चन्नेवाडी ग्रामस्थांच्या स्वतंत्र बूथ मागणीला यश.
खानापूर ; गेल्या पंचवीस ते तीस वर्षांपासून चन्नेवाडी ता.खानापूरच्या रहिवाश्यांना मतदानासाठी भुत्तेवाडी येथील बुथवर मतदानासाठी जावे लागत होते, त्यामुळे मतदारांची गैरसोय होत होती. यासाठी काही दिवसांपूर्वी गावकऱ्यांनी खानापूरचे तहसीलदार दुंडाप्पा कोमार यांना निवेदन देऊन चन्नेवाडी गावासाठी स्वतंत्र बूथ व वॉर्डची मागणी केली होती.
त्याच बरोबर चन्नेवाडी गावचे रहिवाशी व खानापूर युवा समितीचे अध्यक्ष व सीमाभागचे कार्याध्यक्ष धनंजय पाटील यांनीही या मागणीचा पाठपुरावा म्हणून बेळगावचे जिल्हाधिकारी श्री.मोहम्मद रोशन यांच्याकडेही उपरोक्त मागणीचे निवेदन सादर केले होते. त्यावेळी मोहम्मद रोशन यांनी पुढील महिन्यात स्वतंत्र बूथ करून देण्याचे आश्वासन दिले होते.
आपल्या आश्वासनाची पूर्तता करताना जिल्हाधिकाऱ्यांनी चन्नेवाडी गावासाठी 196A हा स्वतंत्र बूथ मंजूर केला असून यापुढील मतदानासाठी गावकऱ्यांना गावच्या प्राथमिक शाळेतच मतदानाची सोय केली आहे. या मागणीच्या पुर्ततेनंतर गावकऱ्यांच्या मध्ये समाधानाचे वातावरण असून जिल्हाधिकारी मोहम्मद रोशन,खानापूर तालुक्याचे निवडणूक अधिकारी बलराम चव्हाण व तहसीलदार दुंडाप्पा कोमार यांचे त्यांनी आभार मानले आहेत.
ಚನ್ನೇವಾಡಿ ಗ್ರಾಮಸ್ಥರ ಚುನಾವಣೆ ವೇಳೆ ಪ್ರತ್ಯೇಕ ಬೂತ್ ಬೇಡಿಕೆಗೆ ಯಶಸ್ಸು.
ಖಾನಾಪುರ : ಕಳೆದ ಇಪ್ಪತ್ತೈದುರಿಂದ ಮೂವತ್ತು ವರ್ಷಗಳಿಂದ ಚನ್ನೇವಾಡಿ , ತಾ. ಖಾನಾಪುರ ಗ್ರಾಮದ ನಿವಾಸಿಗಳು ಚುನಾವಣೆ ವೇಳೆ ಮತದಾನ ಮಾಡಲು ಭೂತ್ತೇವಾಡಿ ಗ್ರಾಮದ ಬೂತ್ಗೆ ತೆರಳಬೇಕಾಗುತ್ತಿತ್ತು. ಇದರಿಂದ ಗ್ರಾಮಸ್ಥರು ಹಾಗೂ ಮತದಾರರಿಗೆ ಸಾಕಷ್ಟು ಅನಾನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಖಾನಾಪುರದ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿ, ಚನ್ನೇವಾಡಿ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ (ಬೂತ್) ಹಾಗೂ ವಾರ್ಡ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದರು.
ಅದೇ ರೀತಿ ಚನ್ನೇವಾಡಿ ಗ್ರಾಮದ ನಿವಾಸಿ ಹಾಗೂ ಖಾನಾಪುರ ಯುವ ಸಮಿತಿಯ ಅಧ್ಯಕ್ಷ ಮತ್ತು ಗಡಿಭಾಗದ ಕಾರ್ಯಾಧ್ಯಕ್ಷ ಧನಂಜಯ ಪಾಟೀಲ ಅವರು ಕೂಡ ಈ ಬೇಡಿಕೆಯ ಕುರಿತು ನಿರಂತರವಾಗಿ ಪ್ರಯತ್ನ ನಡೆಸಿ, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮೊಹಮ್ಮದ್ ರೋಷನ್ ಅವರಿಗೂ ಮೇಲ್ಕಂಡ ಬೇಡಿಕೆಯ ಮನವಿಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಂದಿನ ತಿಂಗಳಲ್ಲಿ ಚನ್ನೇವಾಡಿ ಗ್ರಾಮಕ್ಕೆ ಪ್ರತ್ಯೇಕ ಬೂತ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.
ತಮ್ಮ ಭರವಸೆಯನ್ನು ಈಡೇರಿಸಿರುವ ಜಿಲ್ಲಾಧಿಕಾರಿಗಳು ಇದೀಗ ಚನ್ನೇವಾಡಿ ಗ್ರಾಮಕ್ಕೆ 196A ಎಂಬ ಪ್ರತ್ಯೇಕ ಮತಗಟ್ಟೆಯನ್ನು ಮಂಜೂರು ಮಾಡಿದ್ದು, ಇನ್ನು ಮುಂದೆ ನಡೆಯುವ ಚುನಾವಣೆಗಳಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಬಹಳ ವರ್ಷಗಳಿಂದ ಗ್ರಾಮಸ್ಥರು ಎದುರಿಸುತ್ತಿದ್ದ ಮತದಾನದ ತೊಂದರೆ ಇದೀಗ ನಿವಾರಣೆಯಾಗಿರುವುದರಿಂದ ಚನ್ನೇವಾಡಿ ಗ್ರಾಮಸ್ಥರಲ್ಲಿ ಸಂತಸದ ಹಾಗೂ ತೃಪ್ತಿಯ ವಾತಾವರಣ ನಿರ್ಮಾಣವಾಗಿದೆ. ತಮ್ಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಖಾನಾಪುರ ತಾಲೂಕು ಚುನಾವಣಾಧಿಕಾರಿ ಬಲರಾಮ ಚವ್ಹಾಣ ಹಾಗೂ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.



