मोहन केसरेकर दांपत्य हत्या प्रकरणी खानापुरात हिंदू संघटनांची उद्या बैठक. फरीद अब्दुल शेखला कठोरात कठोर शिक्षा देण्याची मागणी; आंदोलनाची दिशा ठरविण्यासाठी विचारविनिमय.
खानापूर : मूळचे बेळगाव जिल्ह्यातील खानापूर तालुक्यातील हेब्बाळ गावचे रहिवासी असलेले मोहन केसरेकर व त्यांच्या पत्नी मनीषा केसरेकर हे उदरनिर्वाहासाठी सांगली येथे स्थायिक झाले होते. 15 ऑगस्ट रोजी कचरा टाकण्याच्या किरकोळ कारणावरून कुपवाड येथील एमआयडीसी पोलिस ठाण्याच्या हद्दीत झालेल्या हल्ल्यात मोहन केसरेकर यांची निर्घृण हत्या झाल्याने या घटनेचा सर्वत्र तीव्र निषेध व्यक्त होत आहे.
या घटनेच्या निषेधार्थ विविध ठिकाणी मोर्चे काढून प्रशासनाला निवेदने देण्यात आली आहेत. त्याच पार्श्वभूमीवर खानापूर तालुक्यातही मोर्चा काढून आरोपीविरुद्ध कठोर कारवाई करण्याची मागणी करण्याबाबत चर्चा सुरू झाली आहे.
यासंदर्भात सर्वानुमते निर्णय घेण्यासाठी बुधवार, 26 ऑगस्ट रोजी सकाळी १० वाजता खानापूर शहरातील बांधकाम विभागाच्या विश्रामधामात हिंदू संघटनांच्या प्रमुख पदाधिकाऱ्यांची बैठक आयोजित करण्यात आली आहे. या बैठकीत मोर्चाचे आयोजन, आंदोलनाची दिशा तसेच आरोपी फरीद अब्दुल शेख याच्यावर कठोरात कठोर कारवाई करण्याची मागणी याबाबत विचारविनिमय करण्यात येणार आहे.
आरोपीला कायद्यानुसार कठोरात कठोर शिक्षा देण्यात यावी, अशी मागणी करण्यासाठी आंदोलन उभारण्याचा निर्धार व्यक्त करण्यात येत आहे. तसेच काही संघटनांकडून आरोपीला फाशीची शिक्षा देण्याची किंवा एन्काऊंटर करण्याची मागणी केली जात आहे. मात्र, आरोपीविरुद्धची कारवाई ही कायदेशीर प्रक्रियेनुसारच व्हावी, अशी भूमिका मांडण्यात येणार आहे.
या बैठकीस बजरंग दल, शिवप्रतिष्ठान संघटना, सनातन संस्था, ब्रह्मानंद संप्रदाय, वारकरी संप्रदाय, स्वामी समर्थ केंद्र, माजी सैनिक संघटना, राष्ट्रीय स्वयंसेवक संघ (आरएसएस), भारतीय जनता पक्ष, विश्व हिंदू परिषद, गणेशोत्सव महामंडळ, कन्नड रक्षण वेदिका, दलित संघटना, महिला संघटना तसेच पत्रकार मंडळींनी उपस्थित राहावे, असे आवाहन आयोजकांनी केले आहे.
सर्व संबंधित पदाधिकाऱ्यांनी उद्या बुधवारी सकाळी 10 वाजता वेळेवर उपस्थित राहून मोर्चाबाबत सर्वानुमते निर्णय घ्यावा, असे आवाहन आयोजकांनी केले आहे.
ಮಾಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೊಹನ್ ಕೇಸರೆಕರ್ ದಂಪತಿ ಹತ್ಯೆ ಪ್ರಕರಣ; ಖಾನಾಪುರದಲ್ಲಿ ನಾಳೆ ಹಿಂದೂ ಸಂಘಟನೆಗಳ ಸಭೆ.. ಫರೀದ್ ಅಬ್ದುಲ್ ಶೇಖ್ಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹ; ಪ್ರತಿಭಟನೆಯ ರೂಪುರೇಷೆ ನಿರ್ಧರಿಸಲು ಚರ್ಚೆ.
ಖಾನಾಪುರ : ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಗಳಾದ ಮೋಹನ್ ಕೇಸರೆಕರ್ ಹಾಗೂ ಅವರ ಪತ್ನಿ ಮನಿಷಾ ಕೇಸರೆಕರ್ ಅವರು ಜೀವನೋಪಾಯಕ್ಕಾಗಿ ಸಾಂಗ್ಲಿಯಲ್ಲಿ ನೆಲೆಸಿದ್ದರು. ಆಗಸ್ಟ್ 15ರಂದು ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದ ಸಣ್ಣ ಕಾರಣಕ್ಕಾಗಿ ಕುವಾಡ್ನ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಮೋಹನ್ ಕೇಸರೆಕೇರ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ಹಾಗೂ ಖಂಡನೆ ವ್ಯಕ್ತವಾಗುತ್ತಿದೆ.
ಈ ಘಟನೆಯ ಖಂಡನೆಯಾಗಿ ವಿವಿಧೆಡೆ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿ ಆಡಳಿತಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನಲ್ಲಿಯೂ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ಸಲ್ಲಿಸುವ ಕುರಿತು ಒತ್ತಾಯ ಹೆಚ್ಚಾಗುತ್ತಿದೆ.
ಈ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಲು ಬುಧವಾರ, ಆಗಸ್ಟ್ 26ರಂದು ಬೆಳಿಗ್ಗೆ 10 ಗಂಟೆಗೆ ಖಾನಾಪುರ ನಗರದ ಲೋಕೋಪಯೋಗಿ ಇಲಾಖೆಯ ವಿಶ್ರಾಂತಿ ಗ್ರಹದಲ್ಲಿ ಹಿಂದೂ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸುವುದು, ಮುಂದಿನ ಹೋರಾಟದ ರೂಪುರೇಷೆ, ಹಾಗೂ ಆರೋಪಿ ಫರೀದ್ ಅಬ್ದುಲ್ ಶೇಖ್ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸುವ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಗುವುದು.
ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವ ನಿರ್ಧಾರ ವ್ಯಕ್ತವಾಗುತ್ತಿದೆ. ಕೆಲವು ಸಂಘಟನೆಗಳು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಎನ್ಕೌಂಟರ್ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಡುತ್ತಿವೆ. ಆದರೆ ಆರೋಪಿಯ ವಿರುದ್ಧದ ಕ್ರಮವು ಕಾನೂನು ಪ್ರಕ್ರಿಯೆಯಂತೆ ನಡೆಯಬೇಕು ಎಂಬ ನಿಲುವನ್ನೂ ಸಭೆಯಲ್ಲಿ ಮಂಡಿಸಲಾಗುವುದು.
ಈ ಸಭೆಗೆ ಖಾನಾಪುರ ತಾಲೂಕಿನ ಬಜರಂಗ ದಳ, ಶಿವಪ್ರತಿಷ್ಠಾನ ಸಂಘಟನೆ, ಸನಾತನ ಸಂಸ್ಥೆ, ಬ್ರಹ್ಮಾನಂದ ಸಂಪ್ರದಾಯ, ವಾರಕರಿ ಸಂಪ್ರದಾಯ, ಸ್ವಾಮಿ ಸಮರ್ಥ ಕೇಂದ್ರ, ಮಾಜಿ ಸೈನಿಕರ ಸಂಘಟನೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಭಾರತೀಯ ಜನತಾ ಪಕ್ಷ (ಬಿಜೆಪಿ), ವಿಶ್ವ ಹಿಂದೂ ಪರಿಷತ್, ಗಣೇಶೋತ್ಸವ ಮಹಾಮಂಡಳ, ಕನ್ನಡ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಪತ್ರಕರ್ತರು ಉಪಸ್ಥಿತರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸಂಬಂಧಪಟ್ಟ ಎಲ್ಲಾ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಬುಧವಾರ ಬೆಳಿಗ್ಗೆ 10 ಗಂಟೆಗೆ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಿ, ಮೋಹನ್ ಕೇಸರೆಕರ್ ದಂಪತಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವ ಕುರಿತು ಸರ್ವಾನುಮತದ ನಿರ್ಧಾರ ಕೈಗೊಳ್ಳಬೇಕು, ಎಂದು ಆಯೋಜಕರು ಮನವಿ ಮಾಡಿದ್ದಾರೆ.

