खानापुरात शेतकऱ्यांना कृषी अवजारे व यंत्रसामग्रीचे वितरण.
खानापूर : खानापूर कृषी कार्यालयाच्या वतीने शेतकऱ्यांना विविध कृषी अवजारे व यंत्रसामग्रीचे वितरण करण्यात आले. लोकप्रिय आमदार विठ्ठलराव हलगेकर यांच्या हस्ते ट्रॅक्टर, पॉवर टिलर, स्प्रिंकलर संच, भात कापणी यंत्र, रोटाव्हेटर आदी कृषी उपकरणांचे वितरण करण्यात आले.
यावेळी कृषी खात्याचे अधिकारी ए.डी. चव्हाण, भाजप रयत मोर्चाचे जिल्हा उपाध्यक्ष व लैला शुगर एम.डी. सदानंद पाटील, विजय कामत, राहुल आळवनी, आत्मानंद पाटील यांच्यासह विविध भागातील शेतकरी उपस्थित होते.
चापगाव येथील शेतकरी गोदी यांच्यासह तालुक्यातील विविध गावांतील लाभार्थी शेतकऱ्यांना कृषी उपकरणे वितरित करण्यात आली. आधुनिक कृषी यंत्रसामग्रीमुळे शेतीतील मेहनत व वेळ कमी होऊन उत्पादनक्षमता वाढण्यास मदत होणार असल्याचे यावेळी सांगण्यात आले.
शासनाच्या कृषी योजनांचा लाभ अधिकाधिक शेतकऱ्यांनी घेऊन आधुनिक तंत्रज्ञानाचा वापर करावा, असे आवाहनही यावेळी करण्यात आले.
ಖಾನಾಪುರದಲ್ಲಿ ರೈತರಿಗೆ ಕೃಷಿ ಉಪಕರಣಗಳು ಹಾಗೂ ಯಂತ್ರೋಪಕರಣಗಳ ವಿತರಣೆ.
ಖಾನಾಪುರ : ಖಾನಾಪುರ ಕೃಷಿ ಕಚೇರಿಯ ವತಿಯಿಂದ ರೈತರಿಗೆ ವಿವಿಧ ಕೃಷಿ ಉಪಕರಣಗಳು ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ಜನಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ ಅವರ ಹಸ್ತದಿಂದ ಟ್ರ್ಯಾಕ್ಟರ್, ಪವರ್ ಟೆಲ್ಲರ್, ಸ್ಪ್ರಿಂಕ್ಲರ್ ಸೆಟ್, ಭತ್ತ ಕಟಾವು ಯಂತ್ರ, ರೋಟಾವೇಟರ್ ಸೇರಿದಂತೆ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಎ.ಡಿ. ಚವ್ಹಾಣ್, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಹಾಗೂ ಲೈಲಾ ಸಕ್ಕರೆ ಕಾರ್ಖಾನೆಯ ಎಂ.ಡಿ. ಸದಾನಂದ ಪಾಟೀಲ್, ವಿಜಯ ಕಾಮತ್, ರಾಹುಲ್ ಆಳವಣಿ, ಆತ್ಮಾನಂದ ಪಾಟೀಲ್ ಸೇರಿದಂತೆ ವಿವಿಧ ಭಾಗಗಳ ರೈತರು ಉಪಸ್ಥಿತರಿದ್ದರು.
ಚಾಪಗಾವ್ ಗ್ರಾಮದ ರೈತ ಗೋದಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಫಲಾನುಭವಿ ರೈತರಿಗೆ ಕೃಷಿ ಉಪಕರಣಗಳನ್ನು ವಿತರಿಸಲಾಯಿತು. ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಕೆಲಸದಲ್ಲಿನ ಶ್ರಮ ಹಾಗೂ ಸಮಯ ಕಡಿಮೆಯಾಗುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಲು ಸಹಾಯವಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಸರ್ಕಾರದ ಕೃಷಿ ಯೋಜನೆಗಳ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯ ರೈತರು ಪಡೆದುಕೊಂಡು, ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.

