
जिल्ह्यात पावसाचा जोर : जिल्हाधिकाऱ्यांच्या नेतृत्वाखाली अधिकाऱ्यांच्या पथकाने नदीपात्राची पाहणी केली.
नद्यांच्या प्रवाहात वाढ; पुराचा धोका नाही : जिल्हाधिकारी नितेश पाटील
बेळगाव : गेल्या चार दिवसांपासून जिल्हाभरात चांगला पाऊस पडत आहे. जिल्हाधिकारी नितेश पाटील म्हणाले की, कृष्णा, घटप्रभा आणि मलप्रभा नद्यांमध्ये आवक वाढली असून, सध्या पुराची भीती नाही. रविवारी (23 जुलै) त्यांनी जिल्हा पंचायतचे मुख्य कार्यकारी अधिकारी व पोलीस अधीक्षकांसह नदीपात्रासह जिल्ह्यातील विविध ठिकाणी भेट देऊन प्रसारमाध्यमांना माहिती दिली.

कृष्णा नदीत 1.07 लाख क्युसेक, घटप्रभा नदीत 30 हजार क्युसेक आणि मलप्रभा नदीत 13.50 हजार क्युसेक विसर्ग सुरू आहे.
त्यामुळे आलमट्टी, हिडकल आणि नवलतीर्थ जलाशयातील पाणी पातळीत हळूहळू वाढ होत आहे. येत्या काळात पिण्यासाठी व पिकांना फायदा होणार आहे.
शेतकरी-जनतेने जागरूक राहावे:
जिल्हाभरातील काही छोटे पूल पाण्याखाली गेले असून जनतेने व शेतकऱ्यांनी काळजी घ्यावी. या तुंबलेल्या रस्त्यांचा कोणत्याही कारणास्तव वापर करू नये, असे जिल्हाधिकारी नितेश पाटील यांनी सांगितले.

संभाव्य पूर व्यवस्थापनासाठी तयारी करा:
जिल्ह्यात आतापर्यंत पूरस्थिती निर्माण झालेली नाही. मात्र, खबरदारीचा उपाय म्हणून नदीकाठच्या गावांना भेटी देऊन पाहणी करण्यात येत असल्याचे जिल्हाधिकाऱ्यांनी सांगितले.
संभाव्य पूरस्थितीला तोंड देण्यासाठी जिल्हा प्रशासन, पोलिसांसह विविध विभागांकडून आवश्यक ती सर्व तयारी करण्यात येत आहे.

खबरदारीचा उपाय म्हणून काळजी केंद्रे देखील ओळखली गेली आहेत. आपत्कालीन परिस्थितीत लोक आणि गुरेढोरे यांची सुटका करून त्यांना सुरक्षित ठिकाणी आणण्यासाठी उपाययोजना करण्यात आल्या आहेत.
आपत्कालीन कामांसाठी लागणारी बोटी आणि इतर उपकरणे सज्ज ठेवण्यात आली आहेत. याशिवाय औषधे, जनावरांचा चारा यासह सर्व बाबींसाठी संबंधित विभागाने आवश्यक तयारी केली असल्याचे जिल्हाधिकारी पाटील यांनी सांगितले. वनक्षेत्रातील धबधब्यांना भेट देण्यावर निर्बंध घातल्याचे त्यांनी सांगितले आहे.
ಜಿಲ್ಲೆಯಲ್ಲಿ ವ್ಯಾಪಕ ಮಳೆ: ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ನದಿ ಪಾತ್ರವನ್ನು ಪರಿಶೀಲಿಸಿತು
ನದಿಗಳ ಒಳಹರಿವು ಹೆಚ್ಚಳ; ಪ್ರವಾಹ ಭೀತಿ ಇಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಬೆಳಗಾವಿ, ಜು.23 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಿದ್ದು, ಸದ್ಯ ಪ್ರವಾಹದ ಭೀತಿ ಇಲ್ಲ.
ಭಾನುವಾರ (ಜು.23) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನದಿಪಾತ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕೃಷ್ಣಾ ನದಿಯಲ್ಲಿ 1.07 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಯಲ್ಲಿ 30 ಸಾವಿರ, ಮಲಪ್ರಭಾ ನದಿಯಲ್ಲಿ 13.50 ಸಾವಿರ ಕ್ಯೂಸೆಕ್ ಒಳಹರಿವು ಇದೆ.
ಇದರಿಂದ ಆಲಮಟ್ಟಿ, ಹಿಡಕಲ್, ನವಿಲುತೀರ್ಥ ಜಲಾಶಯಗಳಲ್ಲಿ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯಲು ಮತ್ತು ಬೆಳೆಗಳಿಗೆ ಅನುಕೂಲವಾಗಲಿದೆ.
ರೈತರು-ಸಾರ್ವಜನಿಕರು ಜಾಗೃತರಾಗಬೇಕು:
ಜಿಲ್ಲೆಯಾದ್ಯಂತ ಕೆಲ ಕಿರು ಸೇತುವೆಗಳು ಮುಳುಗಡೆಯಾಗಿದ್ದು, ಸಾರ್ವಜನಿಕರು, ರೈತರು ಎಚ್ಚರಿಕೆ ವಹಿಸಬೇಕು. ಜಲಾವೃತಗೊಂಡಿರುವ ಈ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧರಾಗಿ:
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಿಂದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಆರೈಕೆ ಕೇಂದ್ರಗಳನ್ನೂ ಗುರುತಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಜನ ಮತ್ತು ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ.
ತುರ್ತು ಕಾರ್ಯಾಚರಣೆಗೆ ಅಗತ್ಯವಿರುವ ದೋಣಿಗಳು ಮತ್ತು ಇತರ ಉಪಕರಣಗಳನ್ನು ಸಿದ್ಧಪಡಿಸಲಾಗಿದೆ. ಇದಲ್ಲದೇ ಔಷಧಿ, ಜಾನುವಾರು ಮೇವು ಸೇರಿದಂತೆ ಎಲ್ಲ ವಿಷಯಗಳಿಗೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಜಲಪಾತಗಳ ಭೇಟಿಗೆ ನಿರ್ಬಂಧಗಳು:
