पोल्ट्री फार्मच्या एनओसीसाठी लाच स्वीकारताना रंगेहात पकडले; खानापूर आरोग्य विभागावर लोकायुक्तांची कारवाई.
खानापूर : प्रतिनिधी
पोल्ट्री फार्म सुरू करण्यासाठी आवश्यक असलेली एनओसी देण्यासाठी लाच मागितल्याच्या आरोपावरून खानापूर तालुका आरोग्याधिकारी डॉ. महेश किवडसण्णावर आणि आरोग्य विभागातील एसडीए बिराप्पा राजापुरी यांच्याविरोधात लोकायुक्त पथकाने कारवाई केली आहे. या कारवाईत 6,000 हजारांची लाच स्वीकारताना एसडीए बिराप्पा राजापुरी यांना रंगेहात पकडण्यात आले आहे.
खानापूर तालुक्यातील कामशिनकोप्प येथील माजी सैनिक उदय चवलगी यांनी पोल्ट्री फार्म सुरू करण्यासाठी संबंधित विभागाकडे अर्ज केला होता. या प्रकरणात आवश्यक असलेली एनओसी देण्यासाठी लाचेची मागणी करण्यात आल्याचा आरोप करत त्यांनी तक्रार केली होती.
ही तक्रार भाजप अल्पसंख्याक समितीचे अध्यक्ष तसेच कदंब सोशल फाउंडेशनचे अध्यक्ष जॉर्डन गोन्साल्विस यांच्याकडे करण्यात आली होती. त्यानंतर गोन्साल्विस यांच्या पुढाकाराने व मार्गदर्शनाखाली लोकायुक्तांकडे तक्रार दाखल करण्यात आली. तक्रारीची पडताळणी केल्यानंतर लोकायुक्त पथकाने सापळा रचून ही कारवाई केल्याचे सांगण्यात आले.
लोकायुक्त डीएसपी बी. एस. पाटील यांच्या नेतृत्वाखालील पथकाने कारवाई करत एसडीए बिराप्पा राजापुरी यांना 6,000 हजारांची लाच स्वीकारताना पकडले. या कारवाईत पीआय गुरुराज यांच्यासह लोकायुक्त पोलीस अधिकारी व कर्मचारी सहभागी झाले होते.
दरम्यान, या प्रकरणात तालुका आरोग्याधिकारी डॉ. महेश किवडसण्णावर यांचीही चौकशी सुरू असून, संबंधित दोघांना ताब्यात घेऊन न्यायालयासमोर हजर करण्याची प्रक्रिया सुरू असल्याची माहिती आहे. पुढील कारवाईनंतर न्यायालयीन कोठडीबाबत निर्णय होणार आहे.
लोकायुक्तांच्या या कारवाईमुळे खानापूर तालुक्यातील शासकीय कार्यालयांमध्ये खळबळ उडाली असून, आरोग्य विभागातही चर्चेला उधाण आले आहे. प्रकरणाचा पुढील तपास लोकायुक्त पथकाकडून सुरू आहे.
ಪೌಲ್ಟ್ರಿ ಫಾರ್ಮ್ ಚಲಾವಣೆ ಸಂಬಂಧ ಎನ್ಒಸಿಗಾಗಿ ಲಂಚ ಸ್ವೀಕರಿಸುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದರು; ಖಾನಾಪುರ ಆರೋಗ್ಯ ಇಲಾಖೆಯ ವಿರುದ್ಧ ಲೋಕಾಯುಕ್ತರ ಕಾರ್ಯಾಚರಣೆ.
ಖಾನಾಪುರ : ಪ್ರತಿನಿಧಿ
ಪೌಲ್ಟ್ರಿ ಫಾರ್ಮ್ ಆರಂಭಿಸಲು ಅಗತ್ಯವಿರುವ ಎನ್ಒಸಿ ನೀಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವಡಸಣ್ಣವರ್ ಹಾಗೂ ಆರೋಗ್ಯ ಇಲಾಖೆಯ ಎಸ್ಡಿಎ ಬಿರಪ್ಪ ರಾಜಾಪುರಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 6,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಎಸ್ಡಿಎ ಬಿರಪ್ಪ ರಾಜಾಪುರಿ ಅವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಲಾಗಿದೆ.
ಖಾನಾಪುರ ತಾಲೂಕಿನ ಕಾಮಶಿನಕೊಪ್ಪ ಗ್ರಾಮದ ಮಾಜಿ ಸೈನಿಕ ಉದಯ ಚವಲಗಿ ಅವರು ಪೌಲ್ಟ್ರಿ ಫಾರ್ಮ್ ಆರಂಭಿಸಲು ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಅಗತ್ಯವಿರುವ ಎನ್ಒಸಿ ನೀಡಲು ಲಂಚದ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿ ಅವರು ದೂರು ನೀಡಿದ್ದರು.
ಈ ದೂರುವನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಹಾಗೂ ಕದಂಬ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ಜೋರ್ಡನ್ ಗೋನ್ಸಾಲ್ವಿಸ್ ಅವರ ಗಮನಕ್ಕೆ ತರಲಾಗಿತ್ತು. ನಂತರ ಗೋನ್ಸಾಲ್ವಿಸ್ ಅವರ ಮುಂದಾಳತ್ವ ಹಾಗೂ ಮಾರ್ಗದರ್ಶನದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಯಿತು. ದೂರಿನ ಪರಿಶೀಲನೆ ನಡೆಸಿದ ಬಳಿಕ ಲೋಕಾಯುಕ್ತ ಪೊಲೀಸರು ಬಲೆ ಬೀಸಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಡಿಎಸ್ಪಿ ಬಿ. ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಎಸ್ಡಿಎ ಬಿರಪ್ಪ ರಾಜಾಪುರಿ ಅವರು 6,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರೆಡ್ಹ್ಯಾಂಡ್ ಆಗಿ ಹಿಡಿದಿದೆ. ಈ ಕಾರ್ಯಾಚರಣೆಯಲ್ಲಿ ಪಿಐ ಗುರುರಾಜ್ ಸೇರಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಇದರ ನಡುವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕಿವಡಸಣ್ಣವರ್ ಅವರ ವಿಚಾರಣೆಯೂ ಮುಂದುವರಿದಿದ್ದು, ಸಂಬಂಧಿಸಿದ ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಮುಂದಿನ ಕಾನೂನು ಕ್ರಮದ ಬಳಿಕ ನ್ಯಾಯಾಂಗ ಬಂಧನದ ಕುರಿತು ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತರ ಈ ಕಾರ್ಯಾಚರಣೆಯಿಂದ ಖಾನಾಪುರ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಂಚಲನ ಉಂಟಾಗಿದ್ದು, ಆರೋಗ್ಯ ಇಲಾಖೆಯಲ್ಲಿಯೂ ಈ ಪ್ರಕರಣದ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.



