अळनावरमध्ये बनावट पोलिसाला अटक; नागरिकाला धमकावून 15,700 रुपये लुटले.

अळनावर : प्रतिनिधी
पोलिस अधिकारी असल्याचे भासवून नागरिकांना धमकावत पैसे उकळणाऱ्या एका भामट्याला अळनावर पोलिसांनी घटनेनंतर अवघ्या 24 तासांत अटक केली. अबीद अब्दुलखादर अंकले (41, रा. देशनूर चाळ, बैलहोंगल) असे अटक केलेल्या आरोपीचे नाव आहे.
दि. 27 सप्टेंबर रोजी सायंकाळी साडेसातच्या सुमारास कित्तूर तालुक्यातील कत्रीडड्डी येथील भाजी विक्रेते शौकतअली अल्लाभक्ष मकानदार (58) हे पत्नीसमवेत दुचाकीवरून अळनावर-हळियाळ रस्त्यावरून जात होते. सरकारी रुग्णालय व विद्यनगरदरम्यान काळ्या रंगाच्या ॲक्टिव्हावरून आलेल्या अबीदने त्यांना अडवले.

‘आम्ही पोलिस आहोत, तुमची बॅग व पँटच्या खिशाची तपासणी करायची आहे,’ असे सांगून त्याने शौकतअली यांना धमकावले. तपासणीच्या बहाण्याने त्यांच्या खिशातील 15 हजार 700 रुपये रोख रक्कम घेऊन तो ॲक्टिव्हावरून फरार झाला.
या घटनेप्रकरणी अळनावर पोलिस ठाण्यात गुन्हा क्रमांक 76/2026 अन्वये भारतीय न्याय संहितेच्या कलम 318(4), 319(2) अंतर्गत गुन्हा दाखल करण्यात आला होता.
पोलिसांनी तपास सुरू करून माहितीच्या आधारे दि. 29 सप्टेंबर रोजी दुपारी 1.50 वाजता अबीद अब्दुलखादर अंकले याला अटक केली. त्याच्या ताब्यातून 1 लाख 15 हजार रुपये किमतीची चार दुचाकी वाहने आणि 4 हजार 500 रुपये रोख, असा एकूण मुद्देमाल जप्त करण्यात आला आहे. आरोपीला न्यायालयासमोर हजर करण्यात आल्याचे पोलिसांनी सांगितले.
धारवाड जिल्हा पोलिस अधीक्षक गुंजन आर्या, ग्रामीण उपविभागाचे डीएसपी विनोद मुक्तेदार आणि गरग वर्तुळाचे सीपीआय एम.एम. तहसीलदार यांच्या मार्गदर्शनाखाली अळनावर पीएसआय एस.बी. जांबोटी, पीएसआय बसवराज यद्दलागुड्ड, पीएसआय एफ.एम. मंटूर, एएसआय ए.बी. सोरटूर यांच्यासह पोलिस कर्मचाऱ्यांनी ही कारवाई केली. पोलिस अधीक्षक गुंजन आर्या यांनी पथकाच्या कामगिरीचे कौतुक केले.
ಅಳ್ನಾವರದಲ್ಲಿ ನಕಲಿ ಪೊಲೀಸನ್ ಬಂಧನ.
ಅಳ್ನಾವರ: ಪೊಲೀಸ್ ಅಧಿಕಾರಿಯಂತೆ ನಟಿಸಿ ಸಾರ್ವಜನಿಕರನ್ನು ಹೆದರಿಸಿ ಹಣ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಳ್ನಾವರ ಪೊಲೀಸರು ಘಟನೆ ನಡೆದ ೨೪ ಗಂಟೆಯೊಳಗೆ ಬಂಧಿಸಿದ್ದಾರೆ.
ಬೈಲಹೊAಗಲದ ದೇಶನೂರ ಚಾಳ ನಿವಾಸಿ, ಮಸಾಲೆ ವ್ಯಾಪಾರಿ ಅಬೀದ್ ಅಬ್ದುಲ್ಖಾದರ್ ಅಂಕಲೆ (೪೧) ಬಂಧಿತ ಆರೋಪಿ.
ಸೆ.೨೭ ರಂದು ಸಂಜೆ ೭.೩೦ರ ಸುಮಾರಿಗೆ ಕಿತ್ತೂರು ತಾಲೂಕಿನ ಕತ್ರಿಡಡ್ಡಿ ಗ್ರಾಮದ ತರಕಾರಿ ವ್ಯಾಪಾರಿ ಶೌಕತಲಿ ಅಲ್ಲಾಭಕ್ಷ ಮಕಾನದಾರ (೫೮) ಅವರು ಪತ್ನಿಯೊಂದಿಗೆ ಬೈಕ್ನಲ್ಲಿ ಅಳ್ನಾವರ-ಹಳಿಯಾಳ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ವಿದ್ಯಾನಗರದ ಮಧ್ಯೆ ಸಂಚರಿಸುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟಿಯಲ್ಲಿ ಬಂದ ಅಬೀದ್, ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಬೈಕ್ ನಿಲ್ಲಿಸಿದ್ದಾನೆ.
ನಾವು ಪೊಲೀಸರು, ನಿಮ್ಮ ಚೀಲ ಹಾಗೂ ಪ್ಯಾಂಟ್ ಕಿಸೆ ಪರಿಶೀಲಿಸಬೇಕು ಎಂದು ಹೆದರಿಸಿ, ಪರಿಶೀಲನೆಯ ನೆಪದಲ್ಲಿ ಶೌಕತಲಿ ಅವರ ಕಿಸೆಯಲ್ಲಿದ್ದ ರೂ. ೧೫,೭೦೦
ನಗದನ್ನು ಪಡೆದುಕೊಂಡು ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ. ಈ ಕುರಿತು ಅಳ್ನಾವರ ಠಾಣೆಯಲ್ಲಿ ಗುನ್ನಾ ನಂ.೭೬/೨೦೨೬ರAತೆ ಬಿಎನ್ಎಸ್ ಕಲಂ ೩೧೮(೪), ೩೧೯(೨)ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆಹಾಕಿ ಸೆ.೨೯ರಂದು ಮಧ್ಯಾಹ್ನ ೧.೫೦ಕ್ಕೆ ಅಬೀದ್ ಅಬ್ದುಲಖಾದರ ಅಂಕಲೆ ( ವಯಸ್ಸು ೪೧ ) ನನ್ನು
ಬಂಧಿಸಿದ್ದಾರೆ. ಆರೋಪಿಯ ವಶದಿಂದ ರೂ ೧.೧೫ ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ರೂ. ೪,೫೦೦ ನಗದು ಜಪ್ತಿ ಮಾಡಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಗ್ರಾಮೀಣ ಉಪವಿಭಾಗದ ಡಿಎಸ್ಪಿ ವಿನೋದ ಮುಕ್ತೇದಾರ ಹಾಗೂ ಗರಗ ವೃತ್ತದ ಸಿಪಿಐ ಎಂ.ಎA. ತಹಶೀಲ್ದಾರ ಅವರ ಮಾರ್ಗದರ್ಶನದಲ್ಲಿ ಅಳ್ನಾವರ ಪಿಎಸ್ಐ ಎಸ್.ಬಿ. ಜಾಂಬೋಟಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ, ಪಿಎಸ್ಐ ಎಫ್.ಎಂ. ಮಂಟೂರ, ಎಎಸ್ಐ ಎ.ಬಿ. ಸೊರಟೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಂಡದ ಕಾರ್ಯವನ್ನು ಎಸ್ಪಿ ಗುಂಜನ್ ಆರ್ಯ ಶ್ಲಾಘಿಸಿದ್ದಾರೆ.




