ ಹಲವು ರಸ್ತೆಗಳ ಸಿಮೆಂಟ್ ಕಾಂಕ್ರೀಟ್ ಹಾಗೂ ಡಾಂಬರೀಕರಣ ಪೂರ್ಣಗೊಂಡಿದೆ. ಗಂಗವಳಿ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.
ಸಾರ್ವಜನಿಕ ಉಪಯೋಗದ ರಸ್ತೆಗಳ ಸುಧಾರಣೆಗೆ PWD ವತಿಯಿಂದ ಇನ್ನೂ ₹8 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ ಬೈಲೂರು ರಸ್ತೆಗೆ ₹4 ಕೋಟಿ, ಹಾಗೂ ಶಿವೋಲಿ–ಚಾಪಗಾವ್, ಬೋಗೂರು ಮತ್ತು ಬಿದರಭಾವಿ ಭಾಗದ ರಸ್ತೆಗಳಿಗೆ ₹4 ಕೋಟಿ ಅನುದಾನ ಒದಗಿಸಲಾಗಿದೆ.
ಕಳೆದ ವರ್ಷ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ₹25 ಕೋಟಿ ಮಂಜೂರಾಗಿತ್ತು. ಈ ಅನುದಾನದಿಂದ ದೇವಾಲಯಗಳ ಜೀರ್ಣೋದ್ಧಾರ, ಗ್ರಾಮಗಳ ಸಿಮೆಂಟ್ ಕಾಂಕ್ರೀಟ್ ರಸ್ತೆಗಳು, ಶಾಲೆಗಳ ದುರಸ್ತಿ, ಕ್ರೀಡಾಂಗಣಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಕಾಮಗಾರಿಗಳ ಅಧಿಕೃತ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ.
ಖಾನಾಪುರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಒಟಿಡಿಪಿ (OTDP) ಯೋಜನೆಯಡಿ ₹14 ಕೋಟಿಗಳ ಸಿಮೆಂಟ್ ಕಾಂಕ್ರೀಟ್ ಒಳರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲವು ತಾಂತ್ರಿಕ ಅಡಚಣೆಗಳು ಹಾಗೂ ದೂರುಗಳ ಕಾರಣದಿಂದ ಮೀನು ಮಾರುಕಟ್ಟೆ ಪ್ರದೇಶದ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಶೀಘ್ರದಲ್ಲೇ ಪುನರಾರಂಭವಾಗಲಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ರಸ್ತೆ ಅಭಿವೃದ್ಧಿಯ ಜೊತೆಗೆ ಸೇತುವೆಗಳ ನಿರ್ಮಾಣಕ್ಕೂ ಹೆಚ್ಚಿನ ವೇಗ ಸಿಕ್ಕಿದೆ. ರಸ್ತೆ ಅಭಿವೃದ್ಧಿ ನಿಗಮ (RDC) 50 ಮತ್ತು 54 ಯೋಜನೆಯಡಿ ₹23 ಕೋಟಿ ಅನುದಾನ ಮಂಜೂರಾಗಿದ್ದು, ಮಣತುರ್ಗಾ ಸಮೀಪದ ಸಿಂಧನೂರು–ಹೆಮ್ಮಾಡಗ ರಾಜ್ಯ ಹೆದ್ದಾರಿಯ ಹಲಾತ್ರಿ ಹಳ್ಳದ ಮೇಲೆ ₹8 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಜೊತೆಗೆ ನಾಗರಗಾಳಿ– ಕುಟಕೋಳ ರಾಜ್ಯ ಹೆದ್ದಾರಿಯ ಪಾರಿಶ್ವಾಡ ಸಮೀಪದ ಮಲಪ್ರಭಾ ನದಿಯ ಮೇಲೆ ₹15 ಕೋಟಿಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ. ಈ ಎರಡೂ ಸೇತುವೆಗಳು ನಿರ್ಮಾಣವಾದ ಬಳಿಕ ಹಲವು ಗ್ರಾಮಗಳ ವರ್ಷಗಳ ದೀರ್ಘಕಾಲದ ಸಂಪರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಇದೇ ರೀತಿ, ಖಾನಾಪುರ ಮೀನು ಮಾರುಕಟ್ಟೆ ಸಮೀಪ ಕೆಲವು ದೂರುಗಳ ಕಾರಣದಿಂದ ಅರ್ಧದಲ್ಲೇ ನಿಂತಿರುವ ರಸ್ತೆ ಕಾಮಗಾರಿಯನ್ನು ಪರಸ್ಪರ ಸಮನ್ವಯದ ಮೂಲಕ ಬಗೆಹರಿಸಿ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಇದಲ್ಲದೆ, ಕ್ಷೇತ್ರದ ಉಳಿದ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕ ವಿಠ್ಠಲರಾವ್ ಹಲಗೇಕರ ಅವರು ರಾಜ್ಯ ಸರ್ಕಾರದ ಬಳಿ ಹೆಚ್ಚುವರಿ ₹400 ಕೋಟಿಗಳ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಈ ಅನುದಾನ ಮಂಜೂರಾದಲ್ಲಿ ಖಾನಾಪುರ ತಾಲ್ಲೂಕಿನ ಉಳಿದ ಗ್ರಾಮೀಣ ರಸ್ತೆಗಳು, ಸೇತುವೆಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದ್ದು, ಸಂಪೂರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.


