
अर्थ संकल्प जनतेची दिशाभूल करणारा आहे ; खासदार विश्वेश्वर हेगडे-कागेरी.
अर्थसंकल्पात विविध विभागीय प्रकल्पांसाठी जाहीर केलेला निधी पूर्णपणे खर्च झालेला नाही, आणि प्रत्यक्ष खर्च लोकांसमोर न ठेवता नवीन घोषणांसह अर्थसंकल्प सादर करण्यात आला आहे. हा अर्थसंकल्प जनतेची दिशाभूल करणारा आहे. निवडणुका डोळ्यासमोर ठेवून, बंगळुरूमध्ये एकाच केंद्राची घोषणा करणे ही एक राजकीय खेळी आहे. असे मत कॅनरा क्षेत्राचे खासदार विश्वेश्वर हेगडे-कागेरी यांनी व्यक्त केले आहे.
पुढे आपले मत व्यक्त करताना खासदार विश्वेश्वर हेगडे म्हणाले, केंद्र सरकारच्या कर वितरणाबद्दल निराधार आरोप करणारे सिद्धरामय्या राज्याच्या संपूर्ण विकासाकडे दुर्लक्ष करत असल्याचे दिसून येते. पश्चिम घाट आणि किनारी प्रदेशातील लोकांना दीर्घकालीन योजना देण्यात आलेल्या नाहीत ही खेदाची गोष्ट आहे.
औद्योगिक जमिनीच्या वाटपात आणि भाडेपट्टे देण्यात मुस्लिमांना आरक्षण देणे हे तुष्टीकरणाचे राजकारण आहे. कोणत्याही व्यापक विकासाशिवाय हे अर्थसंकल्प तुष्टीकरणाचे राजकारण करत आहे हे निंदनीय आहे. एकंदरीत, हे बजेट फक्त आकड्यांचा खेळ आहे.
ಮಂಡಿಸಿದ ಹಣಕಾಸು ಬಜೆಟ್ ಸಾರ್ವಜನಿಕರನ್ನು ದಾರಿ ತಪ್ಪಿಸುವುದಾಗಿದೆ; ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ.
ಬಜೆಟ್ನಲ್ಲಿ ವಿವಿಧ ಇಲಾಖೆಯ ಯೋಜನೆಗಳಿಗೆ ಘೋಷಣೆ ಮಾಡಿದ ಅನುದಾನ ಸಂಪೂರ್ಣ ವೆಚ್ಚ ಮಾಡದೇ ಹಾಗೆ ಉಳಿದಿದ್ದು ಹಾಗೂ ವಾಸ್ತವಿಕ ವೆಚ್ಚ ವನ್ನು ಜನರ ಮುಂದೆ ಇಡದೇ ಹೊಸ ಹೊಸ ಘೋಷಣೆಯ ಆಯವ್ಯಯ ಮಂಡಿಸಿರುವದು ಜನರನ್ನು ಮರಳು ಮಾಡುವ ಆಯವ್ಯಯವಾಗಿದೆ. ಚುನಾವಣೆ ದೃಷ್ಟಿ ಯಲ್ಲಿ ಇಟ್ಟುಕೊಂಡು ಬೆಂಗಳೂರೊಂದೇ ಕೇಂದ್ರವಾಗಿರಿಸಿ ಘೋಷಣೆ ಘೋಷಿಸಿರುವದು ರಾಜಕೀಯ ತಂತ್ರವಲ್ಲದೆ ಮತ್ತೇನು ಅಲ್ಲ. ಈ ಅಭಿಪ್ರಾಯವನ್ನು ಕೆನರಾ ಪ್ರದೇಶದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಸಂಸದ ವಿಶ್ವೇಶ್ವರ ಹೆಗಡೆ , ಕೇಂದ್ರದ ತೆರಿಗೆ ಹಂಚಿಕೆ ಬಗ್ಗೆ ನಿರಾಧಾರ ಆರೋಪ ಮಾಡುವ ಸಿದ್ದರಾಮಯ್ಯನವರು ಸಮಗ್ರವಾಗಿ ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸುವುದು ಕಾಣಿಸುತ್ತದೆ. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದ ಜನರಿಗೆ ಯಾವುದೇ ದೀರ್ಘವಾದ ಯೋಜನೆಗಳನ್ನು ನೀಡದೇ ಇರುವುದು ವಿಷಾದದ ಸಂಗತಿ.
ಮುಸ್ಲಿಮರಿಗೆ ಕೈಗಾರಿಕಾ ಪ್ರದೇಶ ಭೂಮಿಯ ಹಂಚಿಕೆಯಲ್ಲೂ ಮತ್ತು ಗುತ್ತಿಗೆ ನೀಡುವಲ್ಲೂ ಸಹ ಅವರಿಗೆ ಮೀಸಲಾತಿ ನೀಡಿರುವದು ಓಲೈಕೆ ರಾಜಕಾರಣವಾಗಿದೆ ಈ ಆಯವ್ಯಯದಲ್ಲಿ ಯಾವದೇ ಸಮಗ್ರ ಅಭಿವೃದ್ಧಿ ಇಲ್ಲದೇ ತುಷ್ಟಿಕರಣ ರಾಜನೀತಿ ಮಾಡುತ್ತಿರುವದು ಖಂಡನೀಯ. ಒಟ್ಟಿನಲ್ಲಿ ಈ ಆಯವ್ಯಯ ಅಂಕೆ-ಸಂಖ್ಯೆ ಆಟ ಆಗಿದೆ ಅಷ್ಟೇ ಎಂದು ಬಜೆಟ ಬಗ್ಗೆ ಬೇಸರ ವ್ಯಕ್ತಪಡಿಸಿದರು.
