ताळगुप्पा–बेळगाव राज्य महामार्गाची लवकरच डागडुजी; 16 कोटींच्या रस्ता सुधारणा कामाला मंजुरी ; संजय गस्ती.
खानापूर : ताळगुप्पा–बेळगाव राज्य महामार्ग क्रमांक 93 वरील सध्या पडलेले खड्डे बुजवून रस्त्याची तातडीने दुरुस्ती करण्यात येणार आहे. तसेच या मार्गाच्या उर्वरित रस्ता सुधारणा कामासाठी सीआरआयएफ (CRIF) योजनेअंतर्गत 16 कोटी रुपये मंजूर झाले आहेत.
सध्या पावसाळ्यामुळे रस्त्याची मोठ्या प्रमाणात दुरवस्था झाली असून, वाहनचालकांना खड्ड्यांतून मार्ग काढावा लागत आहे. याची दखल घेत आधीच पडलेले खड्डे भरून रस्त्याची डागडुजी करण्यात येईल, अशी माहिती खानापूर सार्वजनिक बांधकाम विभागाचे सहायक कार्यकारी अभियंता संजय गस्ती यांनी दिली.
ताळगुप्पा–बेळगाव राज्य महामार्ग क्रमांक 93 वरील उर्वरित रस्ता सुधारणा कामासाठी सीआरआयएफ योजनेतून 16 कोटी रुपयांचा निधी मंजूर झाला आहे. पावसाळा संपल्यानंतर पीडब्ल्यूडी नॅशनल हायवे विभागामार्फत या रस्ता सुधारणा कामाला सुरुवात करण्यात येणार असल्याचे संजय गस्ती यांनी सांगितले.
त्यामुळे सध्या खड्ड्यांमुळे त्रस्त असलेल्या वाहनचालक व नागरिकांना तात्पुरत्या दुरुस्तीमुळे दिलासा मिळणार असून, पावसाळ्यानंतर होणाऱ्या 16 कोटींच्या कामामुळे या मार्गाची कायमस्वरूपी सुधारणा होण्याची अपेक्षा आहे.
ತಾಳಗುಪ್ಪ–ಬೆಳಗಾವಿ ರಾಜ್ಯ ಹೆದ್ದಾರಿಯ ದುರಸ್ತಿ ಶೀಘ್ರದಲ್ಲೇ; 16 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಗೆ ಮಂಜೂರು.
ಖಾನಾಪುರ : ತಾಳಗುಪ್ಪ–ಬೆಳಗಾವಿ ರಾಜ್ಯ ಹೆದ್ದಾರಿ ಸಂಖ್ಯೆ 93ರಲ್ಲಿ ಪ್ರಸ್ತುತ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಲಾಗುವುದು. ಅಲ್ಲದೆ, ಈ ಮಾರ್ಗದ ಉಳಿದ ರಸ್ತೆ ಸುಧಾರಣಾ ಕಾಮಗಾರಿಗಾಗಿ ಸಿಆರ್ಐಎಫ್ (CRIF) ಯೋಜನೆಯಡಿ 16 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ.
ಸದ್ಯ ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆಯು ಬಹುತೇಕ ಹದಗೆಟ್ಟಿದ್ದು, ವಾಹನ ಸವಾರರು ಗುಂಡಿಗಳ ಮೂಲಕವೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಈಗಾಗಲೇ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ರಸ್ತೆಯ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು, ಎಂದು ಖಾನಾಪುರ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಗಸ್ತಿ ತಿಳಿಸಿದ್ದಾರೆ.
ತಾಳಗುಪ್ಪ–ಬೆಳಗಾವಿ ರಾಜ್ಯ ಹೆದ್ದಾರಿ ಸಂಖ್ಯೆ 93ರಲ್ಲಿನ ಉಳಿದ ರಸ್ತೆ ಸುಧಾರಣಾ ಕಾಮಗಾರಿಗಾಗಿ ಸಿಆರ್ಐಎಫ್ ಯೋಜನೆಯಡಿ 16 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಮಳೆಗಾಲ ಮುಗಿದ ನಂತರ ಪಿಡಬ್ಲ್ಯೂಡಿ ನ್ಯಾಷನಲ್ ಹೈವೇ ವಿಭಾಗದ ವತಿಯಿಂದ ಈ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಜಯ್ ಗಸ್ತಿ ತಿಳಿಸಿದ್ದಾರೆ.
ಹೀಗಾಗಿ, ಸದ್ಯ ರಸ್ತೆಯಲ್ಲಿನ ಗುಂಡಿಗಳಿಂದ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತಾತ್ಕಾಲಿಕ ದುರಸ್ತಿಯಿಂದ ಕೊಂಚ ಮಟ್ಟಿಗೆ ನೆಮ್ಮದಿ ದೊರೆಯುವ ನಿರೀಕ್ಷೆಯಿದೆ. ಮಳೆಗಾಲ ಮುಗಿದ ಬಳಿಕ ಕೈಗೊಳ್ಳಲಿರುವ 16 ಕೋಟಿ ರೂಪಾಯಿ ವೆಚ್ಚದ ರಸ್ತೆ ಸುಧಾರಣಾ ಕಾಮಗಾರಿಯಿಂದ ಈ ಮಾರ್ಗದ ರಸ್ತೆ ಶಾಶ್ವತವಾಗಿ ಸುಧಾರಣೆಯಾಗುವ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.



