खानापूरमध्ये ‘लोकमान्य’ पॉलिटेक्निक मध्ये प्रवेशास सुरुवात; गुणवंतांना फी सवलत, SNQ कोट्यातूनही संधी.
खानापूर : तालुक्यातील विद्यार्थ्यांना स्थानिक पातळीवर दर्जेदार तांत्रिक शिक्षण उपलब्ध व्हावे या उद्देशाने लोकमान्य एज्युकेशन संस्थेच्या वतीने ‘लोकमान्य भवन, खानापूर’ येथे माजी आमदार विठ्ठलराव यशवंतराव चव्हाण पॉलिटेक्निक सुरू करण्यात आले असून यावर्षीच्या प्रवेशप्रक्रियेला सुरुवात झाली आहे. इच्छुक विद्यार्थ्यांनी या संधीचा लाभ घ्यावा, असे आवाहन प्राचार्य शिरीष एम. केरूर यांनी केले आहे.
संस्थेचे प्रमुख किरण ठाकूर यांच्या मार्गदर्शनाखाली मागील वर्षी सुरू झालेल्या या पॉलिटेक्निकला विद्यार्थ्यांचा उत्स्फूर्त प्रतिसाद लाभला आहे. ग्रामीण भागातील विद्यार्थ्यांना बाहेरगावी न जाता तांत्रिक शिक्षण घेता यावे, हा संस्थेचे प्रमुख किरण ठाकूर यांचा उद्देश असल्याचे बोलाविलेल्या पत्रकार परिषदेत सांगितले. यावेळी लोकमान्य एज्युकेशन संस्थेचे खजिनदार व समन्वयक डॉ. दत्तात्रय एन मिसाळे, संस्थेचे सेक्रेटरी सत्यव्रत्त व्ही नाईक उपस्थित होते.
प्राचार्य शिरीष केरूर यांनी दिलेल्या माहितीनुसार, यावर्षी पॉलिटेक्निकमध्ये खालील चार प्रमुख डिप्लोमा अभ्यासक्रमांची सोय करण्यात आली आहे –
कॉम्प्युटर सायन्स इंजिनिअरिंग
इलेक्ट्रॉनिक्स अँड कम्युनिकेशन
आर्टिफिशियल इंटेलिजन्स अँड मशीन लर्निंग
इलेक्ट्रिकल अँड इलेक्ट्रॉनिक्स
प्रत्येक विभागात 60 विद्यार्थ्यांना प्रवेश दिला जाणार असून, प्रत्येक शाखेतून तीन विद्यार्थ्यांना एसएनक्यू (SNQ) कोट्यातून प्रवेशाची संधी उपलब्ध आहे. एसएसएलसी उत्तीर्ण विद्यार्थी, पीयूसी उत्तीर्ण अथवा नापास विद्यार्थी, तसेच आयटीआय किंवा जीओसी विद्यार्थीही प्रवेशासाठी पात्र आहेत. संबंधित अभ्यासक्रमांसाठी आवश्यक शासकीय मान्यता प्राप्त झाल्याची माहितीही त्यांनी दिली.
तसेच दहावीत 90% टक्के किंवा त्यापेक्षा अधिक गुण मिळविणाऱ्या विद्यार्थ्यांना पाच हजार रुपयांची फी मधून सवलत देण्यात येणार आहे. याशिवाय आर्थिकदृष्ट्या दुर्बल विद्यार्थ्यांना त्यांच्या परिस्थितीनुसार फीमध्ये सवलत देण्याची विशेष योजना राबविण्यात येणार असल्याची सांगितले.
संस्थेचे सचिव सत्यव्रत्त व्ही. नाईक यांनी सांगितले की, खानापूर तालुक्यात तांत्रिक शिक्षणाची संस्था सुरू करण्याचे स्वप्न संस्थेचे प्रमुख किरण ठाकूर यांचे होते. हे स्वप्न साकार करण्यासाठी संस्था प्रयत्नशील असून, सध्या पॉलिटेक्निकचे दुसरे वर्ष सुरू आहे. पुढील काळात बी.ई. इंजिनिअरिंग कॉलेज सुरू करण्याचाही संस्थेचे प्रमुख किरण ठाकूर यांचा मानस असल्याचे त्यांनी नमूद केले.
संस्थेचे संचालक प्रकाश चव्हाण यांनी सांगितले की, संस्थेचे प्रमुख किरण ठाकूर यांच्या वडिलांनी, कै. बाबुराव ठाकूर यांनी स्वातंत्र्यपूर्व काळात खानापूर तालुका शैक्षणिकदृष्ट्या मागासलेला असल्याची जाणीव ठेवून तालुक्यात मराठी शाळांची स्थापना केली होती. त्यांच्याच पावलावर पाऊल ठेवत त्यांचे अपूर्ण स्वप्न पूर्ण करण्याच्या उद्देशाने किरण ठाकूर यांनी तालुक्यात हायस्कूल, महाविद्यालय तसेच आता तांत्रिक शिक्षणाचीही सुरुवात केली आहे. त्यांच्या या शैक्षणिक कार्याला सहकार्य करणे हे प्रत्येकाचे कर्तव्य असून सर्वांनी त्यांच्या पाठीशी खंबीरपणे उभे राहावे, असेही त्यांनी आवाहन केले.
संस्थेचे खजिनदार व समन्वयक डॉ. दत्तात्रय एन. मिसाळे यांनी सांगितले की, विद्यार्थ्यांना शिक्षणकर्जाची सुविधा उपलब्ध करून देण्यात आली आहे. तसेच फी भरण्यासाठी तीन हप्त्यांची (इन्स्टॉलमेंट) व्यवस्था करण्यात आली आहे. विद्यार्थ्यांसाठी वसतिगृहाची सोय करण्याचे कामही सुरू असून, लवकरच ती उपलब्ध होणार आहे.
तांत्रिक शिक्षणाच्या क्षेत्रात खानापूर तालुक्यासाठी ही महत्त्वाची पायरी ठरत असून, इच्छुक विद्यार्थ्यांनी लवकरात लवकर प्रवेश घेऊन आपली जागा निश्चित करावी, असे आवाहन संस्थेच्या वतीने करण्यात आले आहे.
ಖಾನಾಪುರದ ‘ಲೋಕಮಾನ್ಯ’ ಪಾಲಿಟೆಕ್ನಿಕ್ ಕಾಲೇಜನಲ್ಲಿ ಪ್ರವೇಶ ಪ್ರಾರಂಭ; ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ, SNQ ಕೋಟಾದಿಂದಲೂ ಅವಕಾಶ.
ಖಾನಾಪುರ : ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಮಟ್ಟದಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಲಭ್ಯವಾಗುವ ಉದ್ದೇಶದಿಂದ Lokmanya Education Society ವತಿಯಿಂದ ‘ಲೋಕಮಾನ್ಯ ಭವನ, ಖಾನಾಪುರ’ದಲ್ಲಿ ಮಾಜಿ ಶಾಸಕ ವಿಠ್ಠಲರಾವ್ ಯಶವಂತರಾವ್ ಚವ್ಹಾಣ ಪಾಲಿಟೆಕ್ನಿಕ್ ಆರಂಭಿಸಲಾಗಿದ್ದು, ಈ ವರ್ಷದ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಶಿರೀಷ್ ಎಂ. ಕೆರೂರ್ ಅವರು ಮನವಿ ಮಾಡಿದ್ದಾರೆ.
ಸಂಸ್ಥೆಯ ಮುಖ್ಯಸ್ಥ ಕಿರಣ ಠಾಕೂರ್ ಅವರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭವಾದ ಈ ಪಾಲಿಟೆಕ್ನಿಕ್ಗೆ ವಿದ್ಯಾರ್ಥಿಗಳಿಂದ ಉತ್ಸಾಹದ ಪ್ರತಿಕ್ರಿಯೆ ಲಭಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೊರಗಡೆ ಹೋಗದೆ ತಾಂತ್ರಿಕ ಶಿಕ್ಷಣ ಪಡೆಯಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದ್ದು, ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಹಾಗೂ ಸಂಯೋಜಕ ಡಾ. ದತ್ತಾತ್ರಯ ಎನ್. ಮಿಸಾಳೆ ಮತ್ತು ಕಾರ್ಯದರ್ಶಿ ಸತ್ಯವ್ರತ್ ವಿ. ನಾಯಕ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಶಿರೀಷ್ ಕೆರೂರ್ ಅವರು ನೀಡಿದ ಮಾಹಿತಿ ಪ್ರಕಾರ, ಈ ವರ್ಷ ಪಾಲಿಟೆಕ್ನಿಕ್ನಲ್ಲಿ ಕೆಳಗಿನ ನಾಲ್ಕು ಪ್ರಮುಖ ಡಿಪ್ಲೋಮಾ ಕೋರ್ಸ್ಗಳನ್ನು ಆರಂಭಿಸಲಾಗಿದೆ:
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್
ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್
ಪ್ರತಿ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಜೊತೆಗೆ, ಪ್ರತಿಯೊಂದು ವಿಭಾಗದಲ್ಲೂ 3 ವಿದ್ಯಾರ್ಥಿಗಳಿಗೆ ಎಸ್ಎನ್ಕ್ಯೂ (SNQ) ಕೋಟಾದಡಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣ ವಿದ್ಯಾರ್ಥಿಗಳು, ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣ ವಿದ್ಯಾರ್ಥಿಗಳು, ಹಾಗು ಐಟಿಐ ಅಥವಾ ಜಿಒಸಿ ವಿದ್ಯಾರ್ಥಿಗಳೂ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಸಂಬಂಧಿತ ಕೋರ್ಸ್ಗಳಿಗೆ ಅಗತ್ಯ ಸರ್ಕಾರಿ ಮಾನ್ಯತೆ ದೊರೆತಿದೆ ಎಂದು ಅವರು ತಿಳಿಸಿದರು.
ಇನ್ನು, 10 ನೇಯ ತರಗತಿಯಲ್ಲಿ 90% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ರೂ. 5,000 ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಪರಿಸ್ಥಿತಿಯನುಸಾರ ವಿಶೇಷ ಶುಲ್ಕ ಸಡಿಲಿಕೆ ಯೋಜನೆಯೂ ಜಾರಿಯಲ್ಲಿದೆ.
ಸಂಸ್ಥೆಯ ಕಾರ್ಯದರ್ಶಿ ಸತ್ಯವ್ರತ್ ವಿ. ನಾಯಕ್ ಅವರು, ಖಾನಾಪುರ ತಾಲ್ಲೂಕಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ಸಂಸ್ಥೆಯ ಮುಖ್ಯಸ್ಥ ಕಿರಣ ಠಾಕೂರ್ ಅವರ ಕನಸಾಗಿತ್ತು ಎಂದು ಹೇಳಿದರು. ಆ ಕನಸನ್ನು ಸಾಕಾರಗೊಳಿಸಲು ಸಂಸ್ಥೆ ಶ್ರಮಿಸುತ್ತಿದ್ದು, ಪ್ರಸ್ತುತ ಪಾಲಿಟೆಕ್ನಿಕ್ನ ಎರಡನೇ ವರ್ಷ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬಿ.ಇ. ಇಂಜಿನಿಯರಿಂಗ್ ಕಾಲೇಜು ಆರಂಭಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ಚವ್ಹಾಣ್ ಅವರು ಮಾತನಾಡುತ್ತಾ, ಸಂಸ್ಥೆಯ ಮುಖ್ಯಸ್ಥ ಕಿರಣ್ ಠಾಕೂರ್ ಅವರ ತಂದೆಯಾದ ಸ್ವರ್ಗೀಯ ಬಾಬುರಾವ್ ಠಾಕೂರ್ ಅವರು ಸ್ವಾತಂತ್ರ್ಯ ಪೂರ್ವಕಾಲದಲ್ಲೇ ಖಾನಾಪೂರ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಮನಗಂಡು ಇಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಿದ್ದರು ಎಂದು ಹೇಳಿದರು.ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿ, ಅವರ ಅಪೂರ್ಣ ಕನಸನ್ನು ನನಸು ಮಾಡುವ ಉದ್ದೇಶದಿಂದ ಕಿರಣ್ ಠಾಕೂರ್ ಅವರು ತಾಲ್ಲೂಕಿನಲ್ಲಿ ಹೈಸ್ಕೂಲ್, ಮಹಾವಿದ್ಯಾಲಯ ಹಾಗೂ ಇದೀಗ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿ, ಅವರ ಅಪೂರ್ಣ ಕನಸನ್ನು ನನಸು ಮಾಡುವ ಉದ್ದೇಶದಿಂದ ಕಿರಣ್ ಠಾಕೂರ್ ಅವರು ತಾಲ್ಲೂಕಿನಲ್ಲಿ ಹೈಸ್ಕೂಲ್, ಮಹಾವಿದ್ಯಾಲಯ ಹಾಗೂ ಇದೀಗ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಅವರ ಈ ಶೈಕ್ಷಣಿಕ ಕಾರ್ಯಕ್ಕೆ ಸಹಕಾರ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ಅವರ ಬೆಂಬಲವಾಗಿ ದೃಢವಾಗಿ ನಿಲ್ಲಬೇಕು ಎಂದು ಅವರು ಮನವಿ ಮಾಡಿದರು.
ಖಜಾಂಚಿ ಹಾಗೂ ಸಂಯೋಜಕ ಡಾ. ದತ್ತಾತ್ರಯ ಎನ್. ಮಿಸಾಳೆ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಶುಲ್ಕ ಪಾವತಿಗೆ ಮೂರು ಹಂತಗಳಲ್ಲಿ (ಇನ್ಸ್ಟಾಲ್ಮೆಂಟ್) ಹಣ ಪಾವತಿಸುವ ವ್ಯವಸ್ಥೆಯೂ ಇದೆ. ವಿದ್ಯಾರ್ಥಿಗಳಿಗಾಗಿ ವಸತಿ ಗೃಹ ವ್ಯವಸ್ಥೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ತಿಳಿಸಿದರು.
ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಖಾನಾಪುರ ತಾಲ್ಲೂಕಿಗೆ ಇದು ಮಹತ್ವದ ಹೆಜ್ಜೆಯಾಗಿದ್ದು, ಆಸಕ್ತ ವಿದ್ಯಾರ್ಥಿಗಳು ತಕ್ಷಣವೇ ಪ್ರವೇಶ ಪಡೆದು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ವತಿಯಿಂದ ಮನವಿ ಮಾಡಲಾಗಿದೆ.


