61 वेळा रक्तदान करणारे अधिकारी; सलग 27 वर्षांपासून सुरू असलेली जीवनदायी सेवा.
बेळगाव : प्रतिनिधी
“1999 साली माझा धाकटा भाऊ अॅनिमियाने त्रस्त होता. त्याला इतरांनी दिलेले रक्त जुळत नव्हते. कुटुंबातील व्यक्तीने रक्तदान करण्याचा सल्ला डॉक्टरांनी दिला. त्यावेळी मी स्वतः पुढे येऊन रक्तदान केले. तेव्हापासून सुरू झालेली रक्तदानाची सवय आजही अखंड सुरू आहे,” असे सांगत 61 वेळा रक्तदान केलेले प्रधानमंत्री पोषण-शक्ती निर्माण योजनेचे जिल्हा शिक्षणाधिकारी लक्ष्मणराव यक्कुंडी यांनी आपला अनुभव व्यक्त केला.
वयाच्या 55 व्या वर्षीही लक्ष्मणराव यक्कुंडी दरवर्षी दोन ते चार वेळा रक्तदान करतात. कोणतीही अपेक्षा न ठेवता ते सरकारी रुग्णालयांच्या रक्तपेढीत जाऊन रक्तदान करतात. तसेच आपत्कालीन परिस्थितीत रक्ताची गरज असलेल्या रुग्णांनाही थेट मदत करतात. गेल्या 27 वर्षांपासून त्यांनी ही समाजोपयोगी परंपरा कायम ठेवली आहे.
यक्कुंडी यांनी सांगितले की, तालुका पंचायत कार्यकारी अधिकारी म्हणून कार्यरत असताना एका ग्रामपंचायत सदस्याच्या सहा वर्षांच्या मुलाला थॅलेसेमिया हा आजार होता. त्या बालकाला दर महिन्याला रक्ताची आवश्यकता असायची. नियमित रक्तदान करत असल्याने त्याला मदत करणे शक्य झाले. या घटनेमुळे रक्तदानाबाबत आणखी प्रेरणा मिळाली.
अथणी, खानापूर आणि उत्तर कन्नड जिल्ह्यातील हल्याळ येथे तालुका पंचायत कार्यकारी अधिकारी म्हणून सेवा बजावत असताना त्यांनी विविध रक्तदान शिबिरांचे आयोजन केले. या माध्यमातून सुमारे 2 हजार युनिट रक्त संकलित करून सरकारी रुग्णालयांना उपलब्ध करून दिले.
कोरोना काळात खानापूरचे क्षेत्र शिक्षणाधिकारी म्हणून कार्यरत असताना रुग्णालयांमध्ये रक्ताचा मोठा तुटवडा निर्माण झाला होता. त्यावेळी शिक्षकांना आवाहन करून त्यांनी सुमारे 200 युनिट रक्त संकलित केले आणि गरजू रुग्णांना दिलासा मिळवून दिला.
“एकदा रक्तदान केल्यास तीन व्यक्तींचे प्राण वाचू शकतात. रक्तदानामुळे समाजसेवा तर होतेच, शिवाय आपल्या आरोग्यासाठीही ते फायदेशीर आहे. नियमित रक्तदानामुळे मी आजही निरोगी आणि तंदुरुस्त आहे. गेल्या काही वर्षांत मला एकही गोळी औषध घ्यावी लागलेली नाही,” असे लक्ष्मणराव यक्कुंडी यांनी सांगितले.
समाजातील अधिकाधिक नागरिकांनी रक्तदान करून गरजूंच्या जीवनाला आधार द्यावा, असे आवाहनही त्यांनी केले.
61 ಬಾರಿ ರಕ್ತದಾನ ಮಾಡಿದ ಅಧಿಕಾರಿ; ನಿರಂತರ 27 ವರ್ಷಗಳಿಂದ ಜೀವದಾನ ಶ್ರೇಷ್ಠಸೇವೆ.
ಬೆಳಗಾವಿ : ಪ್ರತಿನಿಧಿ
“1999ರಲ್ಲಿ ನನ್ನ ತಮ್ಮ ಅನೀಮಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಇತರರು ನೀಡಿದ ರಕ್ತ ಹೊಂದಿಕೆಯಾಗುತ್ತಿರಲಿಲ್ಲ. ಕುಟುಂಬದ ಸದಸ್ಯರು ರಕ್ತದಾನ ಮಾಡಬೇಕೆಂದು ವೈದ್ಯರು ಸಲಹೆ ನೀಡಿದರು. ಆಗ ನಾನು ಸ್ವತಃ ಮುಂದೆ ಬಂದು ರಕ್ತದಾನ ಮಾಡಿದೆ. ಆ ದಿನದಿಂದ ಆರಂಭವಾದ ರಕ್ತದಾನದ ಅಭ್ಯಾಸ ಇಂದಿಗೂ ನಿರಂತರವಾಗಿ ಮುಂದುವರಿದಿದೆ,” ಎಂದು 61 ಬಾರಿ ಶ್ರೇಷ್ಠರಕ್ತದಾನ ಮಾಡಿರುವ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ತಮ್ಮ ಅನುಭವವನ್ನು ಹಂಚಿಕೊಂಡರು.
55ನೇ ವಯಸ್ಸಿನಲ್ಲಿಯೂ ಲಕ್ಷ್ಮಣರಾವ ಯಕ್ಕುಂಡಿ ಅವರು ಪ್ರತಿವರ್ಷ ಎರಡು ರಿಂದ ನಾಲ್ಕು ಬಾರಿ ರಕ್ತದಾನ ಮಾಡುತ್ತಾರೆ. ಯಾವುದೇ ನಿರೀಕ್ಷೆಯಿಲ್ಲದೆ ಸರ್ಕಾರಿ ಆಸ್ಪತ್ರೆಗಳ ರಕ್ತನಿಧಿಗೆ ತೆರಳಿ ರಕ್ತದಾನ ಮಾಡುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ನೇರ ಸಹಾಯವೂ ಮಾಡುತ್ತಿದ್ದಾರೆ. ಕಳೆದ 27 ವರ್ಷಗಳಿಂದ ಅವರು ಈ ಸಮಾಜಮುಖಿ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರ ಆರು ವರ್ಷದ ಮಗುವಿಗೆ ಥಾಲಸೇಮಿಯಾ ಕಾಯಿಲೆ ಇತ್ತು. ಆ ಮಗುವಿಗೆ ಪ್ರತಿ ತಿಂಗಳು ರಕ್ತದ ಅವಶ್ಯಕತೆ ಇರುತ್ತಿತ್ತು. ತಾವು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದ ಕಾರಣ ಆ ಮಗುವಿಗೆ ಸಹಾಯ ಮಾಡಲು ಸಾಧ್ಯವಾಯಿತು. ಈ ಘಟನೆ ರಕ್ತದಾನದ ಬಗ್ಗೆ ಇನ್ನಷ್ಟು ಪ್ರೇರಣೆಯನ್ನು ನೀಡಿತು ಎಂದು ಯಕ್ಕುಂಡಿ ತಿಳಿಸಿದ್ದಾರೆ.
ಅಥಣಿ, ಖಾನಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರು ವಿವಿಧ ರಕ್ತದಾನ ಶಿಬಿರಗಳನ್ನು ಆಯೋಜಿಸಿದರು. ಈ ಮೂಲಕ ಸುಮಾರು 2 ಸಾವಿರ ಯುನಿಟ್ ರಕ್ತವನ್ನು ಸಂಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿದರು.
ಕೊರೊನಾ ಸಂದರ್ಭದಲ್ಲಿ ಖಾನಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆಸ್ಪತ್ರೆಗಳಲ್ಲಿ ರಕ್ತದ ಭಾರೀ ಕೊರತೆ ಉಂಟಾಗಿತ್ತು. ಆಗ ಶಿಕ್ಷಕರಿಗೆ ಕರೆ ನೀಡಿ ಸುಮಾರು 200 ಯುನಿಟ್ ರಕ್ತವನ್ನು ಸಂಗ್ರಹಿಸಿ, ಅಗತ್ಯವಿದ್ದ ರೋಗಿಗಳಿಗೆ ನೆರವಾಗುವಲ್ಲಿ ಯಶಸ್ವಿಯಾದರು.
“ಒಮ್ಮೆ ರಕ್ತದಾನ ಮಾಡಿದರೆ ಮೂರು ಜನರ ಜೀವ ಉಳಿಸಬಹುದು. ರಕ್ತದಾನದಿಂದ ಸಮಾಜಸೇವೆ ಆಗುವುದಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೂ ಅದು ಪ್ರಯೋಜನಕಾರಿ. ನಿಯಮಿತ ರಕ್ತದಾನದ ಫಲವಾಗಿ ನಾನು ಇಂದಿಗೂ ಆರೋಗ್ಯವಂತನಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ ಒಂದು ಮಾತ್ರೆಯ ಔಷಧಿಯನ್ನೂ ಸೇವಿಸುವ ಅಗತ್ಯ ಬಂದಿಲ್ಲ,” ಎಂದು ಲಕ್ಷ್ಮಣರಾವ ಯಕ್ಕುಂಡಿ ಹೇಳಿದರು.
ಸಮಾಜದ ಹೆಚ್ಚಿನ ನಾಗರಿಕರು ಶ್ರೇಷ್ಠವಾದ ರಕ್ತದಾನ ಮಾಡಿ ಅಗತ್ಯವಿರುವವರ ಜೀವಕ್ಕೆ ಆಧಾರವಾಗಬೇಕು ಎಂದು ಅವರು ಮನವಿ ಮಾಡಿದರು.


