भाजपचा जिल्हास्तरीय प्रशिक्षण वर्ग उत्साहात प्रारंभ.
खानापूर ; खानापूर तालुक्यातील जांबोटी जवळील कैवल्यम योगा रिट्रीट सेंटर येथे सुरू असलेल्या पंडित दीनदयाळ उपाध्याय प्रशिक्षण महाभियान 2026 अंतर्गत बेळगाव ग्रामीण जिल्हास्तरीय प्रशिक्षण वर्गाच्या पहिल्या दिवसाच्या उद्घाटन समारंभात माजी मुख्यमंत्री तथा खासदार जगदीश शेट्टर आणि भाजप जिल्हाध्यक्ष सुभाष पाटील यांनी मार्गदर्शन केले.
यावेळी बोलताना त्यांनी सांगितले की, दर चार वर्षांनी आयोजित करण्यात येणारा हा प्रशिक्षण वर्ग मंडळ स्तरावर यशस्वीरीत्या पूर्ण झाला असून पुढे जिल्हा, राज्य आणि राष्ट्रीय स्तरावरही आयोजित केला जाणार आहे. हा वर्ग कार्यकर्त्यांचे व्यक्तिमत्त्व घडविण्यास, शिस्त निर्माण करण्यास आणि संघटन बळकट करण्यास उपयुक्त ठरेल.
भाजप पक्ष हा ठरावीक ध्येय व उद्दिष्टे असलेला पक्ष असून इतर पक्षांपेक्षा वेगळा आहे. केवळ सत्ता मिळविणे हे आमचे उद्दिष्ट नसून, जनतेची अधिक चांगली सेवा करण्यासाठी सत्ता हे एक साधन आहे. पक्षाची मूलतत्त्वे, विचारसरणी आणि परंपरा आजच्या आधुनिक काळातील कार्यकर्त्यांपर्यंत पोहोचविणे आणि पक्षात कसे कार्य करावे तसेच जनतेची सेवा कशी करावी याबाबत मार्गदर्शन करण्यासाठी हा प्रशिक्षण वर्ग महत्त्वपूर्ण ठरणार असल्याचे त्यांनी स्पष्ट केले.
विधान परिषदेचे मुख्य सचेतक एन. रविकुमार आणि आमदार विठ्ठल हलगेकर यांनीही यावेळी मनोगत व्यक्त केले. त्यांनी सांगितले की, देशरक्षण आणि भारताच्या मूळ संस्कृतीच्या संरक्षणासाठी स्थापन झालेल्या भारतीय जनता पक्षाने संघटनाच्या बळावर जगातील सर्वाधिक कार्यकर्ते असलेला राजकीय पक्ष म्हणून ओळख मिळवली आहे. कार्यकर्त्यांच्या एकजुटीमुळे आणि संघटनात्मक शक्तीमुळे अशक्य वाटणारी गोष्टही साध्य होऊ शकते, असे त्यांनी नमूद केले.
या प्रसंगी माजी आमदार महांतेश दोड्डगौड्र, माजी आमदार जगदीश मेटगुड्ड, माजी आमदार डॉ. विश्वनाथ पाटील, माजी आमदार अरविंद पाटील, माजी आमदार महादेवप्पा यादवाड, जिल्हा प्रकोष्ठ संयोजक महेश मोहिते, सरचिटणीस मल्लिकार्जुन मादम्मनवर, संदीप देशपांडे, धनश्री देसाई, जिल्हा उपाध्यक्ष प्रमोद कोचेरी, खानापूर मंडळ अध्यक्ष बसवराज साणिकोप्प तसेच इतर पदाधिकारी, प्रमुख कार्यकर्ते आणि मान्यवर मोठ्या संख्येने उपस्थित होते.
ಬಿಜೆಪಿಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಉತ್ಸಾಹದಿಂದ ಆರಂಭ.
ಖಾನಾಪುರ : ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ಕೈವಲ್ಯಂ ಯೋಗಾ ರಿಟ್ರೀಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಪಂಡಿತ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026ರ ಅಂಗವಾಗಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಮೊದಲ ದಿನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಅವರು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಕ್ಕೊಮ್ಮೆ ಆಯೋಜಿಸಲಾಗುವ ಈ ತರಬೇತಿ ವರ್ಗವು ಮಂಡಲ ಮಟ್ಟದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿಯೂ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಈ ತರಬೇತಿ ವರ್ಗವು ಕಾರ್ಯಕರ್ತರ ವ್ಯಕ್ತಿತ್ವ ವಿಕಾಸಕ್ಕೆ, ಶಿಸ್ತು ಬೆಳೆಸಲು ಹಾಗೂ ಸಂಘಟನೆಯನ್ನು ಬಲಪಡಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷವು ನಿರ್ದಿಷ್ಟ ಗುರಿ ಮತ್ತು ಉದ್ದೇಶಗಳನ್ನು ಹೊಂದಿರುವ ಪಕ್ಷವಾಗಿದ್ದು, ಇತರ ಪಕ್ಷಗಳಿಂದ ಭಿನ್ನವಾಗಿದೆ. ಕೇವಲ ಅಧಿಕಾರ ಪಡೆಯುವುದು ತಮ್ಮ ಉದ್ದೇಶವಲ್ಲ; ಜನತೆಗೆ ಉತ್ತಮ ಸೇವೆ ಸಲ್ಲಿಸಲು ಅಧಿಕಾರವು ಒಂದು ಸಾಧನ ಮಾತ್ರವಾಗಿದೆ. ಪಕ್ಷದ ಮೂಲತತ್ವಗಳು, ಚಿಂತನೆಗಳು ಮತ್ತು ಪರಂಪರೆಯನ್ನು ಇಂದಿನ ಆಧುನಿಕ ಕಾಲದ ಕಾರ್ಯಕರ್ತರಿಗೂ ತಲುಪಿಸುವುದು ಹಾಗೂ ಪಕ್ಷದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಜನಸೇವೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ಈ ತರಬೇತಿ ವರ್ಗ ಮಹತ್ವದಾಯಕವಾಗಲಿದೆ ಎಂದು ಅವರು ಅಭಿಪ್ರಾಯ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ ಮತ್ತು ಶಾಸಕ ವಿಠ್ಠಲ ಹಲಗೆಕರ ಅವರು ಸಹ ತಮ್ಮ ಮನೋಭಾವ ವ್ಯಕ್ತಪಡಿಸಿದರು. ದೇಶರಕ್ಷಣೆ ಮತ್ತು ಭಾರತದ ಮೂಲ ಸಂಸ್ಕೃತಿಯ ರಕ್ಷಣೆಯ ಉದ್ದೇಶದಿಂದ ಸ್ಥಾಪಿತವಾದ ಭಾರತೀಯ ಜನತಾ ಪಕ್ಷವು ಸಂಘಟನಾ ಶಕ್ತಿಯ ಆಧಾರದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಅವರು ತಿಳಿಸಿದರು. ಕಾರ್ಯಕರ್ತರ ಏಕತೆ ಮತ್ತು ಸಂಘಟನಾ ಬಲದಿಂದ ಅಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹಾಂತೇಶ ದೊಡ ಗೌಡ್ರ, ಜಗದೀಶ ಮೆಟಗುಡ್ಡ, ಡಾ. ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಮಹಾದೇವಪ್ಪ ಯಾದವಾಡ, ಜಿಲ್ಲಾ ಪ್ರಕೋಷ್ಟ ಸಂಯೋಜಕ ಮಹೇಶ್ ಮೊಹಿತೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದಮ್ಮನವರ್, ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಖಾನಾಪುರ ಮಂಡಲ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಸೇರಿದಂತೆ ಇತರ ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರು ಹಾಗೂ ಗಣ್ಯರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


